ಗೋಕಾಕ:ಪಠ್ಯೆತರ ಚುಟುವಟಿಕೆಗಳು ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸುತ್ತವೆ : ಬಿಇಒ ಬಳಗಾರ
ಪಠ್ಯೆತರ ಚುಟುವಟಿಕೆಗಳು ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸುತ್ತವೆ : ಬಿಇಒ ಬಳಗಾರ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜು 25 :
ಪಠ್ಯದಷ್ಟೆ ಪಠ್ಯೆತರ ಚುಟುವಟಿಕೆಗಳು ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ ಹೇಳಿದರು
ಸೋಮವಾರದಂದು ನಗರದ ಗೋಕಾಕ ಶಿಕ್ಷಣ ಸಂಸ್ಥೆಯ ಜ್ಞಾನದೀಪ ಸ್ವಾತಂತ್ರ್ಯ ಪದವಿಪೂರ್ವ ಮಹಾವಿದ್ಯಾಲಯದ ಕ್ರೀಡಾ ಹಾಗೂ ವಿವಿಧ ಸಂಘ ಚುಟುವಟಿಕೆಗಳ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು
ಕ್ರೀಡೆಗಳಿಂದ ಧೇಹ ಮತ್ತು ಮನಸ್ಸು ಸದೃಢಗೊಂಡು ಸಾಧನೆ ಮಾಡಲು ಸಹಕಾರಿಯಾಗುತ್ತದೆ. ಶಿಕ್ಷಣದೊಂದಿಗೆ ವಿದ್ಯಾರ್ಥಿಗಳು ಸಂಸ್ಕಾರವನ್ನು ಕಲಿಯಬೇಕು. ತಮ್ಮಲ್ಲಿರುವ ಪ್ರತಿಭೆಗಳನ್ನು ಇಂತಹ ವೇದಿಕೆಗಳಲ್ಲಿ ಪ್ರೋತ್ಸಾಹಿಸಿಕೊಳ್ಳಿ ನಿರ್ದಿಷ್ಟ ಗುರಿಯೊಂದಿಗೆ ತಂದೆ ತಾಯಿಗಳ ಕನಸ್ಸನ್ನು ಗುರುಗಳ ಮಾರ್ಗದರ್ಶನದಲ್ಲಿ ನನಸಾಗಿಸಿಕೊಂಡು ಸಮುದಾಯ ಗೌರವಿಸುವಂತ ವ್ಯಕ್ತಿಗಳಾಗಿರೆಂದು ಹಾರೈಸಿದರು.
ಇದೇ ಸಂದರ್ಭದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ 2 ನೇ ಸ್ಥಾನ ಪಡೆದ ವಿದ್ಯಾರ್ಥಿನಿ ಹರ್ಷದಾ ಕಿತ್ತೂರ ಹಾಗೂ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ವೇದಿಕೆಯಲ್ಲಿ ಸಂಸ್ಥೆಯ ಚೇರಮನ್ ವಿ.ಎ ಕಡಕೋಳ, ಕಾರ್ಯದರ್ಶಿ ಆರ್.ಎಂ ವಾಲಿ, ಪ್ರಾಚಾರ್ಯ ಆರ್.ಜಿ.ಭರಭರಿ, ಪ್ರಾಧ್ಯಾಪಕರುಗಳಾದ ಜಿ.ವಿ.ಮಳಗಿ , ಜೆ.ಎಂ ಪಾಟೀಲ, ಐ.ಎಂ ಸರಕಾರ,ಎಸ್.ಆರ್.ಮುಧ್ಧಾರ, ಜೆ.ಎಸ್.ಕರಿಗಾರ, ಸ್ವೇತಾ ಭರಭರಿ, ವಿದ್ಯಾರ್ಥಿ ಪ್ರತಿನಿಧಿ ಸ್ಮೀತಲ್ ಸಾತಪುತೆ ಇದ್ದರು.
ಸುಶ್ಮಿತಾ ಹುಕ್ಕೇರಿಮಠ ಸ್ವಾಗತಿಸಿದರು. ಅನುಷಾ ಭರಮನ್ನವರ ವಂದಿಸಿದರು.