RNI NO. KARKAN/2006/27779|Monday, August 4, 2025
You are here: Home » breaking news » ಗೋಕಾಕ:ಸಮುದಾಯಗಳು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡುವಂತೆ ಜಾಗೃತಿ ಮೂಡಿಸಬೇಕು : ಬಿ.ವಾಯ್. ಹನ್ನೂರ

ಗೋಕಾಕ:ಸಮುದಾಯಗಳು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡುವಂತೆ ಜಾಗೃತಿ ಮೂಡಿಸಬೇಕು : ಬಿ.ವಾಯ್. ಹನ್ನೂರ 

ಸಮುದಾಯಗಳು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡುವಂತೆ ಜಾಗೃತಿ ಮೂಡಿಸಬೇಕು : ಬಿ.ವಾಯ್. ಹನ್ನೂರ

 
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 31 :

 
ವಾಲ್ಮೀಕಿ ಜಯಂತಿಯ ಮೂಲಕ ಸಮುದಾಯಗಳು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡುವಂತೆ ಜಾಗೃತಿ ಮೂಡಿಸಬೇಕೆಂದು ಬೆಳಗಾವಿಯ ಸರಕಾರಿ ಸರಸ್ವತಿ ಬಾಲಕಿಯರ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಬಿ.ವಾಯ್. ಹನ್ನೂರ ಹೇಳಿದರು

ಶನಿವಾರದಂದು ನಗರದ ಲಕ್ಷ್ಮೀ ಎಜುಕೇಶನ್ ಟ್ರಸ್ಟಿನ ಶ್ರೀ ಲಕ್ಷ್ಮಣರಾವ್ ಜಾರಕಿಹೊಳಿ ಪ್ರಾಥಮಿಕ, ಪ್ರೌಢ , ಆಂಗ್ಲ ಮಾಧ್ಯಮ ಶಾಲೆ ಹಾಗೂ ಕಾಲೇಜಿನ ವಿವಿಧ ವಿಭಾಗಗಳ ಆಶ್ರಯದಲ್ಲಿ ಹಮ್ಮಿಕೊಂಡ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡುತ್ತಿದ್ದರು

ಶೈಕ್ಷಣಿಕ ಪ್ರಗತಿಯಿಂದ ಸಮುದಾಯಗಳ ಅಭಿವೃದ್ಧಿ ಸಾಧ್ಯ ಮಹಿಳೆಯರು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿ ಸಾಮಾಜಿಕವಾಗಿ ಮುಂದೆ ಬರಬೇಕು ಸರಕಾರ ಹಾಗೂ ಸಂಘ ಸಂಸ್ಥೆಗಳು ನೀಡುತ್ತಿರುವ ಸೌಲಭ್ಯಗಳ ಸದುಪಯೋಗದಿಂದ ಶೈಕ್ಷಣಿಕವಾಗಿ ಪ್ರಗತಿ ಹೊಂದಿದರೆ ಈ ಜಯಂತಿ ಆಚರಣೆ ಅರ್ಥಪೂರ್ಣವಾಗಿರುತ್ತದೆ ಎಂದರು.
ಮರ್ಯಾದ ಪುರುಷೋತ್ತಮ ಶ್ರೀರಾಮನ ಕುರಿತು ವಾಲ್ಮೀಕಿ ರಚಿಸಿದ ಮಹಾನ ಗ್ರಂಥ ರಾಮಾಯಣ ಸರ್ವಕಾಲಕ್ಕೂ ಎಲ್ಲರಿಗು ದಾರಿದೀಪವಾಗಿದೆ. ರತ್ನಾಕರ ಧೀರ್ಘ ತಪ್ಪಸಿನಿಂದ ಜ್ಞಾನ ಹೊಂದಿ ವಾಲ್ಮೀಕಿಯಾಗಿ ರಾಮಾಯಣ ರಚಿಸಿ ಆದಿಕವಿಯಾದರು. ರಾಮಾಯಣ ಮನುಕುಲಕ್ಕೆ ಮಾರ್ಗದರ್ಶಿಯಾಗಿದ್ದು, ಯಾವುದೇ ಜಾತಿಗೆ ಸೀಮಿತಗೋಳ್ಳದೆ ಜಗತ್ತಿಗೆ ಮೌಲ್ಯಗಳ ಸಂದೇಶವನ್ನು ನೀಡಿದೆ. ಇವುಗಳನ್ನು ಆಚರಣೆ ತರುವುದರ ಮೂಲಕ ರಾಮರಾಜ್ಯ ನಿರ್ಮಿಸಲು ನಾವೆಲ್ಲ ಶ್ರಮಿಸೋಣಾ ವೆಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸನತ ಜಾರಕಿಹೊಳಿ ವಹಿಸಿದ್ದರು.

ವೇದಿಕೆಯಲ್ಲಿ ವಿವಿಧ ಅಂಗ ಸಂಸ್ಥೆಗಳ ಮುಖ್ಯಸ್ಥರಾದ ಆಯ್.ಎಸ್ ಪವಾರ, ಎನ್.ಕೆ ಮೀರಾಶಿ, ಪಿ.ಡಿ ಪಂಚಾಳ, ಬಿ.ಕೆ ಕುಲಕರ್ಣಿ, ಎಚ್.ವ್ಹಿ ಪಾಗನೀಸ, ಪಿ.ವ್ಹಿ ಚಚಡಿ ಇದ್ದರು.
ಶಿಕ್ಷಕ ಎಸ್.ಬಿ.ಬೇಕ್ಕನ್ನವರ ಸ್ವಾಗತಿಸಿ ವಂದಿಸಿದರು

Related posts: