ಗೋಕಾಕ:ಭಗತಸಿಂಗರಂತಹ ನಾಯಕರು ನಮ್ಮಗಿಂದು ಆದರ್ಶವಾಗಬೇಕು : ನಾರಾಯಣ ಮಠಾಧಿಕಾರಿ
ಭಗತಸಿಂಗರಂತಹ ನಾಯಕರು ನಮ್ಮಗಿಂದು ಆದರ್ಶವಾಗಬೇಕು : ನಾರಾಯಣ ಮಠಾಧಿಕಾರಿ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಸೆ 28 :
ದೇಶ ಪ್ರೇಮಿಯಾಗಿ ದೇಶದ ಸ್ವಾತಂತ್ರ್ಯಕ್ಕಾಗಿ ತನ್ನ ಪ್ರಾಣವನ್ನೇ ನೀಡಿದ ಭಗತಸಿಂಗ ಯುವಕರಿಗೆ ಪ್ರೇರಣೆಯಾಗಿದ್ದಾರೆ ಎಂದು ವಿಶ್ವ ಹಿಂದು ಪರಿಷತ್ತಿನ ಬೆಳಗಾವಿ ವಿಭಾಗ ಸಂಚಾಲಕ ನಾರಾಯಣ ಮಠಾಧಿಕಾರಿ ಹೇಳಿದರು.
ಮಂಗಳವಾರದಂದು ನಗರದ ಸೋಮವಾರ ಪೇಠೆಯ ಮುಪ್ಪಯ್ಯನ ಮಠದ ಆವರಣದಲ್ಲಿ ಇಲ್ಲಿನ ಶ್ರೀರಾಮ ಸೇನೆ ಹಾಗೂ ಹಿಂದುಪರ ಸಂಘಟನೆಗಳ ಸಹಯೋಗದಲ್ಲಿ ಹಮ್ಮಿಕೊಂಡ ಕ್ರಾಂತಿವೀರ ಭಗತಸಿಂಗ ಅವರ 115ನೇ ಜಯಂತಿ ಉತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಾ ಕೆವಲ ಶಾಂತಿಯಿಂದ ದೇಶಕ್ಕೆ ಸ್ವತಂತ್ರ ದೊರೆತಿಲ್ಲ ಕ್ರಾಂತಿಕಾರಿಗಳ ಹೋರಾಟವು ಮಹತ್ವರ ಪಾತ್ರ ವಹಿಸಿದೆ ಎಂದರು.
ಸರ್ವ ಧರ್ಮಗಳ ಸಮನ್ವಯದ ನಾಡು ಭಾರತ, ಭಾರತದಲ್ಲಿ ಹುಟ್ಟಿದ ನಾವು ಪುಣ್ಯವಂತರು. ಹೋರಾಟದ ಇತಿಹಾಸ ಹೊಂದಿರುವ ರಾಷ್ಟ್ರ ಭಾರತ. ದೇಶದ ಸ್ವಾತಂತ್ರ್ಯ ಹೋರಾಟಗಾರರು ಜಾತಿ , ಮತ ಪಂಥಗಳನ್ನು ಬದಿಗಿಟ್ಟು ಹೋರಾಟದಲ್ಲಿ ಭಾಗಿಯಾಗಿ ಸ್ವತಂತ್ರವನ್ನು ತಂದು ಕೊಟ್ಟಿದ್ದಾರೆ. ಸಂಪತ್ತ ಭರಿತ ರಾಷ್ಟ್ರ ನಮ್ಮದು ಇದನ್ನು ದೋಚಲು ಹಲವರು ಜನರು ಆಕ್ರಮಣ ಮಾಡಿದರು ಸಹ ಭಾರತವನ್ನು ಗೆಲ್ಲಲು ಸಾದ್ಯವಾಗಲ್ಲಿ, ಜಗತ್ತನ್ನೆ ಗೆದ್ದು ಬಂದ ಅಲೆಕ್ಸಾಂಡರ್ ನಿಗೂ ಕೂಡಾ ಭಾರತವನ್ನು ಗೆಲ್ಲಲು ಆಗಲಿಲ್ಲ. 1857 ನೇ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದ್ದ ತಾತ್ಯಾಟೋಪಿ, ಲಾಲ,ಬಾಲ, ಪಾಲ ಸೇರಿದಂತೆ ಲಕ್ಷಾಂತರ ಜನ ಪ್ರಾಣಕೊಟ್ಟಿದ್ದಾರೆ.
ಮಹಾರಾಷ್ಟ್ರ ,ಬಂಗಾಲ, ಪಂಜಾಬ್ ದಂತಹ ರಾಜ್ಯದ ಹೋರಾಟಗಾರರಿಂದ ಶುರುವಾಗಿದ್ದ ಸ್ವತಂತ್ರ ಚಳುವಳಿ ನಂತರ ದಿನಗಳಲ್ಲಿ ಬ್ರಿಟಿಷ್ರರನನ್ನು ಭಾರತ ಬಿಟ್ಟು ತೊಲಗುವಂತೆ ಮಾಡಿತ್ತು.
ಭಗತಸಿಂಗ ನಂತಹ ನಾಯಕರು ನಮ್ಮಗಿಂದು ಆದರ್ಶವಾಗಬೇಕು. ಯುವಕರು ದುಶ್ಚಟಗಳಿಗೆ ಬಲಿಯಾಗಿ ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ. ಇದು ನಮ್ಮ ದುರ್ದೈವವಾಗಿದೆ. ಯುವಕರು ದೇಶದ ಆಸ್ತಿಯಾಗಬೇಕು. ಜಗತ್ತಿನಲ್ಲಿ ಶಾಂತಿ, ಸಮೃದ್ಧಿ ನೀಡುವ ಯಾವುದಾದರೂ ರಾಷ್ಟ್ರ ಇದ್ದರೆ ಅದು ಭಾರತ. ಸ್ವಾತಂತ್ರ್ಯ ಪಡೆದುಕೋಳ್ಳಲು ಅತ್ಯಂತ ಮುಂದೇ ಇದ್ದವರು ಕ್ರಾಂತಿಕಾರಿ ಹೋರಾಟಗಾರರು. ಭಾರತೀಯ ಪ್ರತಿಯೊಬ್ಬ ಪ್ರಜೆಗಳು ಇದನ್ನು ಅರಿತು ಮುನ್ನಡೆದರೆ ಭವ್ಯ ಭಾರತವನ್ನು ಕಟ್ಟಲು ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮವನ್ನು ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಶ್ರೀರಾಮ ಸೇನೆಯ ಬಸವರಾಜ ಪಡತಾರೆ, ರವಿ ಪೂಜೇರಿ, ಶಿವು ಹಿರೇಮಠ, ರಾಮಚಂದ್ರ ಕಾಕಡೆ, ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳಿ, ಜಯಾನಂದ ಮುನ್ನೋಳಿ, ಎಂ.ಡಿ.ಚುನಮರಿ, ನಗರಸಭೆ ಸದಸ್ಯರು , ಹಿಂದುಪರ ಸಂಘಟನೆಗಳ ಕಾರ್ಯಕರ್ತರು ಸೇರಿದಂತೆ ಅನೇಕರು ಇದ್ದರು.