ಗೋಕಾಕ:ಅಂಬೇಡ್ಕರ ಪೊಟೊ ತೆಗೆಸಿದ ನ್ಯಾಯಾದೀಶರ ವಿರುದ್ದ ದಲಿತ ಸಂಘಟನೆಗಳಿಂದ ಪತ್ರ ಚಳುವಳಿ
ಅಂಬೇಡ್ಕರ ಪೊಟೊ ತೆಗೆಸಿದ ನ್ಯಾಯಾದೀಶರ ವಿರುದ್ದ ದಲಿತ ಸಂಘಟನೆಗಳಿಂದ ಪತ್ರ ಚಳುವಳಿ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜ 28 :
ಗಣರಾಜ್ಯೋತ್ಸವ ದಿನದಂದು ಅಂಬೇಡ್ಕರ ಬಾವ ಚಿತ್ರ ತೆಗೆಸಿ ಪೂಜೆ ಮಾಡಿ ಅವಮಾನ ಮಾಡಿದ ಮಲ್ಲಿಕಾರ್ಜುನಗೌಡ ಅವರನ್ನು ಸೇವೆಯಿಂದ ವಜಾಗೊಳಿಸುವಂತೆ ಆಗ್ರಹಿಸಿ ನಗರದ ಬಸವೇಶ್ವರ ವೃತ್ತದಲ್ಲಿ ಇಲ್ಲಿನ ಶೂನ್ಯ ಸಂಪಾದನಮಠದ ಮುರುಘರಾಜೆಂದ್ರ ಮಹಾಸ್ವಾಮಿಗಳ ನೇತೃತ್ವದಲ್ಲಿ ಶುಕ್ರವಾರದಂದು ವಿವಿಧ ದಲಿತ ಪರ ಸಂಘಟನೆಯ ಕಾರ್ಯಕರ್ತರು ಪತ್ರ ಚಳುವಳಿ ನಡೆಸಿದರು
ರಾಯಚೂರು ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ನಡೆದ ಗಣರಾಜ್ಯೋತ್ಸವದಲ್ಲಿ ಸಂವಿಧಾನ ಶಿಲ್ಪಿ ಡಾಕ್ಟರ್ ಅಂಬೇಡ್ಕರ್ ಅವರ ಭಾವಚಿತ್ರ ತೆಗೆಸಿದ ನ್ಯಾಯಾಧೀಶ ಮಂಜುನಾಥ ಅವರನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆ ಆಡಿಯಲ್ಲಿ ಸ್ವಯಂ ಪ್ರೇರಿತ ಪ್ರಕರಣ ಮಾಡಿ ಅವರನ್ನು ವೃತ್ತಿಯಿಂದ ವಜಾ ಮಾಡಬೇಕೆಂದು ಪತ್ರದಲ್ಲಿ ದಲಿತ ಮುಖಂಡರು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಈಶ್ವರ ಗುಡಾಜ , ಮಂಜುಳಾ ರಾಮಗಾನಟ್ಟಿ,ದೀಪಕ ಇಂಗಳಗಿ, ಗೋವಿಂದ ಕಣಮಡ್ಡಿ,ಚಿಕ್ಕಯ್ಯ ಕನಮಡ್ಡಿ,ವಿಶಾಲ ಮೇಸ್ರ್ತಿ,ಹಣಮಂತ ಮೇಸ್ತ್ರಿ,ಕಿರಣ ಉಳ್ಳಾಗಡ್ಡಿ,ದನಂಜಯ ಪೂಜೇರಿ, ಸ.ಜು ಮೇಸ್ರ್ತಿ, ಮಂಜು ಅಮ್ಮಣಗಿ ಉಪಸ್ಥಿತರಿದ್ದರು.