ಗೋಕಾಕ:2021-22 ನೇ ಸಾಲಿನ ಅಂದಾಜು ಆಯ ವ್ಯಯ ಮಂಡನೆ
2021-22 ನೇ ಸಾಲಿನ ಅಂದಾಜು ಆಯ ವ್ಯಯ ಮಂಡನೆ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜ 30 :
ನಗರಸಭೆಯ ಸಾಮಾನ್ಯ ಸಭೆಯಲ್ಲಿ 2020-21 ನೇ ಸಾಲಿನ ಪರಿಷ್ಕøತ ಆಯವ್ಯಯ ಮತ್ತು 2021-22 ನೇ ಸಾಲಿನ ರೂ.16.19 ಲಕ್ಷಗಳ ಉಳಿತಾಯದ ಆಯ ವ್ಯಯವನ್ನು ಪೌರಾಯುಕ್ತ ಎಸ್.ಎಂ.ಹಿರೇಮಠ ಅವರು ಅಧ್ಯಕ್ಷ ಜಯಾನಂದ ಹುಣಚ್ಯಾಳಿ ಅವರ ನೇತೃತ್ವದಲ್ಲಿ ಶನಿವಾರದಂದು ನಡೆದ ಸಭೆಯಲ್ಲಿ ಮಂಡಿಸಿದರು.
ಈ ಸಂದರ್ಭದಲ್ಲಿ ನಗರಸಭೆಯ ಲೆಕ್ಕ ಅಧೀಕ್ಷಕರಾದ ಎಂ.ಎನ್.ಸಾಗರೇಕರ ಇವರು ಒಟ್ಟು ರೂ.45.93 ಕೋಟಿಗಳ ಆಯ ಮತ್ತು ರೂ.45.70 ಕೋಟಿಗಳ ವ್ಯಯವುಳ್ಳ ಅಂದಾಜು ವ್ಯಯವನ್ನು ಓದಿ ಹೇಳುವ ಮೂಲಕ ಅನುಮೋದನೆಯನ್ನು ಪಡೆಯಲಾಯಿತು.
ನಗರದಲ್ಲಿ ಎಸ್.ಎಫ್.ಸಿ. ವಿಶೇಷ ಅನುದಾನ ರೂ.25. ಕೋಟಿಯಲ್ಲಿ ಮೂಲಭೂತ ಸೌಕರ್ಯಗಳನ್ನು ಅಭಿವೃದ್ದಿ ಪಡಿಸಲು, ರೂ.9.85 ಕೋಟಿ ವಿಶೇಷ ಅನುದಾನದಲ್ಲಿ ಕಾರ್ಯಾಲಯದ ಹೊಸ ಕಟ್ಟಡ ನಿರ್ಮಾಣಕ್ಕಾಗಿ ಮತ್ತು ಅಂದಾಜು ರೂ.3. ಕೋಟಿ ಅನುದಾನದಲ್ಲಿ ವಾಣಿಜ್ಯ ಮಳಿಗೆಗಳ ನಿರ್ಮಾಣಕ್ಕಾಗಿ ಹಾಗೂ 15ನೇ ಹಣಕಾಸು ಯೋಜನೆ ಒಳಗೊಂಡಂತೆ ರಸ್ತೆ/ಚರಂಡಿ/ಬೀದಿ ದೀಪ, ಉದ್ಯಾನವನ, ನೀರು ಸರಬರಾಜು, ಒಳಚರಂಡಿ ಇತ್ಯಾದಿ ಕಾಮಗಾರಿಗಳಿಗಾಗಿ ಆಯವ್ಯಯದಲ್ಲಿ ಪ್ರಸ್ತಾಪಿಸಲಾಗಿದೆ.
ಎಸ್.ಸಿ./ಎಸ್.ಟಿ. ಬಡತನ ನಿರ್ಮೂಲನೆಗಾಗಿ ರೂ.31.20 ಲಕ್ಷ, ಇತರೆ ಬಡ ಜನಾಂಗದ ಅಭಿವೃದ್ದಿಗಾಗಿ ರೂ.15.54 ಲಕ್ಷ ಮತ್ತು ವಿಕಲಚೇತನರಿಗಾಗಿ ರೂ.6.44 ಲಕ್ಷ ಅಂದಾಜು ಖರ್ಚುಗಳನ್ನು ಸಭೆಯಲ್ಲಿ ಓದಿ ವಿವರಿಸಿದರು.
ಸಭೆಯಲ್ಲಿ ಹಾಜರಿದ್ದ ಉಪಾಧ್ಯಕ್ಷ ಬಸವರಾಜ ಅರೆನ್ನವರ ಮತ್ತು ಇತರ ಸದಸ್ಯರುಗಳು ಸಂಪನ್ಮೂಲಗಳನ್ನು ಹೆಚ್ಚಿಸಿಕೊಂಡು ಉತ್ತಮ ಸೇವೆಗಳನ್ನು ಸಾರ್ವಜನಿಕರಿಗೆ ನೀಡುವಂತೆ ಸಲಹೆ ನೀಡಿದರು.
ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರುಗಳಾದ ವ್ಹಿ.ಎಂ.ಸಾಲಿಮಠ, ಎಂ.ಹೆಚ್.ಗಜಾಕೋಶ ಸೇರಿದಂತೆ ಸಿಬ್ಬಂದಿಯವರು ಇದ್ದರು.