ಗೋಕಾಕ:ಗೋಕಾಕ ಮತಕ್ಷೇತ್ರದ ಚುಣಾವಣೆಗೆ ಭರ್ಜರಿ ಟ್ವಿಸ್ಟ್ : ಸತೀಶ ಜಾರಕಿಹೊಳಿ ಅವರಿಂದ ನಾಮಪತ್ರ ಸಲ್ಲಿಕೆ

ಗೋಕಾಕ ಮತಕ್ಷೇತ್ರದ ಚುಣಾವಣೆಗೆ ಭರ್ಜರಿ ಟ್ವಿಸ್ಟ್ : ಸತೀಶ ಜಾರಕಿಹೊಳಿ ಅವರಿಂದ ನಾಮಪತ್ರ ಸಲ್ಲಿಕೆ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ನ 18 :
ಶಾತಾಗತಾಯ ಕಾಂಗ್ರೆಸ್ ಟಿಕೆಟ್ ಲಖನಗೆ ಕೊಡಿಸಿ ಲಖನ ಅವರನ್ನು ಗೆಲ್ಲಿಸಬೇಕೆಂದು ಕಾಂಗ್ರೆಸ್ ಬಿ ಫಾರ್ಮ ತಂದಿದ್ದ ಸತೀಶ ಜಾರಕಿಹೊಳಿ ಅವರು ಲಖನ್ ಗಿಂತ ತಾವೇ ಮೊದಲು ನಾಮಪತ್ರ ಸಲ್ಲಿಸಿ ಅಚ್ಚರಿ ಮೂಡಿಸಿದ ಘಟನೆ ಜರುಗಿದೆ
ಸೋಮವಾರ ನಗರದ ಕೊಳವಿ ಹಣುಮಂತ ದೇವರ ಗುಡಿಯಿಂದ ಮೆರವಣಿಗೆಯಲ್ಲಿ ಸಹೋದರ ಲಖನ ಜತೆಯಾಗಿ ಬಂದು ಮಿನಿ ವಿಧಾನಸೌಧ ಪ್ರವೆಶೀಸಿದ ಸತೀಶ ಅವರು ನೆರವಾಗಿ ಚುನಾವಣಾ ಅಧಿಕಾರಿ ಬಳಿ ತೆರಳಿ ನಾಮಪತ್ರ ಸಲ್ಲಿಸಿ ರಾಜಕೀಯದ ಚದುರಂಗದಲ್ಲಿ ಮೊತ್ತೊಂದು ದಾಳ ಉರಳಿಸಿದ್ದಾರೆ ತಮ್ಮ ಕೋಶನ್ ಪೇಪರ ಲಿಕ್ ಮಾಡುವದಿಲ್ಲ ಎಂದು ಯಾವಾಗಲು ಹೇಳುತ್ತಲೇ ಬರುತ್ತಿದ್ದ ಲಖನ್ ಕೋಶನ ಪೇಪರ ಸತೀಶ ಲಿಕ್ ಮಾಡಿದ್ದಾರೆ . ಇಷ್ಟು ದಿನ ಲಖನ್ ಮತ್ತು ಸತೀಶ ಗೌಫ್ಯವಾಗಿ ತಯಾರಿಸಿದ್ದ ಕೋಶನ ಪೇಪರ ಜಂಟಿಯಾಗಿ ಲಿಕ್ಕ ಮಾಡಿದ್ದಾರೆ ಆ ಮೂಲಕವಾಗಿ ತಮ್ಮ ರಾಜಕೀಯ ವಿರೋಧಿಗಳಿಗೆ ಬಿಗ್ ಶಾಕ ನೀಡಿದ್ದಾರೆ