RNI NO. KARKAN/2006/27779|Thursday, October 16, 2025
You are here: Home » breaking news » ಗೋಕಾಕ:ರವಿವಾರ ಫುಲ್ ಡೇ ಗೋಕಾಕ ಮಾರುಕಟ್ಟೆ ಬಂದ್ : ತಹಶೀಲ್ದಾರ ಪ್ರಕಾಶ ಹೋಳೆಪ್ಪಗೋಳ ಮಾಹಿತಿ

ಗೋಕಾಕ:ರವಿವಾರ ಫುಲ್ ಡೇ ಗೋಕಾಕ ಮಾರುಕಟ್ಟೆ ಬಂದ್ : ತಹಶೀಲ್ದಾರ ಪ್ರಕಾಶ ಹೋಳೆಪ್ಪಗೋಳ ಮಾಹಿತಿ 

ರವಿವಾರ ಫುಲ್ ಡೇ ಗೋಕಾಕ  ಮಾರುಕಟ್ಟೆ ಬಂದ್ : ತಹಶೀಲ್ದಾರ ಪ್ರಕಾಶ ಹೋಳೆಪ್ಪಗೋಳ ಮಾಹಿತಿ

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಮೇ 23 : 

 

ಶನಿವಾರ ಸಂಜೆ 7 ಗಂಟೆಯಿಂದ ಸೋಮವಾರ ಬೆಳಿಗ್ಗೆ 7 ಗಂಟೆಯವರೆಗೆ ಗೋಕಾಕದಲ್ಲಿ  ಕರ್ಫ್ಯೂ ಮಾದರಿಯ ಲಾಕ್ ಡೌನ್ ಇರುತ್ತದೆ ಎಂದು ಗೋಕಾಕ ತಹಶೀಲ್ದಾರ ಪ್ರಕಾಶ ಹೋಳೆಪ್ಪಗೋಳ  ತಿಳಿಸಿದ್ದಾರೆ.

ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿರುವ  ಅವರು

ಶನಿವಾರ ಸಂಜೆ 7 ಗಂಟೆಯಿಂದ ನಗರದಲ್ಲಿ  ಮಾರುಕಟ್ಟೆಗೆ ಅವಕಾಶ ಇರುವದಿಲ್ಲ .  ರವಿವಾರ ಫುಲ್ ಡೇ ಗೋಕಾಕ  ಮಾರುಕಟ್ಟೆ ಬಂದ್ ಇರುತ್ತದೆ. ಸೋಮವಾರ ಬೆಳಿಗ್ಗೆ 7 ಗಂಟೆಗೆ ಎಂದಿನಂತೆ ಮತ್ತೆ   ಮಾರುಕಟ್ಟೆ ಆರಂಭವಾಗಲ್ಲಿದ್ದು ,  ಈ ಅವಧಿಯಲ್ಲಿ ಮೆಡಿಕಲ್ ಎಮರ್ಜನ್ಸಿ ಬಿಟ್ರೆ ಬೇರೆ ಯಾವ ಅಂಗಡಿಯೂ ತೆರೆಯಲು ಅವಕಾಶ ಇರುವದಿಲ್ಲ  ದ್ವಿಚಕ್ರ ವಾಹನ ಸೇರಿದಂತೆ ಯಾವುದೇ ವಾಹನಗಳ ಓಡಾಟಕ್ಕೆ ಕೂಡಾ ಅವಕಾಶ ಇರುವದಿಲ್ಲ,ಯಾರಾದರು ಈ ಸಂಧರ್ಭದಲ್ಲಿ ಸರ್ಕಾರದ ಆದೇಶ ಉಲ್ಲಂಘನೆ ಮಾಡಿದರೆ ಅವರ ವಿರುದ್ಧ ಶಿಸ್ತಿನ ಕ್ರಮ ಜರುಗಿಸುವದಾಗಿ ಪ್ರಕಾಶ ಹೋಳೆಪ್ಪಗೋಳ ಎಚ್ಚರಿಕೆ ನೀಡಿದ್ದಾರೆ.

ರವಿವಾರ ದಿನಪೂರ್ತಿ ಬಂದ್ ಇದ್ದು ಸೋಮವಾರ ಬೆಳಿಗ್ಗೆಯೇ ಗೋಕಾಕದಲ್ಲಿ  ಮಾರುಕಟ್ಟೆ ಶುರುವಾಗಲಿದ್ದು,ಗೋಕಾಕ ಹಾಗೂ ಗ್ರಾಮೀಣ ಭಾಗದ   ನಿವಾಸಿಗಳು ಅಗತ್ಯ ಆಹಾರ,ಮತ್ತು ಇನ್ನಿತರ ಸಾಮಗ್ರಿಗಳನ್ನು ಶನಿವಾರ  ಸಂಜೆ 7 ಗಂಟೆಯ ಒಳಗಾಗಿ ಖರೀದಿ ಮಾಡಲು ಅವಕಾಶ ಇರುತ್ತದೆ.

ಇಂದು ಸಂಜೆ 7 ಗಂಟೆಯ ನಂತರ ಸೋಮವಾರ ಬೆಳಗಿನ ವರೆಗೆ ಸಾರ್ವಜನಿಕರು   ಮನೆಯಿಂದ ಹೊರಗೆ ಬರದೆ ಮನೆಯಲ್ಲೇ ಇದ್ದು 1 ದಿನದ ಲಾಕಡೌನನ್ನು ಯಶಸ್ವಿಗೋಳಿಸಬೇಕು ಎಂದು ತಹಶೀಲ್ದಾರ ಪ್ರಕಾಶ ಹೋಳೆಪ್ಪಗೋಳ ವಿನಂತಿಸಿದ್ದಾರೆ

 

Related posts: