ಗೋಕಾಕ:ಸರ್ಕಾರ ಬೀಳಿಸುವಷ್ಟು ಪವರ್ ಇರೋರಿಗೆ ಗೋಕಾಕ ತಾಲೂಕಿನ ಹಳ್ಳಿಗಳಲ್ಲಿ ಒಂದು ಬಸ್ ಬಿಡಿಸುವಷ್ಟು ಯೋಗತ್ಯೆ ಇಲ್ಲ : ಸತೀಶ ಜಾರಕಿಹೊಳಿ ವಾಗ್ದಾಳಿ

ಸರ್ಕಾರ ಬೀಳಿಸುವಷ್ಟು ಪವರ್ ಇರೋರಿಗೆ ಗೋಕಾಕ ತಾಲೂಕಿನ ಹಳ್ಳಿಗಳಲ್ಲಿ ಒಂದು ಬಸ್ ಬಿಡಿಸುವಷ್ಟು ಯೋಗತ್ಯೆ ಇಲ್ಲ : ಸತೀಶ ಜಾರಕಿಹೊಳಿ ವಾಗ್ದಾಳಿ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ನ, 23 :-
ಸರ್ಕಾರ ಬೀಳಿಸುವಷ್ಟು ಪವರ್ ಇರೋರು ಗೋಕಾಕ ತಾಲೂಕಿನ ಹಳ್ಳಿಗಳಲ್ಲಿ ಒಂದು ಬಸ್ ಬಿಡಿಸುವಷ್ಟು ಯೋಗತ್ಯೆ ಇಲ್ಲ ಅಂತಾ ಶಾಸಕ ಸತೀಶ ಜಾರಕಿಹೊಳಿ ಅವರು ರಮೇಶ ವಿರುದ್ದ ವಾಗ್ದಾಳಿ ನಡೆಸಿದ್ರು.
ಗೋಕಾಕ ಸ್ಥಳೀಯ ಮತದಾರರ ಸಭೆಯಲ್ಲಿ ಮಾತನಾಡಿದ ಅವರು, ನಾನು ಎಂಎಲ್ ಸಿ ಆದಾಗ ಬಿಟ್ಟ ಎರಡು ಬಸ್ ಗಳೇ ಇನ್ನು ಗೋಕಾಕ ತಾಲೂಕಿನ ಹಳ್ಳಿಗಳಲ್ಲಿ ಓಡಾಡುತ್ತಿವೆ. ಹಳ್ಳಿಗಳಲ್ಲಿ ಬಸ್ ಬಿಡಿಸುವಷ್ಠು ಸಣ್ಣ ಕೆಲಸವು ಇವರಿಂದ ಆಗಿಲ್ಲ ಎಂದು ಲೇವಡಿ ಮಾಡಿದ್ರು.
ಅಭಿವೃದ್ದಿಗಾಗಿ ಪಕ್ಷ ಬದಲಾವಣೆ ಮಾಡಿರುವುದಾಗಿ ಹೇಳುತ್ತಿದ್ದಾರೆ. ಆದ್ರೆ ಯಾರ ಅಭಿವೃದ್ದಿ ಅಂತಾ ಇನ್ನು ಗೊತ್ತಾಗುತ್ತಿಲ್ಲ. ಕಳೆದ 25 ವರ್ಷದಿಂದ ಶಾಸಕನಾಗಿ ಎರಡು ಬಾರಿ ಮಂತ್ರಿ ಆಗಿದ್ದವರಿಂದ ಆಗದ ಅಭಿವೃದ್ದಿ ಮುಂದೆ ಹೇಗಾಗುತ್ತದೆ. ತಮ್ಮ ಮನೆ ಮುಂದಿನ ರಸ್ತೆ ಮಾಡಿಸಿಕೊಳ್ಳೋಕೆ ಅವರಿಗೆ 5 ವರ್ಷ ಹಿಡಿದಿದೆ. 2 ಬಾರಿ ಚುನಾವಣೆಯಾದ್ರು ಇನ್ನು ರಸ್ತೆ ಕಾಮಗಾರಿ ಮುಗಿದಿಲ್ಲ. ಸದ್ಯ ನಾಕಾ ಬಳಿ ಬಂದು ನಿಂತಿದೆ. ಇಂತಹವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ ಎಂದು ಪ್ರಶ್ನಿಸಿದ್ರು.
ಜಾರಕಿಹೊಳಿ ಬ್ರ್ಯಾಂಡ್ ಮತ್ತು ಲಖನ್ ಸಹಾಯವಿತ್ತು :-
ರಮೇಶ ಜಾರಕಿಹೊಳಿ 5 ಬಾರಿ ಶಾಸಕರಾಗಿ ಆಯ್ಕೆಯಾಗಲು ಕಾಂಗ್ರೆಸ್ ಪಕ್ಷ, ಜಾರಕಿಹೊಳಿ ಬ್ರ್ಯಾಂಡ್, ಲಖನ್ ಜಾರಕಿಹೊಳಿ ಸಪೆÇೀರ್ಟ್ ನಿಂದ ಸುಲಭವಾಗಿ ಗೆಲ್ಲುತ್ತಿದ್ದರು. ಇವು ಇಲ್ಲದೇ ಈ ಭಾರಿ ಅವರ ‘ಖರೆ’ ಚುನಾವಣೆ ಆಗಲಿದೆ. ಕಾಂಗ್ರೆಸ್ ಬೆಂಬಲ. ನಿಮ್ಮ ಅಮೂಲ್ಯ ಮತಗಳಿಂದ ರಮೇಶ ರಾಜ್ಯದಲ್ಲಿ ಪ್ರಭಾವಿ ರಾಜಕಾರಣಿಯಾಗಲು ಸಹಕಾರಿಯಾಗಿದೆ. ನೀವು ಅವರ ಮೇಲೆ ತುಂಬಾ ಆತ್ಮೀಯತೆ ಇಟ್ಟುಕೊಂಡಿದ್ದೀರಿ. ಆದ್ರೆ ಆತ ನಿಮ್ಮನ್ನ ಕೇಳದೆ ಪಕ್ಷ ಬಿಟ್ಟಿದ್ದಾರೆ. ನಿಮ್ಮ ಅಭಿಪ್ರಾಯ ಸಂಗ್ರಹಿಸದೇ ತಮ್ಮ ಅಳಿಯನ ಅಭಿಪ್ರಾಯದ ಮೇರೆಗೆ ಬಿಜೆಪಿ ಸೇರಿದ್ದಾರೆ. ಗೋಕಾಕ ಜನತೆ ಈ ಬಾರಿ ಬದಲಾವಣೆ ಬಯಸಿದ್ದು, ಅದು ಕಾರ್ಯರೂಪಕ್ಕೂ ಬರಲಿದೆ ಎಂದರು.
