RNI NO. KARKAN/2006/27779|Saturday, February 14, 2026
You are here: Home » breaking news » ಗೋಕಾಕ:ಹಿರೇಕೋಡಿ ಜೈನ ಮುನಿಗಳ ಹತ್ಯೆಗೆ ಖಂಡನೆ; ಗೋಕಾಕದಲ್ಲಿ ಜೈನ ಸಮಾಜದಿಂದ ಮೌನ ಪ್ರತಿಭಟನೆ

ಗೋಕಾಕ:ಹಿರೇಕೋಡಿ ಜೈನ ಮುನಿಗಳ ಹತ್ಯೆಗೆ ಖಂಡನೆ; ಗೋಕಾಕದಲ್ಲಿ ಜೈನ ಸಮಾಜದಿಂದ ಮೌನ ಪ್ರತಿಭಟನೆ 

ಹಿರೇಕೋಡಿ ಜೈನ ಮುನಿಗಳ ಹತ್ಯೆಗೆ ಖಂಡನೆ; ಗೋಕಾಕದಲ್ಲಿ ಜೈನ ಸಮಾಜದಿಂದ ಮೌನ ಪ್ರತಿಭಟನೆ

ಗೋಕಾಕ ಜು 12 : ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದ ನಂದಿ ಪರ್ವತದ ಆಶ್ರಮದ 108 ಶ್ರೀ ಕಾಮಕುಮಾರ ನಂದಿ ಮುನಿ ಮಹಾರಾಜರ ಹತ್ಯೆಯನ್ನು ಖಂಡಿಸಿ ಬುಧವಾರದಂದು ನಗರದ ದಿಗಂಬರ ಜೈನ ಸಮಾಜದ ವತಿಯಿಂದ ಮೌನ ಪ್ರತಿಭಟನೆ ನಡೆಸಲಾಯಿತು.
ನಗರದ ಜೈನ ಬಸ್ತಿ1008 ಶ್ರೀ ಸುಪಾರ್ಶ್ವನಾಥ ದಿಗಂಬರ ಜೈನ ಮಂದಿರದಿಂದ ಮೌನ ಮೆರವಣಿಗೆ ಆರಂಭಿಸಿ, ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮಿನಿ ವಿಧಾನಸೌಧಕ್ಕೆ ಆಗಮಿಸಿ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ದೇಶ, ಸಮಾಜದ ಒಳಿತಿಗಾಗಿ ಬದುಕುತ್ತಿದ್ದ ಜೈನಮುನಿಗಳ ಹತ್ಯೆ ಹೇಯ444ವಾದದ್ದು. ಮುಂದಿನ ದಿನಗಳಲ್ಲಿ ತ್ಯಾಗಿಗಳು, ಮುನಿಗಳು ಸೇರಿದಂತೆ ಎಲ್ಲ ಧರ್ಮದ ಗುರುಗಳಿಗೆ ಸರ್ಕಾರ ಸೂಕ್ತ ಭದ್ರತೆ ಒದಗಿಸಬೇಕು. ಇಡೀ ಮನಕುಲದಲ್ಲಿರುವ ಎಲ್ಲ ಸಾಧು ಸಂತರು ಈ ಘಟನೆಯಿಂದ ಆತಂಕಕ್ಕೋಳಗಾಗಿದ್ದಾರೆ.ಎಲ್ಲ ಸಾಧು ಸಂತರ ಜೀವ ರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯವೂ ಕೂಡಾ ಆದ್ದರಿಂದ ಹಂತಕರ ಮೇಲೆ ಕಾನೂನಾತ್ಮಕ ಕಾರ್ಯಚರಣೆಯನ್ನು ನಡೆಸಿ ಹಂತಕರಿಗೆ ಅತ್ಯಂತ ಕಠಿಣ ಗಲ್ಲುಶಿಕ್ಷೆಯನ್ನು ವಿಧಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು, ಸಮಾಜದ ಅಧ್ಯಕ್ಷ ಶೀತಲ್ ಡೊಂಗರೆ, ಧನ್ಯಕುಮಾರ ಕಿತ್ತೂರ, ರಾಹುಲ್ ಕಿತ್ತೂರ, ಭೂಷಣ ಕಬ್ಬೂರ, ಪ್ರದೀಪ ಮೆಳವಂಕಿ, ಪ್ರಮೋದ್ ಅಂಗಡಿ, ಶ್ರೀಕಾಂತ್ ಮೋಹರೆ, ರಾಜು ಮುನ್ನವಳ್ಳಿ, ಅಶೋಕ ಪೂಜಾರಿ, ಓಂಕಾರಮಲ್ ರಾಠೋಡ, ನಂದು ಪರಮಾರ, ಶಶಿ ದೇಮಶೆಟ್ಟಿ ಸೇರಿದಂತೆ ನೂರಾರು ಜನ ಪಾಲ್ಗೊಂಡಿದ್ದರು.

Related posts: