RNI NO. KARKAN/2006/27779|Thursday, January 15, 2026
You are here: Home » breaking news » ಬೆಟಗೇರಿ:ರಸ್ತೆ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೆರಿಸಿದ ಡಾ‌.ರಾಜೇಂದ್ರ ಸಣ್ಣಕ್ಕಿ

ಬೆಟಗೇರಿ:ರಸ್ತೆ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೆರಿಸಿದ ಡಾ‌.ರಾಜೇಂದ್ರ ಸಣ್ಣಕ್ಕಿ 

ರಸ್ತೆ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೆರಿಸಿದ ಡಾ‌.ರಾಜೇಂದ್ರ ಸಣ್ಣಕ್ಕಿ

 
ನಮ್ಮ ಬೆಳಗಾವಿ ಇ – ವಾರ್ತೆ, ಬೆಟಗೇರಿ ಜೂ 23 :

 
ಅತಿವೃಷ್ಠಿ ಯೋಜನೆಯ ಸುಮಾರು 27 ಲಕ್ಷ ರೂ.ಗಳ ಅನುದಾನದಡಿಯಲ್ಲಿ ಬೆಟಗೇರಿ-ಕೌಜಲಗಿ ಮುಖ್ಯ ರಸ್ತೆಯಿಂದ ಸುಮಾರು 3ಕಿ.ಮೀ ವರೆಗೆ ಬೆಟಗೇರಿ ಗ್ರಾಮದ ಮಡ್ಡಿ ರಸ್ತೆ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜಾ ಕಾರ್ಯಕ್ರಮ ಬುಧವಾರ ಜೂ.23 ರಂದು ನಡೆಯಿತು.
ಕೌಜಲಗಿ ಜಿಪಂ ಮಾಜಿ ಸದಸ್ಯ ಡಾ.ರಾಜೇಂದ್ರ ಸಣ್ಣಕ್ಕಿ ಕಾಮಗಾರಿ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ನೇತ್ರತ್ವ ಮತ್ತು ಮಾರ್ಗದರ್ಶನದಲ್ಲಿ ಸರ್ಕಾರದ ವಿವಿಧ ಯೋಜನೆಗಳ ಮೂಲಕ ಬೆಟಗೇರಿ ಗ್ರಾಮದಲ್ಲಿ ಈಗಾಗಲೇ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಸ್ಥಳೀಯರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಪ್ರಯತ್ನಿಸಲಾಗುವುದು ಎಂದರು.
ತಾಪಂ ಸದಸ್ಯ ಲಕ್ಷ್ಮಣ ನೀಲಣ್ಣವರ, ಗೋಕಾಕ ಎನ್‍ಎಸ್‍ಎಫ್ ಪ್ರತಿನಿಧಿ ಸಿ.ಎಮ್.ಯಕ್ಸಂಬಿ, ಗ್ರಾಪಂ ಮಾಜಿ ಅಧ್ಯಕ್ಷ ಲಕ್ಷ್ಮಣ ಚಂದರಗಿ, ಬಸಪ್ಪ ದಂಡಿನ, ಈಶ್ವರ ಮುಧೋಳ, ಅಶೋಕ ಕೋಣಿ, ಸುಭಾಷ ಜಂಬಗಿ, ಮಾರುತಿ ಚಂದರಗಿ, ಈರಪ್ಪ ದೇಯಣ್ಣವರ, ಈರಪ್ಪ ಬಳಿಗಾರ, ಗುತ್ತಿಗೆದಾರ ಬಸವರಾಜ ಕೋಣಿ, ಸಿದ್ದಾರೂಢ ಸವತಿಕಾಯಿ, ಲಕ್ಕಪ್ಪ ಚಂದರಗಿ, ಕಲ್ಲಪ್ಪ ಸವತಿಕಾಯಿ, ಅಪ್ಪಣ್ಣ ಆಶೆಪ್ಪಗೋಳ, ಶಿವಲಿಂಗ ಜಾಡರ, ರಫೀಕ ಮಿರ್ಜಾನಾಯ್ಕ, ಯಲ್ಲಪ್ಪ ಸವತಿಕಾಯಿ, ಸುರೇಶ ನೀಲಜಗಿ, ಮಾರುತಿ ಸವತಿಕಾಯಿ, ವಿಠಲ ಕೋಣಿ, ಯಲ್ಲಪ್ಪ ಕರೆಣ್ಣವರ, ರಾಮಣ್ಣ ನೀಲಣ್ಣವರ, ಸುರೇಶ ವಡೇರ, ಸಂಜು ಮಾಳೇದ, ಸ್ಥಳೀಯ ಮುಖಂಡರು, ರೈತರು, ಇತರರು ಇದ್ದರು.

Related posts: