RNI NO. KARKAN/2006/27779|Tuesday, October 14, 2025
You are here: Home » breaking news » ಗೋಕಾಕ:ವಾರ್ಡ ನಂ 22 ರಲ್ಲಿ ಬಿಜೆಪಿ ಸರಕಾರದ ಒಂದು ವರ್ಷ ಪೂರೈಸಿದ ನಿಮಿತ್ತ ಸ್ಪಂದನೆ ಸಾಧನೆಯ ಕರಪತ್ರ ವಿತರಣೆ

ಗೋಕಾಕ:ವಾರ್ಡ ನಂ 22 ರಲ್ಲಿ ಬಿಜೆಪಿ ಸರಕಾರದ ಒಂದು ವರ್ಷ ಪೂರೈಸಿದ ನಿಮಿತ್ತ ಸ್ಪಂದನೆ ಸಾಧನೆಯ ಕರಪತ್ರ ವಿತರಣೆ 

ವಾರ್ಡ ನಂ 22 ರಲ್ಲಿ ಬಿಜೆಪಿ ಸರಕಾರದ ಒಂದು ವರ್ಷ ಪೂರೈಸಿದ ನಿಮಿತ್ತ ಸ್ಪಂದನೆ ಸಾಧನೆಯ ಕರಪತ್ರ ವಿತರಣೆ

 

 

ನಮ್ಮ ಬೆಳಗಾವಿ ಇ – ವಾರ್ತೆ ,ಗೋಕಾಕ ಅ 4 :

 

ಇಲ್ಲಿನ ಅಂಬೇಡ್ಕರ್ ನಗರದ  ವಾರ್ಡ ನಂ 22 ರಲ್ಲಿ ಬಿ.ಎಸ್ ಯಡಿಯೂರಪ್ಪನವರ ನೇತೃತ್ವದ ಬಿಜೆಪಿ ಸರಕಾರದ ಒಂದು ವರ್ಷ ಪೂರೈಸಿದ ನಿಮಿತ್ತ ಮಂಗಳವಾರದಂದು ವಾರ್ಡನ ಕಾರ್ಯಕರ್ತರು  ಸರಕಾರದ ಒಂದು ವರುಷದ ಸಂಕಷ್ಟ ಸವಾಲುಗಳ ನಡುವೆ ಸಂವೇದನೆ ಸ್ಪಂದನೆ ಸಾಧನೆಯ ಕರಪತ್ರನ್ನು ಮನೆ ಮನೆಗೆ ತಲಪಿಸಿದರು.

ಬಡವರ , ದಿನ ದಲಿತರ ಪರವಾಗಿರುವ ಯಡಿಯೂರಪ್ಪ ನೇತೃತ್ವದ ಬಿಜೆಪಿ  ಸರಕಾರ 2.07 ಲಕ್ಷ ಪ್ರವಾಹ ಸಂತ್ರಸ್ತರ ಕುಟುಂಬಗಳಿಗೆ 10 ಸಾವಿರ ರೂಗಳಂತೆ ಒಟ್ಟು  207 ಕೋಟಿ ರೂ ಪರಿಹಾರ , ಕೃಷಿ ಬೆಳೆಗಾರರಿಗೆ ಪರಿಹಾರ ರೂಪವಾಗಿ 645 ಲಕ್ಷ ರೈತರ ಖಾತೆಗಳಿಗೆ 1185.40 ಕೋಟಿ ರೂ ಜಮಾವಣೆ ಸೇರಿದಂತೆ ಹತ್ತು ಹಲವಾರು ಕಾರ್ಯಕ್ರಮಗಳನ್ನು ಯಡಿಯೂರಪ್ಪ ಸರಕಾರ ಬಡವರಿಗಾಗಿ ರೂಪಿಸಿ ಕಾರ್ಯಪ್ರವೃತವಾಗಿದೆ ಎಂದು ಕಾರ್ಯಕರ್ತರು ಸಾರ್ವಜನಿಕರಿಗೆ ತಿಳಿ ಹೇಳಿದರು

ಈ ಸಂದರ್ಭದಲ್ಲಿ  ವಾರ್ಡ ನ ಪ್ರಮುಖರಾದ ಅಬ್ಬಾಸ ದೇಸಾಯಿ, ಸಾದಿಕ ಹಲ್ಯಾಳ , ಅಲ್ಲಾಂ ಹಯಾತಖಾನ, ರಮಜಾನ ಅಂಡಗಿ, ಮಸ್ತಾನ ಜಮಾದಾರ, ಮುನ್ನಾ ಅಂಕಲಗಿ, ಅಜೀಜ ಪಠಾಣ, ರಪೀಕ ಗುಳೆದಗುಡ್ಡ , ಮದಾರ ಮುಲ್ಲಾ,  ಅಬ್ಬು ಮುಜಾವರ, ಶರಣ ತಳವಾರ , ಗಂಗಾರಾಮ ಕಲಾಲ, ಸೇರಿದಂತೆ ಇತರರು ಇದ್ದರು.

Related posts: