RNI NO. KARKAN/2006/27779|Monday, August 4, 2025
You are here: Home » breaking news » ಗೋಕಾಕ:ರಕ್ತದಾನ ಮಾಡುವ ಮೂಲಕ ಜೀವಗಳ ಉಳಿಸುವ ಕಾರ್ಯ ಮಾಡಬೇಕಿದೆ : ಪ್ರಮೋದ ಮುತಾಲಿಕ್

ಗೋಕಾಕ:ರಕ್ತದಾನ ಮಾಡುವ ಮೂಲಕ ಜೀವಗಳ ಉಳಿಸುವ ಕಾರ್ಯ ಮಾಡಬೇಕಿದೆ : ಪ್ರಮೋದ ಮುತಾಲಿಕ್ 

ರಕ್ತದಾನ ಮಾಡುವ ಮೂಲಕ ಜೀವಗಳ ಉಳಿಸುವ ಕಾರ್ಯ ಮಾಡಬೇಕಿದೆ : ಪ್ರಮೋದ ಮುತಾಲಿಕ್
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜ 26 :


ಅಪಘಾತಗಳು ಮತ್ತು ಆರೋಗ್ಯ ಸಮಸ್ಯೆಯ ಕಾರಣದಿಂದ ರಕ್ತವು ಹೆಚ್ಚಿನ ಬೇಡಿಕೆಯಲ್ಲಿದೆ. ಆದ್ದರಿಂದ ನಾವು ರಕ್ತದಾನ ಮಾಡುವ ಮೂಲಕ ಅನೇಕ ಜೀವಗಳನ್ನು ಉಳಿಸಬಹುದು. ಮಹಾತ್ಮರ ದಿನಾಚರಣೆಯನ್ನು ನಾವು ರಕ್ತದಾನ ಮಾಡುವ ಮೂಲಕ ಆಚರಣೆ ಮಾಡುವದು ಮಾದರಿ ಕಾರ್ಯ ಎಂದು ಶ್ರೀರಾಮ ಸೇನೆಯ ರಾಜ್ಯಾಧ್ಯಕ್ಷ ಪ್ರಮೋದ ಮುತಾಲಿಕ ಹೇಳಿದರು.
ಅವರು, ಶ್ರೀರಾಮ ಸೇನೆ ಹಾಗೂ ಶ್ರೀ ರಾಯಣ್ಣ ಯುವ ಫೌಂಡೇಶನ್ ಇವರುಗಳ ಸಂಯುಕ್ತ ಆಶ್ರಯದಲ್ಲಿ ಶ್ರೀ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಬಲಿದಾನ ದಿವಸ ಪ್ರಯುಕ್ತ ಬೃಹತ್ ರಕ್ತದಾನ ಶಿಭಿರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಕ್ತದಾನ ಮಾಡುವುದರಿಂದ ನಮ್ಮ ದೇಹದಲ್ಲಿನ ಕಬ್ಬಿಣ ಅಂಶದ ಪ್ರಮಾಣವನ್ನು ಕಡಿಮೆ ಮಾಡಬಹುದು. ಇದರಿಂದ ಹೃದ್ರೋಗ ಅಪಾಯವನ್ನು ತಡೆಯಬಹುದಾಗಿದೆ. ರಕ್ತದಾನದಿಂದ ದೇಹದಲ್ಲಿ ಹೊಸ ರಕ್ತದ ರಚನೆ ಜೊತೆಗೆ ನಮ್ಮ ರಕ್ತದಿಂದ ಇತರರಿಗೆ ಸಹಾಯ ಮಾಡಬಹುದು. ಹೀಗಾಗಿ ರಕ್ತದಾನ ಮಾಡುವ ಮೂಲಕ ಜೀವಗಳ ಉಳಿಸುವ ಕಾರ್ಯ ಮಾಡಬೇಕಿದೆ ಎಂದರು.
ರಕ್ತದಾನ ಶಿಭಿರ ಕಾರ್ಯಕ್ರಮವನ್ನು ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಅವರು ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳ, ಬಿಜೆಪಿ ನಗರಾಧ್ಯಕ್ಷ ಭೀಮಶಿ ಭರಮನ್ನವರ, ಜಿಲ್ಲಾಧ್ಯಕ್ಷ ರವಿ ಕೋಕಿತಕರ, ಗೋಕಾಕ ತಾಲೂಕ ಶ್ರೀರಾಮ ಸೇನೆಯ ಅಧ್ಯಕ್ಷ ರವಿ ಪೂಜೇರಿ, ವಿನಯ ಅಂಗೋಳಿ, ಶಿವರಾಜ ನಾಯಕ, ಶಿವು ಬಂತೆ, ಸುಭಾಸ ಕಾಸಲಕರ, ಮಾರುತಿ ಬೆನ್ನಾಡಿ, ವಿನಯ ಪಡಸಲಗಿ, ಸಿದ್ದು ಗೋರ್ಪಡೆ ಸೇರಿದಂತೆ ನೂರಾರು ಶ್ರೀರಾಮ ಸೇನೆಯ ಕಾರ್ಯಕರ್ತರು ಇದ್ದರು.

Related posts: