ಘಟಪ್ರಭಾ:ಮೊಹರಂ ಹಬ್ಬವು ಹಿಂದು ಮತ್ತು ಮುಸ್ಲೀಂ ಭಾವೈಕ್ಯತೆಯ ಸಂದೇಶ ಸಾರುವ ಹಬ್ಬವಾಗಿದೆ : ಸಿಪಿಐ ಬ್ಯಾಕೂಡ
ಮೊಹರಂ ಹಬ್ಬವು ಹಿಂದು ಮತ್ತು ಮುಸ್ಲೀಂ ಭಾವೈಕ್ಯತೆಯ ಸಂದೇಶ ಸಾರುವ ಹಬ್ಬವಾಗಿದೆ : ಸಿಪಿಐ ಬ್ಯಾಕೂಡ
ನಮ್ಮ ಬೆಳಗಾವಿ ಇ – ವಾರ್ತೆ, ಘಟಪ್ರಭಾ ಅ 6 :
ಮೊಹರಂ ಹಬ್ಬವು ಹಿಂದು ಮತ್ತು ಮುಸ್ಲೀಂ ಭಾವೈಕ್ಯತೆಯ ಸಂದೇಶ ಸಾರುವ ಹಬ್ಬವಾಗಿದೆ ಎಂದು ಸಿಪಿಐ ಶ್ರೀಶೈಲ ಬ್ಯಾಕೂಡ ಹೇಳಿದರು.
ಅವರು ಶನಿವಾರದಂದು ಘಟಪ್ರಭಾ ಪೊಲೀಸ ಠಾಣೆಯಲ್ಲಿ ಮೊಹರಂ ಹಬ್ಬದ ನಿಮಿತ್ಯ ಕರೆಯಲಾದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಈ ಹಬ್ಬವು ಎಲ್ಲಾ ಧರ್ಮದವರು ಕೂಡಿಕೂಂಡು ಮಾಡುವ ಹಬ್ಬದವಾಗಿದೆ, ಮೊಹರಂ ಹಬ್ಬವನ್ನು ಎಲ್ಲಾ ಸಮಾಜ ಬಾಂಧವರು ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಸ್ನೇಹ ಸೌಹಾರ್ದತೆಯಿಂದ ಆಚರಿಸಿ. ಪಂಜೆ ಹಾಗೂ ತಾಬೂತಗಳ ಮೆರವಣಿಯಲ್ಲಿ ಅಹೀತರಕರ ಘಟನೆ ನಡೆಯದಂತೆ ಎಚ್ಚರಿಕೆಯಿಂದ ಹಬ್ಬವನ್ನು ಆಚರಿಸಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಘಟಪ್ರಭಾ ಪೊಲೀಸ ಠಾಣೆಯ ಪಿ.ಎಸ್.ಐ ಎಸ್.ಆರ್. ಕನವಿ, ಘಟಪ್ರಭಾ, ಶಿಂದಿಕುರಬೇಟ, ಲೋಳಸೂರ ಗ್ರಾಮಗಳÀ ಮುಸ್ಲಿಂ ಸಮಾಜದ ಹಿರಿಯರಾದ ಶೌಕತ ಕಬ್ಬೂರ, ಹೈದರಲಿ ಮನಿಯಾರ, ರಜಾಕ ಪಿರಜಾದೇ, ರಫೀಕ ಸಯ್ಯದ, ದಸ್ತಗೀರ ದೇಸಾಯಿ, ಬಸೀರಹ್ಮದ ದೇಸಾಯಿ, ರೆಹೇಮಾನ ಮೋಕಾಶಿ, ಅಪ್ಪಾಸಾಬ ಮುಲ್ಲಾ, ಸಲೀಮ ಕಬ್ಬೂರ, ಇಮ್ರಾನ ಬಟಕುರ್ಕಿ ಸೇರಿದಂತೆ ಅನೇಕರು ಇದ್ದರು.