RNI NO. KARKAN/2006/27779|Saturday, February 14, 2026
You are here: Home » breaking news » ಗೋಕಾಕ:ಗೋಕಾಕ ಕುಟುಂಬ ವತಿಯಿಂದ ನಿರ್ಗತಿಕ, ಕಡುಬಡವರಿಗೆ ಬಕ್ರೀದ ಹಬ್ಬದ ನಿಮಿತ್ತ ಅನ್ನಸಂತರ್ಪಣೆ

ಗೋಕಾಕ:ಗೋಕಾಕ ಕುಟುಂಬ ವತಿಯಿಂದ ನಿರ್ಗತಿಕ, ಕಡುಬಡವರಿಗೆ ಬಕ್ರೀದ ಹಬ್ಬದ ನಿಮಿತ್ತ ಅನ್ನಸಂತರ್ಪಣೆ 

ಗೋಕಾಕ ಕುಟುಂಬ ವತಿಯಿಂದ ನಿರ್ಗತಿಕ, ಕಡುಬಡವರಿಗೆ ಬಕ್ರೀದ ಹಬ್ಬದ ನಿಮಿತ್ತ ಅನ್ನಸಂತರ್ಪಣೆ

 

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜು 21 :

 
ಇಲ್ಲಿನ ಗೋಕಾಕ ಪರಿವಾರದ ( ಕುಟುಂಬ) ವತಿಯಿಂದ ನಗರದ ಹೊರವಲಯದಲ್ಲಿ ವಾಸವಾಗಿರುವ ನಿರ್ಗತಿಕ , ಕಡುಬಡವರಿಗೆ ಈದುಲ್ ಅಝ್ಹಾ ( ಬಕ್ರೀದ್) ಹಬ್ಬದ ನಿಮಿತ್ತ ಅನ್ನಸಂತರ್ಪಣೆ ಮಾಡಿದರು.

ಬುಧವಾರದಂದು ಸಾಮೂಹಿಕ ಪ್ರಾರ್ಥನೆ ಬಳಿಕ ನಗರದ ಎಪಿಎಂಸಿ ಆವರಣದಲ್ಲಿ ವಾಸವಾಗಿರುವ ಕಡುಬಡವರ ಬಳಿ ತೆರಳಿದ ಗೋಕಾಕ ಪರಿವಾರದ ಸದಸ್ಯರು ಹಾಗೂ ಗೆಳೆಯರು ವಾಸವಿರುವ 70 ಕ್ಕೂ ಹೆಚ್ಚು ಕುಟುಂಬಗಳಿಗೆ ಅನ್ನಸಂತರ್ಪಣೆ ಗೈದರು

ಈ ಸಂದರ್ಭದಲ್ಲಿ ಮಾತನಾಡಿದ ಜಾವೇದ ಗೋಕಾಕ ಕಳೆದ ಕೆಲವು ತಿಂಗಳಿನಿಂದ ಕೊರೋನಾ ಮಹಾಮಾರಿ ಸೋಂಕಿನಿಂದ ಹಾಗೂ ಲಾಕಡೌನ ನಿಂದ ಬಡವರು ತುಂಬಾ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಇವರ ಕಷ್ಟದಲ್ಲಿ ಭಾಗಿಯಾಗುವ ಸದುದ್ದೇಶದಿಂದ ಗೋಕಾಕ ಕುಟುಂಬದ ವತಿಯಿಂದ ಪವಿತ್ರ ಬಕ್ರೀದ್ ಹಬ್ಬದ ನಿಮಿತ್ತ ಅನ್ನಸಂತರ್ಪಣೆ ಏರ್ಪಡಿಸಿದ್ದು, ಮುಂದೆಯು ಕೂಡಾ ಕಡು ಬಡವರನ್ನು ಗುರುತಿಸಿ ನಮ್ಮ ಕುಟುಂಬದ ವತಿಯಿಂದ ಕೈಲಾದಷ್ಟು ಸಹಾಯ ಮಾಡಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸ್ಥಾಯಿ ಸಮಿತಿ ಚೇರಮನ್ ಕೆ.ಎಂ ಗೋಕಾಕ, ಅಂಜುಮನ್ ಕಮಿಟಿ ಅಧ್ಯಕ್ಷ ಜಾವೇದ್ ಗೋಕಾಕ, ಇಸ್ಮಾಯಿಲ್ ಜಮಾದಾರ, ಇಸ್ಮಾಯಿಲ್ ಗೋಕಾಕ , ರಿಯಾಜ ಗೋಕಾಕ, ಹಾಜಿ ಗಫಾರಸಾಬ ಕಾಗಜಿ, ಸಲ್ಲಿಂ ಮುಲ್ಲಾ, ಶಫೀ ಜಾಫರ, ಮಹಾಂತೇಶ ಗವಿಮಠ, ಅಮಿತ್ ಮೆಲ್ಲೆನ್ನವರ , ಮೌಲಾನಾ ತೌಫೀಕ ಯಲಿಗಾರ ಸೇರಿದಂತೆ ಇತರರು ಉಪಸ್ಥಿತರಿದ್ದರು .

Related posts: