RNI NO. KARKAN/2006/27779|Saturday, August 2, 2025
You are here: Home » breaking news » ಗೋಕಾಕ:ಬೆಳಗಾವಿಯಲ್ಲಿ BJPಗೆ ಶಾಕ್ ನೀಡಿದ ಮಾಸ್ಟರ್ ಮೈಂಡ್ ; ತಮ್ಮನ್ನು ಸೋಲಿಸಲು ಬಂದವ್ರ ವಿರುದ್ಧ ಸೇಡು ತೀರಿಸಿಕೊಂಡ ಸತೀಶ್..!

ಗೋಕಾಕ:ಬೆಳಗಾವಿಯಲ್ಲಿ BJPಗೆ ಶಾಕ್ ನೀಡಿದ ಮಾಸ್ಟರ್ ಮೈಂಡ್ ; ತಮ್ಮನ್ನು ಸೋಲಿಸಲು ಬಂದವ್ರ ವಿರುದ್ಧ ಸೇಡು ತೀರಿಸಿಕೊಂಡ ಸತೀಶ್..! 

ಬೆಳಗಾವಿಯಲ್ಲಿ BJPಗೆ ಶಾಕ್ ನೀಡಿದ ಮಾಸ್ಟರ್ ಮೈಂಡ್ ; ತಮ್ಮನ್ನು ಸೋಲಿಸಲು ಬಂದವ್ರ ವಿರುದ್ಧ ಸೇಡು ತೀರಿಸಿಕೊಂಡ ಸತೀಶ್..!

ಗೋಕಾಕ ಮೇ 14 : ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಬೆಳಗಾವಿ ಬಿಜೆಪಿಗೆ ಸತೀಶ್ ಜಾರಕಿಹೊಳಿ ಮಾಸ್ಟರ್ ಸ್ಟ್ರೋಕ್ ಕೊಟ್ಟಿದ್ದಾರೆ. ಸತೀಶ್ ಜಾರಕಿಹೋಳಿ ತಂತ್ರಗಾರಿಕೆಯಿಂದ 18 ಕ್ಷೇತ್ರಗಳ ಪೈಕಿ 11ರಲ್ಲಿ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ.
ಅಹಿಂದ, ಲಿಂಗಾಯತ ಒಗ್ಗಟ್ಟಿನ ಸೂತ್ರ ಬಳಸಿ ಬಿಜೆಪಿಯನ್ನು ಕಟ್ಟಿ ಹಾಕುವಲ್ಲಿ ಸಾಹುಕಾರ ಯಶಸ್ವಿಯಾಗಿದ್ದಾರೆ.ತಮ್ಮ ವಿರೋಧಿಗಳಿಗೆ ಅವರದ್ದೇ ಕ್ಷೇತ್ರದಲ್ಲಿ ಸೋಲಿನ ರುಚಿ ಉಣಿಸಿ ಪಾರುಪತ್ಯ ಮೆರೆದಿದ್ದಾರೆ. ಕುಡಚಿಯಲ್ಲಿ ಪಿ.ರಾಜೀವ್, ಸವದತ್ತಿಯಲ್ಲಿ ರತ್ನಾ ಮಾಮನಿಗೆ ಸೋಲಿನ ರುಚಿ ತೋರಿಸಿದ್ದಾರೆ. ತಮ್ಮ ಶಿಷ್ಯರನ್ನು ಕಣಕ್ಕಿಳಿಸಿ ಇಬ್ಬರನ್ನೂ ಸೋಲಿಸಿ ಸತೀಶ್ ಜಾರಕಿಹೋಳಿ ಸೇಡು ತೀರಿಸಿಕೊಂಡಿದ್ದಾರೆ. ಕುಡುಚಿಯಲ್ಲಿ ಮಹೇಂದ್ರ ಕಾಳಪ್ಪ ಹಾಗೂ ಸವದತ್ತಿ ಯಲ್ಲಮ್ಮ ವಿಧಾನಸಭಾ ಕ್ಷೇತ್ರದಿಂದ ವಿಶ್ವಾಸ್ ವಸಂತ್ ವೈದ್ಯ ಅವರನ್ನು ಕಣಕ್ಕೆ ಇಳಿಸಿ, ಗೆಲ್ಲಿಸಿಕೊಟ್ಟಿದ್ದಾರೆ.

ಈ ಮೂಲಕ ಶಶಿಕಲಾ ಜೋಲ್ಲೆ, ಬಸನಗೌಡ ಪಾಟೀಲ್ ಯತ್ನಾಳ್, ಅಭಯ್ ಪಾಟೀಲ್​​ಗೂ ಠಕ್ಕರ್ ಕೊಟ್ಟಿದ್ದಾರೆ. ತಮ್ಮನ್ನು ಸೋಲಿಸಲು ಬಂದವರಿಗೆ ಸೋಲಿನ ಬಿಸಿ ಮುಟ್ಟಿಸಿ ಶಕ್ತಿ ಪ್ರದರ್ಶಿಸಿದ್ದಾರೆ. ಈ ಮೂಲಕ ಯಾಕಂದ್ರೆ ಯಮಕನಮರಡಿ ಕ್ಷೇತ್ರದಲ್ಲಿ ಸತೀಶ್ ಕಟ್ಟಿಹಾಕಲು ಮಾಡಿದ್ದ ಪ್ಲಾನ್ ಅಟ್ಟರ್ ಫ್ಲಾಪ್​ ಆಗಿದೆ. ವಿರೋಧಿಗಳಿಗೆ ಚಳಿ ಬಿಡಿಸಿ ಸತೀಶ್ ಜಾರಕಿಹೋಳಿ ಗೆದ್ದುಬೀಗಿದ್ದಾರೆ.

Related posts: