ಘಟಪ್ರಭಾ:ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಅವರಿಂದ ಮಲ್ಲಾಪೂರ ಪಿ.ಜಿ ಯಲ್ಲಿ ಬಿರುಸಿನ ಪ್ರಚಾರ

ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಅವರಿಂದ ಮಲ್ಲಾಪೂರ ಪಿ.ಜಿ ಯಲ್ಲಿ ಬಿರುಸಿನ ಪ್ರಚಾರ
ನಮ್ಮ ಬೆಳಗಾವಿ ಇ – ವಾರ್ತೆ , ಘಟಪ್ರಭಾ ನ 28 :
ಗೋಕಾಕ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಅವರು ಗುರುವಾರ ಮಲ್ಲಾಪೂರ ಪಿ.ಜಿ ಪಟ್ಟಣದಲ್ಲಿ ಟೆಂಪಲ್ ರನ್ ನಡೆಸುವ ಮೂಲಕ ಬಿರುಸಿನ ಪ್ರಚಾರ ನಡೆಸಿದರು.
ಮೃತ್ಯುಂಜಯ ವೃತ್ತದಲ್ಲಿನ ದಾನಮ್ಮಾದೇವಿ ದೇವಸ್ಥಾನದಿಂದ ಪ್ರಾರಂಭವಾದ ಟೆಂಪಲ್‍ರನ್ ಕಾರ್ಯಕ್ರಮ ಪಂಚಲಿಂಗೇಶ್ವರ ದೇವಸ್ಥಾನ, ದುರ್ಗಾದೇವಿ ದೇವಸ್ಥಾನ, ಅಂಬಾ ಭವಾನಿ ದೇವಸ್ಥಾನ, ವಿಠಲ ಮಂದಿರ, ಮಾರುತಿ ಮಂದಿರ, ವಿಠೋಬಾ ಮಂದಿರ, ದಡ್ಡಿ ಲಗಮವ್ವಾ ದೇವಸ್ಥಾನ, ಗ್ರಾಮ ದೇವತೆಯಾದ ಲಕ್ಷ್ಮೀ ದೇವಸ್ಥಾನ, ದುರ್ಗಾದೇವಿ ದೇವಸ್ಥಾನ, ಪ್ರಭುದೇವರ ದೇವಸ್ಥಾನ, ಕಾಳಿಕಾದೇವಿ ದೇವಸ್ಥಾನಗಳಿಗೆ ಪಾದಯಾತ್ರೆ ಮೂಲಕ ಭೆಟ್ಟಿ ಕೊಟ್ಟು ದೇವರ ಆರ್ಶಿವಾದ ಪಡೆದುಕೊಂಡರು.
ರಸ್ತೆಯುದ್ಧಕ್ಕೂ ಮತದಾರರನ್ನು ಭೆಟ್ಟಿಯಾದ ಅವರು ತಮಗೆ ತಮ್ಮ ಅಮೂಲ್ಯವಾದ ಮತವನ್ನು ನೀಡಿ ಬಹುಮತದಿಂದ ಆರಿಸಿ ತರಬೇಕೆಂದು ವಿನಂತಿಸಿಕೊಂಡರು. ಪಾದಯಾತ್ರೆಯಲ್ಲಿ ಬಿಜೆಪಿ ಮುಖಂಡರು ನೂರಾರು ಕಾರ್ಯಕರ್ತರು ಇದ್ದರು.