RNI NO. KARKAN/2006/27779|Tuesday, October 14, 2025
You are here: Home » breaking news » ಗೋಕಾಕ:ನಮ್ಮ ದೇಶದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ವೇದಕಾಲದಿಂದಲೂ ಆಚರಣೆಯಲ್ಲಿವೆ : ಶ್ರೀ ಕುಮಾರ್ ದೇವರು

ಗೋಕಾಕ:ನಮ್ಮ ದೇಶದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ವೇದಕಾಲದಿಂದಲೂ ಆಚರಣೆಯಲ್ಲಿವೆ : ಶ್ರೀ ಕುಮಾರ್ ದೇವರು 

ನಮ್ಮ ದೇಶದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ವೇದಕಾಲದಿಂದಲೂ ಆಚರಣೆಯಲ್ಲಿವೆ : ಶ್ರೀ ಕುಮಾರ್ ದೇವರು

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮಾ 2 :

 

ಪುಣ್ಯ ಭೂಮಿಯಾದ ನಮ್ಮ ದೇಶದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ವೇದಕಾಲದಿಂದಲೂ ಆಚರಣೆಯಲ್ಲಿವೆ ಎಂದು ಹುಲಿಕಟ್ಟಿಯ ಶ್ರೀ ಕುಮಾರ್ ದೇವರು ಹೇಳಿದರು.

ಬುಧವಾದಂದು ನಗರದ ವಿವೇಕಾನಂದ ನಗರದ ಶ್ರೀ ಶಿವಲಿಂಗೇಶ್ವರ 14 ನೇ ಜಾತ್ರಾಮಹೋತ್ಸವದಲ್ಲಿ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡುತ್ತಾ ಪಾಪಗಳಿಂದ ಮುಕ್ತಿ ಹೊಂದಲು ಇಂತಹ ಪುಣ್ಯ ಕಾರ್ಯಗಳಲ್ಲಿ ಪಾಲ್ಗೊಳ್ಳಬೇಕು. ಶಿವರಾತ್ರಿಯಂದು ಶಿವನ ಧ್ಯಾನ ಮಾಡುವದರಿಂದ ಪಾಪಗಳೆಲ್ಲವೂ ನಾಶವಾಗಿ ಪುಣ್ಯ ಪ್ರಾಪ್ತಿಯಾಗುತ್ತದೆ. ಪುಣ್ಯಮಯ ಕಾರ್ಯಗಳಲ್ಲಿ ಸದಾ ಎಲ್ಲರೂ ಪಾಲ್ಗೊಂಡು ದೇವರ ಅನುಗ್ರಹಕ್ಕೆ ಪಾತ್ರರಾಗಿರೆಂದು ಹೇಳಿದರು.

ಈ ಸಂದರ್ಭದಲ್ಲಿ ಬ್ರಹ್ಮ ಲಿಂಗೇಶ್ವರ ಸ್ವಾಮೀಜಿ, ನಗರಸಭೆ ಸದಸ್ಯರಾದ ಶ್ರೀಶೈಲ ಯಕ್ಕೂಂಡಿ, ಭಾರತಿ ಹತ್ತಿ, ಗಣ್ಯರಾದ ಮಹಾಂತೇಶ ತಾವಂಶಿ, ಎಂ.ಎಸ್.ವಾಲಿ, ಶಿವಲಿಂಗೇಶ್ವರ ವಿಕಾಸ ಸಮಿತಿ ಅಧ್ಯಕ್ಷ ಜೆ.ಎಂ ಬಡಿಗೇರ, ಸದಸ್ಯರಾದ ಉದಯ ಬನ್ನಿಶೆಟ್ಟಿ , ಅಶೋಕ ಗೋಣಿ, ಅಮರಗುಂಡಪ್ಪ ಬಿಜ್ಜಳ್, ಭೀಮಪ್ಪ ಗೋಲಭಾಂವಿ, ಲಕ್ಕಪ್ಪ ಕೊತ್ತಲ್ಲ, ವಿರಭದ್ರ ಶೆಬ್ಬನ್ನವರ, ಪ್ರೇಮಲತಾ ಕಡಗದ, ಸುನಂದಾ ಮನ್ನಿಕೇರಿ, ಜಗದೇವಿ ಭೋಸಗಾ,ಜಯಶ್ರೀ ಕರಿಗಾರ, ಶಿವಶಂಕರ ದಾಸಪ್ಪನವರ,ಉಮಾದೇವಿ ಹಿರೇಮಠ, ಬಸವರಾಜ ಕಾಪಸಿ , ಈಶ್ವರ ಪಾಟೀಲ ಸೇರಿದಂತೆ ಅನೇಕರು ಇದ್ದರು.

Related posts:

ಮೂಡಲಗಿ:ಹಳ್ಳದ ನೀರಿನ ರಬಸಕ್ಕೆ ಸಿಲುಕಿದ ವಿದ್ಯಾರ್ಥಿಗಳನ್ನು ರಕ್ಷಿಸಿರುವ ಮಕ್ಕಳ ದೈರ್ಯ ಮೆಚ್ಚುವಂತಹದ್ದು : ಎ.ಸಿ ಗಂಗ…

ಗೋಕಾಕ:ಶಾಮಿಯಾನ, ಸೌಂಡ್ ಮತ್ತು ಡೆಕೋರೇಟರ್ಸ ಕಾರ್ಮಿಕರ ಪರಿಸ್ಥಿತಿ ಚಿಂತಾಜನಕ : ಆರ್ಥಿಕ ನೆರವಿಗೆ ಸರ್ಕಾರಕ್ಕೆ ಮನವಿ

ಗೋಕಾಕ:ನಿರಂತರ ಯೋಗಾಭ್ಯಾಸ ಮಾಡುವುದರಿಂದ ಯಾವುದೆ ರೋಗ ಬಾರದಂತೆ ನಮ್ಮ ದೇಹ ಬಲಿಷ್ಠವಾಗುತ್ತದೆ : ವಿಶ್ವಾನಾಥ್ ಕಡಕೋಳ