ಗೋಕಾಕ:ಡಾ.ಜಯಾನಂದ ಹಟ್ಟಿ ಅವರಿಗೆ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಅವಾರ್ಡ
ಡಾ.ಜಯಾನಂದ ಹಟ್ಟಿ ಅವರಿಗೆ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಅವಾರ್ಡ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಮಾ 15 :
ಕಲಘಟಗಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಹಾಗೂ ಗೋಕಾಕದ ನಿವೃತ್ತ ಮುಖ್ಯೋಪಾಧ್ಯಾಪಕ ವಿಠ್ಠಲ ಭಾಗಪ್ಪ ಹಟ್ಟಿ ಅವರ ಸುಪುತ್ರ ಡಾ.ಜಯಾನಂದ ವಿಠ್ಠಲ ಹಟ್ಟಿ ಅವರಿಗೆ
ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಲೈಫ್ ಟೈಮ್ ಅಚೀವಮೆಂಟ ನ್ಯಾಷನಲ್ ಅವಾರ್ಡ ದೊರಕಿದೆ.
ಇತ್ತೀಚೆಗೆ ಬೆಂಗಳೂರಿನ ಅಂತರ್ರಾಷ್ಟ್ರೀಯ ಸಾಮಾಜಿಕ ಆರ್ಥಿಕ ಸುಧಾರಣೆಗಳ ಸಂಸ್ಥೆಯ ವಾರ್ಷಿಕೋತ್ಸವ ದಿನಾಚರಣೆ ನಿಮಿತ್ಯ ಹಮ್ಮಿಕೊಳ್ಳಲಾದ ಸಾಂಸ್ಕøತಿಕ ಹಾಗೂ ರಾಷ್ಟ್ರೀಯ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಡಾ.ಜಯಾನಂದ ವಿಠ್ಠಲ ಹಟ್ಟಿ ಅವರಿಗೆ ಸಂಸ್ಥೆಯ ಅಧ್ಯಕ್ಷ ಡಾ.ಎಚ್.ವಿ.ಶಿವಪ್ಪ ಹಾಗೂ ಕಾರ್ಯದರ್ಶಿ ಜಿ.ಎಸ್.ದೇಸಾಯಿ ಅವರು ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಲೈಫ್ ಟೈಮ್ ಅಚೀವಮೆಂಟ ನ್ಯಾಷನಲ್ ಅವಾರ್ಡ ನೀಡಿ ಗೌರವಿಸಿದರು.