RNI NO. KARKAN/2006/27779|Tuesday, October 14, 2025
You are here: Home » breaking news » ಗೋಕಾಕ:ಲಾಕಡೌನ ತುರ್ತು ಪರಿಸ್ಥಿತಿಯಲ್ಲಿ ಸಾರ್ವಜನಿಕರಿಗೆ ಆರೋಗ್ಯ ತೊಂದರೆಯಾಗದಂತೆ ಕ್ರಮ : ಡಾ‌‌.ರವೀಂದ್ರ ಅಂಟಿನ

ಗೋಕಾಕ:ಲಾಕಡೌನ ತುರ್ತು ಪರಿಸ್ಥಿತಿಯಲ್ಲಿ ಸಾರ್ವಜನಿಕರಿಗೆ ಆರೋಗ್ಯ ತೊಂದರೆಯಾಗದಂತೆ ಕ್ರಮ : ಡಾ‌‌.ರವೀಂದ್ರ ಅಂಟಿನ 

ಲಾಕಡೌನ ತುರ್ತು ಪರಿಸ್ಥಿತಿಯಲ್ಲಿ ಸಾರ್ವಜನಿಕರಿಗೆ ಆರೋಗ್ಯ ತೊಂದರೆಯಾಗದಂತೆ ಕ್ರಮ : ಡಾ‌‌.ರವೀಂದ್ರ ಅಂಟಿನ

 

 
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಮಾ 31 :

 

 

ಲಾಕಡೌನ ತುರ್ತು ಪರಿಸ್ಥಿತಿಯಲ್ಲಿ ಸಾರ್ವಜನಿಕರಿಗೆ ಆರೋಗ್ಯ ತೊಂದರೆಯಾಗದಂತೆ ಸರಕಾರಿ ಆಸ್ಪತ್ರೆಯಲ್ಲಿ ಎಲ್ಲ ರೀತಿಯ ಸೌಲಭ್ಯ ಕಲ್ಪಿಸಲಾಗಿದೆ ಎಂದು ತಾಲೂಕಾ ವೈದ್ಯಾಧಿಕಾರಿ ಡಾ‌. ರವೀಂದ್ರ ಅಂಟಿನ ಹೇಳಿದರು

ಮಂಗಳವಾರದಂದು ನಗರದ ಸರಕಾರಿ ಆಸ್ಪತ್ರೆಯಲ್ಲಿ ತಮ್ಮನ್ನು ಬೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯಾದ್ಯಂತ ಲಾಕಡೌನ ಜಾರಿಯಲ್ಲಿರುವ ಸಂದರ್ಭದಲ್ಲಿ ಯಾರು ಕೂಡಾ ವಿನ್ಹಾಕಾರಣ ಮನೆಯಿಂದ ಹೊರಗಡೆ ಬಾರದೆ ತಮ್ಮ ಆರೋಗ್ಯವನ್ನು ಕಾಪಾಡಿಕೋಳ್ಳಬೇಕು ತುರ್ತು ಸಂದರ್ಭದಲ್ಲಿ ಆರೋಗ್ಯದ ತೊಂದರೆಯಾದರೆ ಮಾತ್ರ ಹೊರಗಡೆ ಬಂದು ಸರಕಾರಿ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆಗೆ ಯಾವುದೆ ತೊಂದರೆ ಆಗದಂತೆ ವ್ಯವಸ್ಥೆಯನ್ನು ಮಾಡಲಾಗಿದೆ ಸಾರ್ವಜನಿಕರು ಆತಂಕ ಪಡುವ ಅವಶ್ಯಕತೆ ಇಲ್ಲ ಎಂದರು

ನಗರದ ಖಾಸಗಿ ವೈದ್ಯರು ಸಹ ತಮ್ಮ ಜವಾಬ್ದಾರಿಯನ್ನು ಅರಿತು ಕಾರ್ಯನಿರ್ವಹಿಸಬೇಕು ಯಾರು ಕೂಡಾ ಸಾರ್ವಜನಿಕರ ಆರೋಗ್ಯದೊಂದಿಗೆ ಚಲ್ಲಾಟವಾಡದೆ ಅಗತ್ಯ ಪರಿಸ್ಥಿತಿಗಳಲ್ಲಿ ಬಂದವರಿಗೆ ಚಿಕಿತ್ಸೆ ನೀಡಬೇಕು ಚಿಕಿತ್ಸೆ ನೀಡದ ಕುರಿತು ಯಾವುದೆ ದೂರುಗಳು ಬಂದರೆ ಅಂತಹ ವೈದ್ಯರ ಮೇಲೆ ಕಾನೂನು ರೀತ್ಯ ಕಠಿಣ ಕ್ರಮ ಕೈಗೋಳ್ಳಲಾಗುವದು . ನಗರದ ಎಲ್ಲ ಖಾಸಗಿ ವೈದ್ಯರು ,ಆಯುಷ್ಯ ವೈದ್ಯರು ಸ್ಥಾನಿಕವಾಗಿ ಇದ್ದು ಸಾರ್ವಜನಿಕರಿಗೆ ಸೇವೆ ಒದಗಿಸಬೇಕೆಂದು ತಾಲೂಕಾ ವೈದ್ಯಾಧಿಕಾರಿ ಡಾ.ಅಂಟಿನ ವಿನಂತಿಸಿದ್ದಾರೆ

Related posts: