ಗೋಕಾಕ:ನಾಳೆ ಬೃಹತ್ ಲಸಿಕಾ ಮೇಳ : ಶಾಸಕ ರಮೇಶ ಮಾಹಿತಿ
ನಾಳೆ ಬೃಹತ್ ಲಸಿಕಾ ಮೇಳ : ಶಾಸಕ ರಮೇಶ ಮಾಹಿತಿ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 4 :
ಕೊರೋನಾ ಮಾಹಾಮಾರಿಯಿಂದ ಮುಕ್ತರಾಗಲು ಎಲ್ಲರೂ ಲಸಿಕೆ ಪಡೆಯುವುದು ಅತ್ಯಗತ್ಯ. ಹೀಗಾಗಿ ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಮಂಗಳವಾರ ಬೃಹತ್ ವಾಕ್ಸಿನೆಷನ್ ಮೇಳ ಹಮ್ಮಿಕೊಳ್ಳಲಾಗಿದೆ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಮಾಜಿ ಸಚಿವ ಹಾಗೂ ಶಾಸಕ ರಮೇಶ ಜಾರಕಿಹೊಳಿ ಮನವಿ ಮಾಡಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟನೆ ನೀಡಿರುವ ಅವರು, ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಇನ್ನೂ ಹಲವಾರು ಜನರು ಲಸಿಕೆ ಪಡೆದುಕೊಂಡಿಲ್ಲ. ಲಸಿಕೆ ಕೊರೋನಾ ಮಾಹಾಮಾರಿಗೆ ರಾಮಬಾನ ಹೀಗಾಗಿ ಎಲ್ಲರೂ, ತಮ್ಮ ಕುಟುಂಬದ ಸದಸ್ಯರನ್ನು ಕರೆತಂದು ಲಸಿಕೆ ಪಡೆಯುವಂತೆ ಮನವಿ ಮಾಡಿದ್ದಾರೆ.
ನಗರದ ಮಯೂರ ಶಾಲೆ, ವಾಲ್ಮೀಕಿ ಕ್ರೀಡಾಂಗಣ, ಕಾಡಸಿದ್ದೇಶ್ವರ ಮಠ ಗುರುವಾರ ಪೇಠ, ಮಹಾಲಿಂಗೇಶ್ವರ ನಗರ ಅಯ್ಯಪ್ಪಸ್ವಾಮಿ ದೇವಸ್ಥಾನ, ಭೀರೇಶ್ವರ ಕಲ್ಯಾಣ ಮಂಟಪ, ಲಕ್ಕಡ ಗಲ್ಲಿ, ಮುಪ್ಪಯ್ಯನ ಮಠ, ಕಿಲ್ಲಾ ಮಹಾಲಿಂಗೇಶ್ವರ ದೇವಸ್ಥಾನ, ನಾಯ್ಕಗಲ್ಲಿ ವಾಲ್ಮೀಕಿ ದೇವಸ್ಥಾನಗಳಲ್ಲಿ ಮೊದಲ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ದೇವಸ್ಥಾನ ಹಾಗೂ ಶಾಲೆಗಳಲ್ಲಿಯ ಲಸಿಕೆ ಕೇಂದ್ರಗಳಲ್ಲಿ ದ್ವೀತಿಯ ಡೋಸ್ ಲಸಿಖೆ ನೀಡಲಾಗುತ್ತಿದ್ದು, ಲಸಿಕೆ ಪಡೆಯದ ಸಾರ್ವಜನಿಕರು ಲಸಿಕೆ ಪಡೆದು ಆರೋಗ್ಯಯುತ ಸಮಾಜ ನಿರ್ಮಿಸಲು ಕೈಜೊಡಿಸಬೇಕೆಂದು ವಿನಂತಿಸಿದ್ದಾರೆ.