ಮೋದಿ, ಅಮಿತ್ ಶಾ ರನ್ನ ಬೈದವರೇ ಬಿಜೆಪಿಯನ್ನು ಅಪ್ಪಿಕೊಂಡಿದ್ದಾರೆ ;-
ಕಳೆದ ಬಾರಿ ವಿಧಾನಸಭೆ ಚುನಾವಣೆ ವೇಳೆ ಗೋಕಾಕನಿಂದ ಸ್ಪರ್ಧಿಸೋಕೆ ಪ್ರಧಾನಿ ಮೋದಿ, ಅಮಿತ್ ಶಾ ಹಾಗೂ ಜಗದೀಶ ಶೆಟ್ಟರ್ ಅವರಿಗೂ ಸೆಡ್ಡು ಹೊಡೆದಿದ್ದರು. ಜೈಲಿಗೆ ಹೋಗಿ ಬಂದಿದ್ದಾರೆ ಅಂತಾ ಬಿ.ಎಸ್. ಯಡಿಯೂರಪ್ಪ ಅವರನ್ನು ನಿಂದಿಸಿದವರು ಇಂದು ಅದೇ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಇಂತಹ ಬೇಜವಾಬ್ದಾರಿ ಶಾಸಕನನ್ನು ದೇಶದಲ್ಲಿಯೇ ನಾನೆಲ್ಲಿಯೂ ಕಂಡಿಲ್ಲ. ಅಭಿವೃದ್ದಿ ಮಂತ್ರ ಜಪಿಸುವ ಇವರು ಒಂದು ಬಾರಿಯೂ ಕೆಡಿಪಿ ಸಭೆ ನಡೆಸಿಲ್ಲ ಅಂತಾ ಟೀಕಿಸಿದ್ರು.
ರಮೇಶ ಸಮಾಜ ಸೇವೆನೂ ಮಾಡಲ್ಲ. ಬ್ಯುಸಿನೆಸ್ ಕೂಡಾ ಮಾಡಲ್ಲ, ಆದ್ರೂ ತುಂಬಾ ಬ್ಯೂಸಿ ಇರ್ತಾನ. ಏನ್ ಮಾಡ್ತಾನ್ ಅಂತಾ ತಿಳಿದುಕೊಳ್ಳೋಕೆ ಒಂದು ಸಮಿತಿ ರಚಿಸಬೇಕಿದೆ ಎಂದು ಹೇಳುತ್ತಿದ್ದಂತೆ ಸಭೆಯಲ್ಲಿದ್ದ ಜನರು ನಗೆಗಡಲಲ್ಲಿ ತೇಲುವಂತೆ ಮಾಡಿದ್ರು.
ನಾವು ಸಂಘಟನೆಯನ್ನು ಮಾಡುತ್ತೇವೆ. ಬ್ಯುಸಿನಸ್ ನಡೆಸುತ್ತೇವೆ. ರಾಜ್ಯಾದ್ಯಂತ ಪ್ರವಾಸವೂ ಮಾಡಿ ದಿನನಿತ್ಯ 2 ಗಂಟೆ ಜನರಿಗಾಗಿ ಮೀಸಲಿಡುತ್ತೇವೆ. ಜನರ ಸೇವೆ ಮಾಡುವುದು ಶಾಸಕನ ಕೆಲಸ. ದುಡ್ಡು ಮಾಡೋಕೆ ಅಂತಾ ಶಾಸಕನಾಗಬಾರದು ಅಂತಾ ಸಲಹೆ ನೀಡಿದ್ರು.
ಸಾಮಾನ್ಯ ಜನ ನೇರವಾಗಿ ಶಾಸಕ ಭೇಟಿಯಾಗುವ ವ್ಯವಸ್ಥೆಯೂ ಗೋಕಾಕನಲ್ಲಿ ಇಲ್ಲ. ಜನ ಬೇಸತ್ತಿದ್ದು, ಬದಲಾವಣೆ ಬಯಸಿದ್ದಾರೆ. ಲಖನ್ ಜಾರಕಿಹೊಳಿ ಅವರ ಪರ ಅಲೆಯಿದೆ. ಹೆಚ್ಚಿನ ಮತ ನೀಡಿ ಜಯಗಳಿಸಲಿದ್ದಾರೆ ಎಂದು ಹೇಳಿದ್ರು.
ಗೋಕಾಕ ಕಾಂಗ್ರೆಸ್ ಅಭ್ಯರ್ಥಿ ಲಖನ್ ಜಾರಕಿಹೊಳಿ, ಕಾಂಗ್ರೆಸ್ ಮುಂತಾದವರು ಇದ್ದರು.