ಗೋಕಾಕ:ಕಾರು ಟಿಪ್ಪರ ಡಿಕ್ಕಿ ನಗರದ ಇಬ್ಬರು ಯುವಕರು ಸ್ಥಳದಲ್ಲೇ ಸಾವು, ಒಬ್ಬನಿಗೆ ಗಂಭೀರ ಗಾಯ : ಸಿಂದಗಿ ಬಳಿ ಘಟನೆ

ಕಾರು ಟಿಪ್ಪರ ಡಿಕ್ಕಿ ನಗರದ ಇಬ್ಬರು ಯುವಕರು ಸ್ಥಳದಲ್ಲೇ ಸಾವು, ಒಬ್ಬನಿಗೆ ಗಂಭೀರ ಗಾಯ : ಸಿಂದಗಿ ಬಳಿ ಘಟನೆ
ಗೋಕಾಕ ಡಿ 15 : ಕಾರು ಟಿಪ್ಪರ ಮುಖಾಮುಖಿ ಡಿಕ್ಕಿಯಾದ ಪರಿಣಾಮ ನಗರದ ಇಬ್ಬರು ಯುವಕರು ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಕಲಬುರ್ಗಿ ಜಿಲ್ಲೆಯ ಸಿಂದಗಿ ಹೆದ್ದಾರಿಯಲ್ಲಿ ಬೆಳಗಿನ ಜಾವ 2:30 ಸುಮಾರಿಗೆ ಜರುಗಿದೆ.
ಥೈಲ್ಯಾಂಡ್ ಪ್ರವಾಸ ಮುಗಿಸಿ ಹೈದರಾಬಾದ್ ನಿಂದ ಗೋಕಾಕ ನಗರಕ್ಕೆ ಬರುತ್ತಿರುವಾಗ ಈ ದುರ್ಘಟನೆ ಸಂಭವಿಸಿದ್ದು, ಇಲ್ಲಿನ ವಿವೇಕಾನಂದ ನಗರದ ನಿವಾಸಿ ನಾಗರಾಜ ಯದವನ್ನವರ (33), ಮತ್ತು ವಿದ್ಯಾ ನಗರದ ಸಂಜು ಹಿಟ್ಟಲಗೌಡರ (25) ಎಂಬುವವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಇನ್ನೋರ್ವ ಯುವಕ ಆಸೀಫ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದು ಸಿಂದಗಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.