RNI NO. KARKAN/2006/27779|Thursday, October 16, 2025
You are here: Home » breaking news » ಬೆಳಗಾವಿ:ಕಾಂಗ್ರೆಸ್ 11 , ಬಿಜೆಪಿ 7 ಸ್ಥಾನಗಳಲ್ಲಿ ಗೆಲುವು

ಬೆಳಗಾವಿ:ಕಾಂಗ್ರೆಸ್ 11 , ಬಿಜೆಪಿ 7 ಸ್ಥಾನಗಳಲ್ಲಿ ಗೆಲುವು 

ಕಾಂಗ್ರೆಸ್ 11 , ಬಿಜೆಪಿ 7 ಸ್ಥಾನಗಳಲ್ಲಿ ಗೆಲುವು

ಬೆಳಗಾವಿ ಮೇ 13 : ಅತ್ಯಂತ ಕುತೂಹಲ ಕರೆಳಿಸಿದ್ದ ಬೆಳಗಾವಿ ಜಿಲ್ಲೆಯ 18 ಕ್ಷೇತ್ರಗಳ ಫಲಿತಾಂಶ ಹೊರಬಿದಿದ್ದು, ಕಾಂಗ್ರೆಸ್ ಪಕ್ಷ 11 ಸ್ಥಾನಗಳಲ್ಲಿ ಗೆಲುವಿನ ನಗೆ ಬೀರಿದ್ದು, ಬಿಜೆಪಿ ಪಕ್ಷ 7 ಸ್ಥಾನಗಳಲ್ಲಿ ತೃಪ್ತಿ ಪಡೆದುಕೊಳ್ಳಬೇಕಾಗಿದೆ.
ಕಾಗವಾಡ ಮತಕ್ಷೇತ್ರದಿಂದ ರಾಜು ಕಾಗೆ, ಯಮಕನಮರಡಿ ಕ್ಷೇತ್ರದಿಂದ ಸತೀಶ ಜಾರಕಿಹೊಳಿ,ಬೆಳಗಾವಿ ಗ್ರಾಮೀಣದಿಂದ ಲಕ್ಷ್ಮೀ ಹೆಬ್ಬಾಳಕರ, ಚಿಕ್ಕೋಡಿ ಸದಲಗಾ ಕ್ಷೇತ್ರದಿಂದ ಗಣೇಶ್ ಹುಕ್ಕೇರಿ, ಕುಡಚಿ ಕ್ಷೇತ್ರದಿಂದ ಮಹೇಶ್ ತಮ್ಮಣ್ಣವರ, ಬೆಳಗಾವಿ ಉತ್ತರದಿಂದ ರಾಜು ಸೇಠ್, ಅಥಣಿಯಿಂದ ಲಕ್ಷ್ಮಣ ಸವದಿ, ಬೈಲಹೊಂಗಲದಿಂದ ಮಹಾಂತೇಶ ಕೌಜಲಗಿ ಹಾಗೂ ರಾಮದುರ್ಗದಿಂದ ಅಶೋಕ್ ಪಟ್ಟಣ , ಸವದತ್ತಿಯಿಂದ ವಿಶ್ವಾಸ ವೈದ್ಯ ಅವರು ಗೆಲುವಿನ ನಗೆ ಬೀರಿ, ಬೆಳಗಾವಿಯಲ್ಲಿ ಕಾಂಗ್ರೆಸ್ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೆ . ನಿಪ್ಪಾಣಿ ಮತಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಶಶಿಕಲಾ ಜೋಲ್ಲೆ, ಹುಕ್ಕೇರಿ ಮತಕ್ಷೇತ್ರದಿಂದ ನಿಖಿಲ್ ಕತ್ತಿ, ಅರಭಾವಿಯಿಂದ ಬಾಲಚಂದ್ರ ಜಾರಕಿಹೊಳಿ , ಖಾನಾಪುರದಿಂದ ವಿಠಲ ಹಲಗೇಕರ, ರಾಯಬಾಗದಿಂದ ದುರ್ಯೋಧನ ಐಹೊಳೆ, ಗೋಕಾಕದಿಂದ ರಮೇಶ ಜಾರಕಿಹೊಳಿ, ಬೆಳಗಾವಿ ದಕ್ಷಿಣದಿಂದ ಅಭಯ ಪಾಟೀಲ ಜಯ ಸಾಧಿಸಿದ್ದಾರೆ.

Related posts: