RNI NO. KARKAN/2006/27779|Wednesday, October 15, 2025
You are here: Home » breaking news » ಗೋಕಾಕ:ಶರಣರ ವಚನಗಳನ್ನು ಅರ್ಥೈಸಿಕೊಂಡಾಗ ಮಾತ್ರ ಬದುಕು ಸಾರ್ಥಕವಾಗುತ್ತದೆ : ಬಿಇಒ ಜಿ.ಬಿ.ಬಳಗಾರ

ಗೋಕಾಕ:ಶರಣರ ವಚನಗಳನ್ನು ಅರ್ಥೈಸಿಕೊಂಡಾಗ ಮಾತ್ರ ಬದುಕು ಸಾರ್ಥಕವಾಗುತ್ತದೆ : ಬಿಇಒ ಜಿ.ಬಿ.ಬಳಗಾರ 

ಶರಣರು ವಚನಗಳನ್ನು ಅರ್ಥೈಸಿಕೊಂಡಾಗ ಮಾತ್ರ ಬದುಕು ಸಾರ್ಥಕವಾಗುತ್ತದೆ : ಬಿಇಒ ಜಿ.ಬಿ.ಬಳಗಾರ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜ 29 :
ಶರಣರು ನೀಡಿದ ವಚನಗಳನ್ನು ಅರ್ಥೈಸಿಕೊಂಡು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಬದುಕು ಸಾರ್ಥಕವಾಗುತ್ತದೆ ಎಂದು ಶಿಕ್ಷಣಾಧಿಕಾರಿ ಜಿ.ಬಿ‌.ಬಳಗಾರ ಹೇಳಿದರು.

ಶುಕ್ರವಾರದಂದು ನಗರದ ಅಮ್ಮಾಜಿ ಸಭಾ ಭವನದಲ್ಲಿ ಸಿರಿಗನ್ನಡ ವೇದಿಕೆ, ಸಿರಿಗನ್ನಡ ಮಹಿಳಾ ವೇದಿಕೆ ಜಿಲ್ಲಾ ಹಾಗೂ ತಾಲೂಕಾ ಘಟಕಗಳ ಆಶ್ರಯದಲ್ಲಿ ಅಂಬಿಗರ ಚೌಡಯ್ಯ ಅವರ ಜಯಂತಿ ನಿಮಿತ್ಯ ಡಾ.ಸಿ.ಕೆ ನಾವಲಗಿ ಅವರು ರಚಿಸಿದ ಅಂಬಿಗರ ಚೌಡಯ್ಯ ವಚನಗಳು ಕೃತಿ ಪರಿಚಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅಂಬಿಗರ ಚೌಡಯ್ಯನವರು ತಮ್ಮ ವಚನಗಳ ಮೂಲಕ ನೂರು ತಲೆಮಾರಿಗಾಗುವಷ್ಟು ಜೀವಾಮೃತವನ್ನು ನೀಡಿದ್ದಾರೆ. ಅಕ್ಷರಗಳಿಗೆ ಶಕ್ತಿ ತುಂಬಿ ಸಮಾಜವನ್ನು ತಿದ್ದುವಂತ ಕಾರ್ಯವನ್ನು ಸಾಹಿತಿಗಳು ಮಾಡುತ್ತಿದ್ದಾರೆ. ನಾವೆಲ್ಲರೂ ಅವರನ್ನು ಪ್ರೋತ್ಸಾಹಿಸಬೇಕು. ಓದುವ ಹವ್ಯಾಸವನ್ನು ಬೆಳೆಸಿಕೊಂಡು ಸಾಹಿತ್ಯವನ್ನು ಶ್ರೀಮಂತಗೋಳಿಸಬೇಕು. ನಗರದ ಹಿರಿಯ ಸಾಹಿತಿ ಡಾ.ಸಿ.ಕೆ ನಾವಲಗಿ ಅವರು 76 ಕೃತಿಗಳನ್ನು ನೀಡಿ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿ ನಾಡಿನ ಹಿರಿಯ ಕವಿಗಳಾಗಿದ್ದಾರೆ. ಅವರಿಂದ ಇನ್ನಷ್ಟು ಕೃತಿಗಳು ಬರಲೆಂದು ಹಾರೈಸಿದರು.

ಹಿರಿಯ ಸಾಹಿತಿ ಡಾ.ಸಿ.ಕೆ ನಾವಲಗಿ ಮಾತನಾಡಿ ಸಾಮಾನ್ಯ ಜನ ಒದಿ ತಿಳಿದುಕೊಳ್ಳಬೇಕು ಎಂಬ ಆಸೆಯಿಂದ ಈ ಕೃತಿಯನ್ನು ಬರೆದಿದ್ದೇನೆ. ಇದರ ಸದುಪಯೋಗ ಪಡೆದುಕೊಂಡು ಅಂಬಿಗರ ಚೌಡಯ್ಯ ಅವರ ತತ್ವದಾರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಸಮಾಜ ನಿರ್ಮಿಸುವಂತೆ ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿರಿಗನ್ನಡ ಮಹಿಳಾ ವೇದಿಕೆ ರಾಜ್ಯಾಧ್ಯಕ್ಷೆ ಶ್ರೀಮತಿ ರಜನಿ ಜಿರಗ್ಯಾಳ ವಹಿಸಿದ್ದರು. ಶ್ರೀಮತಿ ಶಶಿಕಲಾ ಕಾಮೋಜಿ ಅವರು ಅಂಬಿಗರ ಚೌಡಯ್ಯನವರ ವಚನಗಳು ಕೃತಿ ಪರಿಚಯ ಮಾಡಿದರು.

ಈ ಸಂದರ್ಭದಲ್ಲಿ ಜಯಾ ಚುನಮರಿ, ಈಶ್ವರ ಮಮದಾಪೂರ, ಚೇತನ ಜೋಗನ್ನವರ,ಸಂಗೀತ ಬನ್ನೂರ ಉಪಸ್ಥಿತರಿದ್ದರು.

Related posts: