RNI NO. KARKAN/2006/27779|Wednesday, January 14, 2026
You are here: Home » breaking news » ಗೋಕಾಕ:ವಿದ್ಯಾರ್ಥಿ ಜೀವನದಲ್ಲಿ ಯಶಸ್ಸು ಅಮೂಲ್ಯವಾಗಿದ್ದು : ಬಿ.ಆರ್.ಉಮರಾಣಿ

ಗೋಕಾಕ:ವಿದ್ಯಾರ್ಥಿ ಜೀವನದಲ್ಲಿ ಯಶಸ್ಸು ಅಮೂಲ್ಯವಾಗಿದ್ದು : ಬಿ.ಆರ್.ಉಮರಾಣಿ 

ವಿದ್ಯಾರ್ಥಿ ಜೀವನದಲ್ಲಿ ಯಶಸ್ಸು ಅಮೂಲ್ಯವಾಗಿದ್ದು : ಬಿ.ಆರ್.ಉಮರಾಣಿ

ಗೋಕಾಕ ಅ 3 : ವಿದ್ಯಾರ್ಥಿ ಜೀವನದಲ್ಲಿ ಯಶಸ್ಸು ಅಮೂಲ್ಯವಾಗಿದ್ದು, ಅದನ್ನು ಕಠಿಣ ಪರಿಶ್ರಮದಿಂದ ಹಂತ,ಹಂತವಾಗಿ ತಮ್ಮದಾಗಿಸಿಕೊಳ್ಳಬೇಕು ಎಂದು ನಿಡಸೋಸಿಯ ಎಸ್.ಜೆ.ಪಿ.ಎನ್ ಪಾಲಿಟೆಕ್ನಿಕ್ ನ ಪ್ರಾಚಾರ್ಯ ಬಿ.ಆರ.ಉಮರಾಣಿ ಹೇಳಿದರು.
ಮಂಗಳವಾರದಂದು ನಗರದ ಶ್ರೀ ಲಕ್ಷ್ಮಣರಾವ ಜಾರಕಿಹೊಳಿ ಪಾಲಿಟೆಕ್ನಿಕ್ ನ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡುತ್ತಿದ್ದರು.
ವಿದ್ಯಾರ್ಥಿಗಳು ಸಾಧನೆಯ ಮನೋಭಾವವನ್ನು ಬೆಳೆಸಿಕೊಳ್ಳಬೇಕು.ಸಾಧಕರು ನಮಗೆ ಪ್ರೇರಣೆಯಾಗಬೇಕು. ಯಶಸ್ವಿ ಬದುಕಿನಲ್ಲಿ ಪ್ರಾಮಾಣಿಕತೆ ಮಹತ್ತರ ಪಾತ್ರವಹಿಸುತ್ತದೆ. ಇಂದಿನ ತಾಂತ್ರಿಕ ಯುಗದಲ್ಲಿ ವಿದ್ಯಾರ್ಥಿಗಳು ಅವಕಾಶಗಳ ಸದುಪಯೋಗದಿಂದ ಪ್ರತಿಭಾವಂತರರಾಗಿ ತಮ್ಮ ಬದುಕನ್ನು ರೂಪಿಕೊಳ್ಳುವಂತೆ ಕರೆ ನೀಡಿದರು.
ಕಾರ್ಯಕ್ರಮವನ್ನು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸನತ್ ಜಾರಕಿಹೊಳಿ ಉದ್ಘಾಟಿಸಿದರು.
ವೇದಿಕೆಯಲ್ಲಿ ಆಡಳಿತಾಧಿಕಾರಿ ಬಿ.ಕೆ.ಕುಲಕರ್ಣಿ, ಪ್ರಾಚಾರ್ಯ ಎಚ್.ಎಸ್.ಅಡಿಬಟ್ಟಿ, ಉಪನ್ಯಾಸಕ ಪಿ.ಡಿ.ಪಾಂಚಾಳ ಇದ್ದರು.
ಉಪನ್ಯಾಸಕಿ ಎಸ್.ಎಂ ಕಬನೂರಿ ಸ್ವಾಗತಿಸಿದರು, ವಾಯ್ ಬಿ.ಪೂಜೇರಿ ವಂದಿಸಿದರು.

Related posts: