RNI NO. KARKAN/2006/27779|Wednesday, January 14, 2026
You are here: Home » breaking news » ಗೋಕಾಕ:ಮಕ್ಕಳಿಗೆ ಶಿಕ್ಷಣದೊಂದಿಗೆ ಸಂಸ್ಕಾರ ನೀಡಿ ಉತ್ತಮ ಪ್ರಜೆಗಳನ್ನಾಗಿ ರೂಪಿಸುವ ಜವಾಬ್ದಾರಿ ನಮ್ಮೇಲ್ಲರ ಮೇಲಿದೆ : ಬಸವ್ವ ಕೋಳದೂರ

ಗೋಕಾಕ:ಮಕ್ಕಳಿಗೆ ಶಿಕ್ಷಣದೊಂದಿಗೆ ಸಂಸ್ಕಾರ ನೀಡಿ ಉತ್ತಮ ಪ್ರಜೆಗಳನ್ನಾಗಿ ರೂಪಿಸುವ ಜವಾಬ್ದಾರಿ ನಮ್ಮೇಲ್ಲರ ಮೇಲಿದೆ : ಬಸವ್ವ ಕೋಳದೂರ 

ಮಕ್ಕಳಿಗೆ ಶಿಕ್ಷಣದೊಂದಿಗೆ ಸಂಸ್ಕಾರ ನೀಡಿ ಉತ್ತಮ ಪ್ರಜೆಗಳನ್ನಾಗಿ ರೂಪಿಸುವ ಜವಾಬ್ದಾರಿ ನಮ್ಮೇಲ್ಲರ ಮೇಲಿದೆ : ಬಸವ್ವ ಕೋಳದೂರ

 

ನಮ್ಮ ಬೆಳಗಾವಿ ಇ – ವಾರ್ತೆ ,ಗೋಕಾಕ ನ 6 :

 

 

ಮಕ್ಕಳೆ ನಮ್ಮ ದೇಶದ ಆಸ್ತಿಗಳಾಗಿದ್ದು , ಅವರಿಗೆ ಶಿಕ್ಷಣದೊಂದಿಗೆ ಸಂಸ್ಕಾರ ನೀಡಿ ಉತ್ತಮ ಪ್ರಜೆಗಳನ್ನಾಗಿ ರೂಪಿಸುವ ಜವಾಬ್ದಾರಿ ನಮ್ಮೇಲ್ಲರ ಮೇಲಿದೆ ಎಂದು ಶಿಕ್ಷಕಿ ಬಸವ್ವ ಕೋಳದೂರ ಹೇಳಿದರು

ಮಂಗಳವಾರದಂದು ನಗರದ ಮಧಬಾವಿ ಸಭಾಂಗಣದಲ್ಲಿ ಭಾವಯಾನ ಮಹಿಳಾ ಸಾಹಿತ್ಯ – ಸಾಂಸ್ಕೃತಿಕ ವೇದಿಕೆಯವರು ಆಯೋಜಿಸಿದ ರಾಜೋತ್ಸವ ಮತ್ತು ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು .

ಮಹಾನ ವ್ಯಕ್ತಿಗಳು ಜನಸಿದ ನಮ್ಮ ದೇಶದ ಸಂಸ್ಕೃತಿ ಜಗತ್ತಿನಲ್ಲಿಯೆ ಶ್ರಿಮಂತವಾಗಿದ್ದು , ತಾಯಂದಿರು ಆ ಮಹಾನ ವ್ಯಕ್ತಿಗಳ ಆದರ್ಶ ಹಾಗೂ ಅವರ ಚರಿತ್ರೆಗಳನ್ನು ಮಕ್ಕಳಲ್ಲಿ ಅರಿವು ಮೂಡಿಸಿ ಅವರನ್ನು ಸಂಸ್ಕಾರವಂತರನ್ನಾಗಿ ಮಾಡಿ. ಟಿ.ವಿ ಯ ದಾರವಾಹಿಗಳ ವ್ಯಾಮೋಹದಿಂದ ತಮ್ಮ ಮಕ್ಕಳ ಶಿಕ್ಷಣದತ್ತ ಹೆಚ್ಚಿನ ಗಮನ ಹರಿಸಬೇಕು ಮಕ್ಕಳನ್ನು ಮೊಬೈಲ್ , ಟಿ.ವಿ ಗಳಿಂದ ದೂರವಿಟ್ಟು ಉತ್ತಮ ಸಂಸ್ಕಾರದತ್ತ ಲಕ್ಷ್ಯ ಕೋಡುವಂತೆ ಅವರನ್ನು ಪ್ರೇರೇಪಿಸಿ ಉತ್ತಮ ನಾಗರಿಕರನ್ನಾಗಿ ಮಾಡುವಂತೆ ಕರೆ ನೀಡಿದರು
ರಾಜೋತ್ಸವ ಮತ್ತು ಮಕ್ಕಳ ದಿನಾಚರಣಿ ಅಂಗವಾಗಿ ಮಕ್ಕಳಿಗೆ ವಿವಿಧ ಸ್ವರ್ಧೆಗಳನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು ಇದೇ ಸಂದರ್ಭದಲ್ಲಿ ಲಲಿತ ಕಲಾ ಅಕ್ಯಾಡಮಿಗೆ ಸದಸ್ಯರಾಗಿ ಆಯ್ಕೆಯಾದ ಜಯಾನಂದ ಮಾದರ ಅವರನ್ನು ಗೌರವಿಸಿ , ಸತ್ಕರಿಸಲಾಯಿತು

ಕಾರ್ಯಕ್ರಮದಲ್ಲಿ ಪ್ರೋ ಚಂದ್ರಶೇಖರ ಅಕ್ಕಿ , ಮಹಾಂತೇಶ ತಾಂವಶಿ , ವಂಸತ ಕುಲಕರ್ಣಿ , ಭಾವಯಾನ ಮಹಿಳಾ ಸಾಹಿತ್ಯ – ಸಾಂಸ್ಕೃತಿಕ ವೇದಿಕೆಯ ಪದಾಧಿಕಾರಿಗಳಾದ ಭಾರತಿ ಮದಬಾವಿ , ಪುಷ್ಪಾ ಮುರಗೋಡ , ಮಹಾನಂದಾ ಪಾಟೀಲ ಇದ್ದರು
ಪ್ರೋ ಶಿವಲಿಲಾ ಪಾಟೀಲ ಸ್ವಾಗತಿಸಿ ವಂದಿಸಿದರು

Related posts: