RNI NO. KARKAN/2006/27779|Sunday, August 3, 2025
You are here: Home » breaking news » ಗೋಕಾಕ:ಕಲಾವಿದರು ಶ್ರದ್ಧೆಯಿಂದ ಕಲಾ ಸೇವೆ ಮಾಡುವುದರ ಮೂಲಕ ಕಲೆಗಳ ಗೌರವವನ್ನು ಉಳಿಸಬೇಕು : ಡಾ.ಸಿ.ಕೆ ನಾವಲಗಿ

ಗೋಕಾಕ:ಕಲಾವಿದರು ಶ್ರದ್ಧೆಯಿಂದ ಕಲಾ ಸೇವೆ ಮಾಡುವುದರ ಮೂಲಕ ಕಲೆಗಳ ಗೌರವವನ್ನು ಉಳಿಸಬೇಕು : ಡಾ.ಸಿ.ಕೆ ನಾವಲಗಿ 

ಕಲಾವಿದರು ಶ್ರದ್ಧೆಯಿಂದ ಕಲಾ ಸೇವೆ ಮಾಡುವುದರ ಮೂಲಕ ಕಲೆಗಳ ಗೌರವವನ್ನು ಉಳಿಸಬೇಕು : ಡಾ.ಸಿ.ಕೆ ನಾವಲಗಿ

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಸೆ 30 :

 

ಕಲಾವಿದರು ತಮ್ಮ ಆಸಕ್ತಿ ಕಳೆದುಕೊಳ್ಳದೆ ಶ್ರದ್ಧೆಯಿಂದ ಕಲಾ ಸೇವೆ ಮಾಡುವುದರ ಮೂಲಕ ಕಲೆಗಳ ಗೌರವವನ್ನು ಉಳಿಸಬೇಕು’ ಎಂದು ಜಾನಪದ ವಿಧ್ವಂಸಕ ಡಾ.ಸಿ.ಕೆ ನಾವಲಗಿ ಹೇಳಿದರು

ಗುರುವಾರದಂದು ನಗರದ ಜ್ಞಾನ ಮಂದಿರದಲ್ಲಿ ಕನ್ನಡ ಜಾನಪದ ಪರಿಷತ್ತು ಗೋಕಾಕ ಹಾಗೂ ಬಿಂದು ಲಲಿತಕಲಾ ಹಾಗೂ ಜಾನಪದ ಅಧ್ಯಯನ ಸಂಘ ಗೋಕಾಕ ಇವುಗಳ ಸಂಯುಕ್ತಾಶಯದಲ್ಲಿ ವಿಶ್ವ ಜಾನಪದ ಸಂಸ್ಥಾಪನ ದಿನಾಚರಣೆ ನಿಮಿತ್ಯ ಹಮ್ಮಿಕೊಂಡ ಜಾನಪದ ಸಾಂಸ್ಕೃತಿಕ ಕಲಾಮೇಳ ಹಾಗೂ ಜಾನಪದ ಕಲಾರತ್ನ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಭಾಗವಹಿಸಿ ಪ್ರಶಸ್ತಿ ವಿತರಿಸಿ ಅವರು ಮಾತನಾಡಿದರು.

