ಗೋಕಾಕ:ಅವಿರೋಧ ಆಯ್ಕೆಯಾದ ಮಕ್ಕಳಗೇರಿ ಪಂಚಾಯಿತಿ ಸದಸ್ಯರಿಂದ ಸಚಿವರಿಗೆ ಸತ್ಕಾರ
ಅವಿರೋಧ ಆಯ್ಕೆಯಾದ ಮಕ್ಕಳಗೇರಿ ಪಂಚಾಯಿತಿ ಸದಸ್ಯರಿಂದ ಸಚಿವರಿಗೆ ಸತ್ಕಾರ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಡಿ 16 :
ತಾಲೂಕಿನ ಮಕ್ಕಳಗೇರಿ ಗ್ರಾಮ ಪಂಚಾಯತಿಗೆ 3 ಜನ ಸದಸ್ಯರು ಅವಿರೋಧ ಆಯ್ಕೆಯಾದ ಹಿನ್ನೆಲೆಯಲ್ಲಿ ಸದಸ್ಯರು ಹಾಗೂ ಗ್ರಾಮದ ಮುಖಂಡರು ಸಚಿವ ರಮೇಶ ಜಾರಕಿಹೊಳಿ ಅವರನ್ನು ಬುಧವಾರದಂದು ನಗರದ ಅವರ ಕಾರ್ಯಾಲಯದಲ್ಲಿ ಸತ್ಕರಿಸಿದರು.
ಈ ಸಂದರ್ಭದಲ್ಲಿ ಜಿ.ಪಂ ಸದಸ್ಯರಾದ ಟಿ. ಆರ್. ಕಾಗಲ, ಮಡೆಪ್ಪ ತೋಳಿನವರ, ತಾ.ಪಂ ಸದಸ್ಯ ಭರಮನ್ನ ಮುತ್ತೆಣ್ಣವರ, ಅವಿರೋಧ ಆಯ್ಕೆಗೊಂಡ ಸದಸ್ಯರಾದ ಪುಂಡಲಿಕ ಕಾಗಲ್, ಸಾವಕ್ಕ ದುರದುಂಡಿ, ಉದ್ಧವ ದಂಡಿನ ಹಾಗೂ ಮುಖಂಡರಾದ ಶಿವಪುತ್ರ ದುರದುಂಡಿ, ಪಾಂಡಪ್ಪ ಮೇಟಿ, ಶಿವರಾಯ ದಂಡಿನ, ರಮೇಶ ಬಚ್ಚನ್ನವರ, ಎಲ್.ಎಂ ದಂಡಿನ, ಎಸ್.ಆರ್.ಹೂಲಿಕಟ್ಟಿ, ಸಿದರಾಯ ದುರದುಂಡಿ, ಬಸವರಾಜ ದುರದುಂಡಿ, ವೆಂಕಪ್ಪ ಕಿತ್ತೂರು, ಶಿವಲಿಂಗಪ್ಪ ದುರದುಂಡಿ ಸೇರಿದಂತೆ ಅನೇಕರು ಇದ್ದರು.