ಗೋಕಾಕ:ಪಲ್ಸ್ ಪೋಲಿಯೋ ಟ್ರೋಫಿ : ಪೊಲೀಸ ಇಲಾಖೆ ತಂಡದ ವಿರುದ್ದ ಪತ್ರಕರ್ತರ ತಂಡಕ್ಕೆ 4 ರನ್ನ ಗಳ ರೋಚಕ ಗೆಲವು
ಪಲ್ಸ್ ಪೋಲಿಯೋ ಟ್ರೋಫಿ :
ಪೊಲೀಸ ಇಲಾಖೆ ತಂಡದ ವಿರುದ್ದ ಪತ್ರಕರ್ತರ ತಂಡಕ್ಕೆ 4 ರನ್ನ ಗಳ ರೋಚಕ ಗೆಲವು
ಗೋಕಾಕ ಅ 12: ರೋಟರಿ ಸಂಸ್ಥೆ ಹಾಗೂ ತಾಲೂಕಾಡಳಿತ ಸ್ವಾತಂತ್ರೋತ್ಸವ ಅಂಗವಾಗಿ ನಗರದ ಮಯೂರ ಸ್ಕೂಲ ಮೈದಾನದಲ್ಲಿ ಆಯೋಜಿಸಿದ್ದ ಪಲ್ಸ್ ಪೋಲಿಯೋ ಟ್ರೋಪಿ ಕ್ರಿಕೇಟ್ ಪಂದ್ಯಾವಳಿಯನ್ನು ರೋಟರಿ ರಕ್ತ ಭಂಡಾರದ ಕಾರ್ಯದರ್ಶಿ ಸೋಮಶೇಖರ ಮಗದುಮ್ ಶನಿವಾರದಂದು ಉದ್ಘಾಟಿಸಿ ಮಾತನಾಡಿ ಈ ಪಂದ್ಯಾವಳಿಯು ಸರ್ಕಾರಿ ಇಲಾಖೆಗಳು ಮತ್ತು ಸಂಘಗಳ ನಡುವೆ ನಡೆಯಲಿದ್ದು ಸ್ನೇಹ ಪೂರ್ವಕವಾಗಿ ಪಂದ್ಯದಲ್ಲಿ ಪಾಲ್ಗೊಂಡು ಆಟವನ್ನು ಆಡಬೇಕು ಎಂದು ತಿಳಿಸಿದರು.
ಪ್ರಥಮ ಪಂದ್ಯ ಪತ್ರಕರ್ತರ ತಂಡ ಹಾಗೂ ಪೊಲೀಸ ಇಲಾಖೆ ತಂಡಗಳ ನಡುವೆ ನಡೆದು ರೋಚಕ ಪಂದ್ಯದಲ್ಲಿ 4 ರನ್ ಗಳಿಂದ ಪತ್ರಕರ್ತರ ತಂಡ ಗೆಲವು ಸಾಧಿಸಿತು.
ಈ ಸಂದರ್ಭದಲ್ಲಿ ರೋಟರಿ ಸಂಸ್ಥೆಯ ಅಧ್ಯಕ್ಷ ಸತೀಶ ಬೆಳಗಾವಿ, ಕಾರ್ಯದರ್ಶಿ ದಿಲೀಪ ಮೆಳವಂಕಿ, ಸದಸ್ಯರಾದ ಕೆಂಚಪ್ಪ ಭರಮಣ್ಣವರ, ಬಸವರಾಜ ಗಂಜಿ, ಪತ್ರಕರ್ತರು ಹಾಗೂ ಪೊಲೀಸ ತಂಡದವರು ಸೇರಿದಂತೆ ಅನೇಕರು ಇದ್ದರು.