ನಾಡಿನ ಸಂಸ್ಕೃತಿಯನ್ನು ಬಿಂಬಿಸುವ ಜಾನಪದ ಕಲೆಗಳು ನಶಿಸಿ ಹೋಗದಂತೆ ಸಂಘ, ಸಂಸ್ಥೆಗಳು ಕಲಾವಿದರನ್ನು ಪ್ರೋತ್ಸಾಹಿಸಬೇಕು. ಆಧುನಿಕತೆ ಮತ್ತು ಮಾಹಿತಿ ತಂತ್ರಜ್ಞಾನದ ಒತ್ತಡದಲ್ಲಿ ಜಾನಪದ ಕಲೆಗಳು ಜನರಿಂದ ದೂರ ವಾಗುತ್ತಿದೆ.ಕಲಾವಿದರನ್ನು ಪ್ರೋತ್ಸಾಹಿಸುವುದರಿಂದ ಕಲೆ ಶ್ರೀಮಂತಗೊಳ್ಳುತ್ತದೆ. ಸನ್ಮಾನಿತರು ಸ್ಪೂರ್ತಿಗೊಂಡು ನಾಡಿಗೆ ಇನ್ನೂ ಹೆಚ್ಚಿನ ಸೇವೆ ನೀಡಬೇಕು. ಕಲಾವಿದರಿಗೆ ಅಭಿಮಾನಿಗಳೇ ದೇವರು. ಅಭಿಮಾನಿಗಳ ಅನುಗ್ರಹ ಸದಾ ಕಲಾವಿದರ ಮೇಲೆ ಇರಬೇಕು. ವಿಧ್ವಾಂಸರು ಕಲಾವಿದರಿಗೆ ಸರಿಯಾಗಿ ಮಾರ್ಗದರ್ಶನ ನೀಡಿದರೆ ಕಲೆಯನ್ನು ಬೆಳೆಸಲು ಸಾಧ್ಯ . ಅನಕ್ಷರಸ್ಥ ಕಲಾವಿದರಿಗೆ ಸರಕಾರ ಮಟ್ಟದಲ್ಲಿರುವ ಅಕ್ಯಾಡಮಿಗಳಿಗೆ , ಮಂಡಳಿಗಳಿಗೆ ಸದಸ್ಯರನ್ನಾಗಿ ಮಾಡಿದರೆ ಕಲೆಗಳನ್ನು ಉಳಿಸಿ ಬೆಳೆಸಲು ಸುಲಭವಾಗಿ ಸಾಧ್ಯವಾಗುತ್ತದೆ ಆ ದಿಸೆಯಲ್ಲಿ ಸರಕಾರ ಚಿಂತನೆ ಮಾಡಬೇಕಾಗಿದೆ. ಜಾನಪದ ಕಲೆಗೆ ತವರುರಾಗಿರುವ ಬೆಳಗಾವಿ ಜಿಲ್ಲೆಯಲ್ಲಿ ಇಂದಿಗೂ ಸಹ ಹಲವಾರು ಜಾನಪದ ಕಲಾವಿದರು ಕಲೆಯನ್ನು ಉಳಿಸಿ ಬೆಳೆಸುವ ಕಾರ್ಯಮಾಡುತ್ತಿದ್ದಾರೆ ಇವರನ್ನು ಗುರುತಿಸುವ ಕಾರ್ಯ ಇಂದು ಆಗಬೇಕು ಎಂದು ಡಾ.ಸಿ.ಕೆ ನಾವಲಗಿ ಹೇಳಿದರು.

ಕಾರ್ಯಕ್ರಮವನ್ನು ಕನ್ನಡ ಜಾನಪದ ಪರಿಷತ್ತಿನ ರಾಜ್ಯಾಧ್ಯಕ್ಷ ಬೆಂಗಳೂರಿನ ಡಾ. ಎಸ್.ಬಾಲಾಜಿ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಲಾವಿದ ಈಶ್ವರಚಂದ್ರ ಬೆಟಗೇರಿ ವಹಿಸಿದ್ದರು. ಬಸವರಾಜ ಕಪರಟ್ಟಿ ಸ್ವಾಮಿಗಳು ಕಾರ್ಯಕ್ರಮದ ಸಾನಿಧ್ಯವನ್ನು ವಹಿಸಿದ್ದರು.

ಇದೇ ಸಂದರ್ಭದಲ್ಲಿ ತಾಲೂಕಿನ 10 ಜಾನಪದ ಕಲಾವಿದರಿಗೆ ಕಲಾರತ್ನ ಪ್ರಶಸ್ತಿ ನೀಡಿ ಸನ್ಮಾಸಿ ಗೌರವಿಸಲಾಯಿತು.

ವೇದಿಕೆಯಲ್ಲಿ ಪ್ರೊ ಕೆ.ಎಸ್.ಕೌಜಲಗಿ, ಕೆ.ಸಿ.ಕಾಂತಪ್ಪ ,ಮೋಹನ ಗುಂಡ್ಲೂರ , ಮಹಾಂತೇಶ ತಾಂವಶಿ, ಬಲದೇವ ಸಣ್ಣಕ್ಕಿ , ಲಕ್ಷ್ಮಣ ಚೌರಿ , ಜಯಾನಂದ ಮಾದರ ಉಪಸ್ಥಿತರಿದ್ದರು.

Related posts: