ಬೆಳಗಾವಿ:ಕರವೇ ನೂತನ ಜಿಲ್ಲಾಧ್ಯಕ್ಷರಾಗಿ ದೀಪಕ ಗುಡಗನಟ್ಟಿ ನೇಮಕ
ಕರವೇ ನೂತನ ಜಿಲ್ಲಾಧ್ಯಕ್ಷರಾಗಿ ದೀಪಕ ಗುಡಗನಟ್ಟಿ ನೇಮಕ
ನಮ್ಮ ಬೆಳಗಾವಿ ಇ – ವಾರ್ತೆ, ಬೆಳಗಾವಿ ಮಾ 12:
ದೀಪಕ ಗುಡಗನಟ್ಟಿ ಅವರನ್ನು ಕರವೇ ನೂತನ ಬೆಳಗಾವಿ ಜಿಲ್ಲಾ ಘಟಕದ ಅಧ್ಯಕ್ಷರನ್ನಾಗಿ ನೇಮಿಸಿ ಸಂಘಟನೆಯ ರಾಜಾಧ್ಯಕ ಟಿ.ಎ.ನಾರಾಯಣಗೌಡ ಆದೇಶಿಸಿದ್ದಾರೆ
ಗುರುವಾರದಂದು ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಜರುಗಿದ ಜಿಲ್ಲಾ ಪದಾಧಿಕಾರಿಗಳ ಸಭೆಯಲ್ಲಿ ರಾಜ್ಯ ಸಂಚಾಲಕರಾಗಿ ನೇಮಕವಾಗಿರುವ ಮಹಾದೇವ ತಳವಾರ ಅವರು ಆಯ್ಕೆ ವಿಷಯ ತಿಳಿಸಿ , ಆದೇಶ ಪತ್ರವನ್ನು ನೂತನ ಜಿಲ್ಲಾಧ್ಯಕ್ಷರಾಗಿ ನೇಮಕವಾಗಿರುವ ದೀಪಕ ಗುಡಗನಟ್ಟಿ ಅವರಿಗೆ ಹಸ್ತಾಂತರಿಸಿದ್ದಾರೆ.
ನೂತನ ಜಿಲ್ಲಾಧ್ಯಕ್ಷರಾಗಿ ನೇಮಕವಾಗಿರುವ ದೀಪಕ ಗುಡಗನಟ್ಟಿ ಅವರು ಪತ್ರಿಕೆಯೊಂದಿಗೆ ಮಾತನಾಡಿ ಕನ್ನಡ ನಾಡು ,ನುಡಿ ಸೇವೆಯನ್ನು ಪರಿಗಣಿಸಿ ರಾಜ್ಯಧ್ಯಕ್ಷ ನಾರಾಯಣಗೌಡರು ನನಗೆ ಜಿಲ್ಲಾಧ್ಯಕ್ಷರನ್ನಾಗಿ ನೇಮಿಸಿ ಹೆಚ್ಚಿನ ಜವಾಬ್ದಾರಿಯನ್ನು ನೀಡಿದ್ದಾರೆ. ಜಿಲ್ಲಾ ಮತ್ತು ಎಲ್ಲ ತಾಲೂಕಾ ಪಧಾಧಿಕಾರಿಗಳೊಂದಿಗೆ ಕೂಡಿಕೊಂಡು ಬೆಳಗಾವಿ ಜಿಲ್ಲೆಯಲ್ಲಿ ಸಂಘಟನೆಯನ್ನು ಮತ್ತಷ್ಟು ಬಲ ಪಡಿಸಲು ಶ್ರಮಿಸಲಾಗುವದು ಎಂದು ತಿಳಿಸಿದ್ದಾರೆ.