ಗೋಕಾಕ:ನಗರದಲ್ಲಿ ನಾಳೆ ಸಮೂಹ ಪೇಂಟಿಂಗ್ಸ್ ಪ್ರದರ್ಶನ
ನಗರದಲ್ಲಿ ನಾಳೆ ಸಮೂಹ ಪೇಂಟಿಂಗ್ಸ್ ಪ್ರದರ್ಶನ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಸೆ 29 :
ನಗರದ ಸಿದ್ಧಾರ್ಥ ಲಲಿತಕಲಾ ಮಹಾವಿದ್ಯಾಲಯದ ವತಿಯಿಂದ ಕು. ಮಲ್ಲಮ್ಮ ದಳವಾಯಿ ಹಾಗೂ ಕು. ವಿಜಯಲಕ್ಷ್ಮೀ ಜುಗಳಿ. ಇವರು ರಚಿಸಿರುವ ಪೇಂಟಿಂಗ್ಸ್‍ಗಳ ಸಮೂಹ ಕಲಾ ಪ್ರದರ್ಶನ ನಾಳೆ ದಿನಾಂಕ 30-09-2021 ರಂದು ಸ್ಥಳೀಯ “ಸಂಗಮ ನಗರದ ಆಧ್ಯಾತ್ಮ ಜ್ಞಾನ ಮಂದಿರದ” ಆವರಣದಲ್ಲಿ ಜರುಗಲಿದೆ.
ಕನ್ನಡ ಜಾನಪದ ಪರಿಷತ್ತಿನ ರಾಜ್ಯಾಧ್ಯಕ್ಷ ಜಾನಪದ ಡಾ.ಎಸ್.ಬಾಲಾಜಿ ಪ್ರದರ್ಶನ ಉದ್ಘಾಟಿಸಲಿದ್ದು. ಕರ್ನಾಟಕ ಲಲಿತಕಲಾ ಅಕಾಡೆಮಿಯ ಸದಸ್ಯ ಹಾಗೂ ಸಿದ್ಧಾರ್ಥ ಲಲಿತಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಜಯಾನಂದ ಮಾದರ ಅಧ್ಯಕ್ಷತೆ ವಹಿಸಲಿದ್ದು. ಹಿರಿಯ ಜಾನಪದ ವಿದ್ವಾಂಸ ಡಾ.ಸಿ.ಕೆ.ನಾವಲಗಿ. ಬೆಳಗಾವಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ. ವಿದ್ಯಾವತಿ ಭಜಂತ್ರಿ. ಗಣ್ಯ ವ್ಯಾಪಾರಸ್ಥ ಮಹಾಂತೇಶ ತಾಂವಶಿ. ಕ.ಜಾ.ಪ. ಬೆಳಗಾವಿ ಜಿಲ್ಲಾ ಅಧ್ಯಕ್ಷ ಮೋಹನ ಗುಂಡ್ಲೂರ ಮುಖ್ಯತಿಥಿಗಳಾಗಿ ಅಗಮಿಸಲಿದ್ದಾರೆ.
ಆದ್ದರಿಂದ ಕಲಾ ಅಭಿರುಚಿಯುಳ್ಳ ಅಭಿಮಾನಿಗಳು ಹಾಗೂ ಸಾರ್ವಜನಿಕರು ಕಲಾಕೃತಿಗಳನ್ನು ವೀಕ್ಷಿಸಿ ಸವಿಯಬೇಕಾಗಿ ಕಲಾವಿದರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.