ರಾಯಬಾಗ:ಬೈಕ್ ಅಡ್ಡಗಟ್ಟಿ ಹಾಡುಹಗಲೇ ಮಚ್ಚಿನಿಂದ ಕೊಚ್ಚಿ ಕೊಲೆ : ದ್ಯಾವಾಪೂರಹಟ್ಟಿ ಕ್ರಾಸ್ ಬಳಿ ಘಟನೆ
ಬೈಕ್ ಅಡ್ಡಗಟ್ಟಿ ಹಾಡುಹಗಲೇ ಮಚ್ಚಿನಿಂದ ಕೊಚ್ಚಿ ಕೊಲೆ : ದ್ಯಾವಾಪೂರಹಟ್ಟಿ ಕ್ರಾಸ್ ಬಳಿ ಘಟನೆ
ರಾಯಬಾಗ ಅ 16: ಬೈಕ್ ಅಡ್ಡಗಟ್ಟಿ ಹಾಡುಹಗಲೇ ಮಚ್ಚಿನಿಂದ ಕೊಚ್ಚಿ ವ್ಯಕ್ತಿಯೊರ್ವನನ್ನು ಕೊಲೆ ಘಟನೆ ರಾಯಬಾಗ ತಾಲೂಕಿನ ದ್ಯಾವಾಪೂರಹಟ್ಟಿ ಕ್ರಾಸ್ ಬಳಿ ನಡೆದಿದೆ
ಯಲ್ಲಪ್ಪ ಗಾಯಕವಾಡ (೩೨) ಹತ್ಯೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ ಜಮೀನು ವಿವಾದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿದೆ ಎಂದು ಶಂಕಿಸಲಾಗಿದೆ
ದ್ಯಾವಾಪೂರಹಟ್ಟಿ ಕ್ರಾಸ್ ಬಳಿ ಕೊಲೆಗೈದು ಆರೋಪಿಗಳು ಪರಾರಿಯಾಗಿದ್ದಾರೆ ಗಾಯಾಳುವನ್ನು ಗೋಕಾಕ ಪಟ್ಟಣದ ಖಾಸಗಿ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯದಲ್ಲಿಯೇ ಸಾವನ್ನಪ್ಪಿದಾನೆ
ಕೈ, ಹಣೆ, ಕಾಲು, ಹೊಟ್ಟೆ ಸೇರಿದಂತೆ ದೇಹದ ವಿವಿಧ ಭಾಗದಲ್ಲಿ ಮಚ್ಚು, ರಾಡ್, ಇನ್ನಿತರ ಹರಿತ ಆಯುಧದಿಂದ ೮-೧೦ ಕಡೆಗೆ ಇರಿದು ದುಷ್ಕರ್ಮಿಗಳು ಫರಾರಿಯಾಗಿದ್ದಾರೆ ೫-೬ ಜನರ ತಂಡದಿಂದ ನಡೆದ ಈ ಹತ್ಯೆಯಿಂದ ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ
ಸ್ಥಳಕ್ಕೆ ಬೇಟ್ಟಿ ನೀಡಿರುವ ರಾಯಬಾಗ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗೆ ಶೋಧ ನಡೆಸಿದ್ದಾರೆ