RNI NO. KARKAN/2006/27779|Sunday, July 13, 2025
You are here: Home » breaking news » ಗೋಕಾಕ:ಶ್ರೀಮತಿ ಸಮಿಯಾ ಖಾಜಿ ಇವರಿಗೆ 2023-24 ನೇ ಸಾಲಿನ ತಾಲೂಕು ಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ

ಗೋಕಾಕ:ಶ್ರೀಮತಿ ಸಮಿಯಾ ಖಾಜಿ ಇವರಿಗೆ 2023-24 ನೇ ಸಾಲಿನ ತಾಲೂಕು ಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ 

ಶ್ರೀಮತಿ ಸಮಿಯಾ ಖಾಜಿ ಇವರಿಗೆ 2023-24 ನೇ ಸಾಲಿನ ತಾಲೂಕು ಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ

ಗೋಕಾಕ ಸೆ 5 : ಇಲ್ಲಿನ ಪಾತಿಮಾ ಹೆಣ್ಣು ಮಕ್ಕಳ ಪ್ರೌಢಶಾಲೆಯ ಗಣಿತ ಶಿಕ್ಷಕಿ ಶ್ರೀಮತಿ ಸಮಿಯಾ ಖಾಜಿ ಇವರಿಗೆ 2023-24 ನೇ ಸಾಲಿನ ತಾಲೂಕು ಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಲಭಿಸಿದೆ.
ಮಂಗಳವಾರದಂದು ನಗರದಲ್ಲಿ ಜರುಗಿದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಮತ್ತು ಬಿಇಒ ಜಿ.ಬಿ.ಬಳಗಾರ ಅವರು ಪ್ರಶಸ್ತಿ ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ ಕೆ.ಮಂಜುನಾಥ್, ಜಿಪಂ ಮಾಜಿ ಸದಸ್ಯರುಗಳಾದ ಟಿ.ಆರ್.ಕಾಗಲ್, ಮಡೆಪ್ಪ ತೋಳಿನವರ, ತೋಟಗಾರಿಕೆ ನಿರ್ದೇಶಕ ಎಂ.ಎಂ.ಜನ್ಮಟ್ಟಿ, ಕೃಷಿ ಅಧಿಕಾರಿ ಎಂ.ಎಂ ನಧಾಫ್, ಡಾ.ಮೋಹನ್ ಕಮತ, ಹೆಸ್ಕಾಂನ ಎಸ್..ಪಿ ವರಾಳೆ, ಬಿಸಿಯೂಟ ಅಧಿಕಾರಿ ಎಂ.ಬಿ.ಮಲಬನ್ನವರ, ಶಿಶು ಅಭಿವೃದ್ಧಿ ಅಧಿಕಾರಿ ಡಿ.ಎಸ್.ಕುಡವಕ್ಕಲಗಿ ಉಪಸ್ಥಿತರಿದ್ದರು

Related posts: