RNI NO. KARKAN/2006/27779|Wednesday, October 15, 2025
You are here: Home » breaking news » ಮೂಡಲಗಿ:ಶಾಸಕ ಬಾಲಚಂದ್ರ ಜಾರಕಿಹೊಳಿ 35.69 ಕೋಟಿ ರೂ. ಆಸ್ತಿ ಒಡೆಯ

ಮೂಡಲಗಿ:ಶಾಸಕ ಬಾಲಚಂದ್ರ ಜಾರಕಿಹೊಳಿ 35.69 ಕೋಟಿ ರೂ. ಆಸ್ತಿ ಒಡೆಯ 

ಶಾಸಕ ಬಾಲಚಂದ್ರ ಜಾರಕಿಹೊಳಿ 35.69 ಕೋಟಿ ರೂ. ಆಸ್ತಿ ಒಡೆಯ

ಮೂಡಲಗಿ : ಅರಭಾವಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ತಮ್ಮ ಸಲ್ಲಿಸಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಒಟ್ಟು 35,69,92,186 ರೂ.ಗಳ ಒಡೆಯರಾಗಿದ್ದು, ಇವರ ಹೆಸರಿನಲ್ಲಿ ಯಾವುದೇ ಸಾಲವಿಲ್ಲ.
ಬಾಲಚಂದ್ರ ಜಾರಕಿಹೊಳಿ ಬಳಿ 8,55,777 ರೂ. ನಗದು ಹಣ ಇದೆ. 1.50 ಕೋಟಿ ರೂ.ಗಳ ಎಫ್.ಡಿ ಇದೆ. ಉಳಿತಾಯ ಖಾತೆಗಳಲ್ಲಿ 62,15,688 ರೂ. ಜಮಾ ಇದೆ. 34,45,541 ರೂ ಎನ್‍ಎಸ್‍ಎಸ್ ಪೋಸ್ಟಲ್ ಸೇವಿಂಗ್ಸ್ ಇನ್ಸೂರನ್ಸ್ ಇದ್ದು, 10,97,862 ರೂ. ಮೌಲ್ಯದ ಹುಂಡೈ ಐ20 ಅಸ್ಟಾ ಕಾರ್ ಹೊಂದಿದ್ದಾರೆ. 92,57,810 ರೂ. ಮೌಲ್ಯದ 1510 ಗ್ರಾಂ ಚಿನ್ನವಿದ್ದರೆ, 8,14,100 ರೂ. ಮೌಲ್ಯದ 10 ಕೆಜಿ ಬೆಳ್ಳಿ ಇದೆ. 31,13,85,052 ರೂ. ಮೌಲ್ಯದ ಕೃಷಿ, ಕೃಷಿಯೇತರ ಭೂಮಿ ಹಾಗೂ ವಾಸಿಸುವ ಮನೆ ಸೇರಿದೆ. ಬಾಲಚಂದ್ರ ಜಾರಕಿಹೊಳಿ ಅವರು 1,29,30,703 ರೂ.ಗಳನ್ನು ಬೇರೆಯವರಿಗೆ ಸಾಲವನ್ನಾಗಿ ನೀಡಿದ್ದಾರೆ.
ಕಳೆದ 2018 ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಚುನಾವಣಾಧಿಕಾರಿಗಳಿಗೆ ಸಲ್ಲಿಸಿದ ಆಸ್ತಿ ವಿವರ ಗಮನಿಸಿದರೆ ಈ ಬಾರಿ ಬಾಲಚಂದ್ರ ಜಾರಕಿಹೊಳಿ ಅವರ ಆಸ್ತಿಯಲ್ಲಿ ಏರಿಕೆ ಕಂಡುಬಂದಿದೆ. ಕಳೆದ ಚುನಾವಣೆಯಲ್ಲಿ 19,35,70,979 ರೂ.ಗಳ ಆಸ್ತಿಯನ್ನು ತೋರಿಸಿದ್ದು ಈ ಸಲ 35,69,92,186 ರೂ. ಸಲ್ಲಿಸಿದ್ದಾರೆ. ಚರಾಸ್ತಿ ಮತ್ತು ಸ್ಥಿರಾಸ್ತಿಯಲ್ಲಿ ಯಾವುದೇ ಬದಲಾವಣೆಯಾಗದಿದ್ದರೂ, ಈಗಿನ ಮಾರುಕಟ್ಟೆ ಬೆಲೆ ಹೆಚ್ಚಳವಾಗಿದ್ದರಿಂದ ಇವರ ಆಸ್ತಿ ಮೌಲ್ಯ 16,34,21,207 ರೂ. ಹೆಚ್ಚಳವಾದಂತಾಗಿದೆ.

Related posts: