RNI NO. KARKAN/2006/27779|Tuesday, October 14, 2025
You are here: Home » breaking news » ಗೋಕಾಕ:ಗುಣಮುಖರಾಗಿ ಗ್ರಾಮಕ್ಕೆ ಹಿಂದುರಿಗಿದ ಯುವಕನಿಗೆ ಹೂಗಚ್ಚ ನೀಡಿ ಸ್ವಾಗತ

ಗೋಕಾಕ:ಗುಣಮುಖರಾಗಿ ಗ್ರಾಮಕ್ಕೆ ಹಿಂದುರಿಗಿದ ಯುವಕನಿಗೆ ಹೂಗಚ್ಚ ನೀಡಿ ಸ್ವಾಗತ 

ಗುಣಮುಖರಾಗಿ ಗ್ರಾಮಕ್ಕೆ ಹಿಂದುರಿಗಿದ ಯುವಕನಿಗೆ ಹೂಗಚ್ಚ ನೀಡಿ ಸ್ವಾಗತ

 

 

ನಮ್ಮ ಬೆಳಗಾವಿ ಇ – ವಾರ್ತೆ, ಬೆಟಗೇರಿ ಜು 23 :

 

 
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ವ್ಯಕ್ತಿಯೊರ್ವನಿಗೆ ಕರೊನಾ ಸೋಂಕು ತಗುಲಿರುವದು ದೃಡಪಟ್ಟ ಹಿನ್ನಲೆಯಲ್ಲಿ ಗೋಕಾಕ ಕೋವಿಡ್ ಕೇರ್ ಸೆಂಟರ್‍ಗೆ ಜು.18 ರಂದು ಚಿಕಿತ್ಸೆಗಾಗಿ ಸ್ಥಳಾಂತರಿಸಲಾಗಿತ್ತು. ಸೋಂಕಿತ ವ್ಯಕ್ತಿಯು ಗುರುವಾರ ಜು.23 ರಂದು ಗುಣಮುಖರಾಗಿ ಗ್ರಾಮಕ್ಕೆ ಹಿಂದುರಿಗಿದ ಪ್ರಯುಕ್ತ ಹೂಗುಚ್ಚ ನೀಡಿ ಅವರ ಮನೆಗೆ ಸ್ಥಳೀಯ ಗ್ರಾಮ ಪಂಚಾಯತಿ ಸಹಯೋಗದಲ್ಲಿ ಬೀಳ್ಕೂಡಲಾಯಿತು.
ಸ್ಥಳೀಯ ಸೋಂಕಿತ ವ್ಯಕ್ತಿಯು ಈಗ ಗುಣಮುಖವಾಗಿ ಮನೆಗೆ ಬಂದರೂ ಇನ್ನೂ 14 ದಿನಗಳ ಕಾಲ ಹೋಮ್ ಕ್ವಾರೆಂಟ್‍ನಲ್ಲಿರಬೇಕು. ಕರೊನಾ ಸೋಂಕು ತಗುಲಿರುವ ಲಕ್ಷಣವಿರುವ ಗ್ರಾಮದ ಸೋಕಿತನ ಮನೆಯ ಸುತ್ತಲಿನ ಸುಮಾರು 50ಮೀ ಪ್ರದೇಶಕ್ಕೆ ಇನ್ನೂ 7 ದಿನಗಳ ಕಾಲ ಸೀಲ್‍ಡೌನ್ ಜಾರಿಯಲ್ಲಿರುತ್ತದೆ. ಇಲ್ಲಿಯ ಸೀಲ್‍ಡೌನ್ ಪ್ರದೇಶದ ವ್ಯಾಪ್ತಿಯಲ್ಲಿ ಯಾರೂ ಅನವಶ್ಯಕವಾಗಿ ಓಡಾಡಬಾರದು ಎಂದು ಮಮದಾಪೂರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಶ್ರೀಧರ ವಾಲಿಕಾರ ತಿಳಿಸಿದರು.
ಗ್ರಾಮ ಪಂಚಾಯತಿ ಪಿಡಿಒ ಎಚ್.ಎನ್.ಬಾವಿಕಟ್ಟಿ, ಗ್ರಾಪಂ ಮಾಜಿ ಸದಸ್ಯರಾದ ಅರ್ಜುನ ಅಂದಾನಿ, ಶ್ರೀಧರ ದೇಯಣ್ಣವರ, ಬಸವರಾಜ ಪಣದಿ, ಗ್ರಾಪಂ ಕಾರ್ಯದರ್ಶಿ ಪರಶುರಾಮ ಇಟಗೌಡ್ರ, ಗೌಡಪ್ಪ ಮಾಳೇದ, ಸುರೇಶ ಬಾಣಸಿ, ಪ್ರಾಥಮಿಕ ಆರೋಗ್ಯ ಕೇಂದ್ರದ ಸರೋಜಾ ಮಟಗಿ, ಕಲ್ಲಪ್ಪ ಹುಬ್ಬಳ್ಳಿ, ವಿಠಲ ಚಂದರಗಿ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಪ್ರಾಥಮಿಕ ಆರೋಗ್ಯ ಕೇಂದ್ರದ ಮತ್ತು ಗ್ರಾಪಂ ಸಿಬ್ಬಂದಿ, ಇತರರು ಇದ್ದರು.

Related posts: