RNI NO. KARKAN/2006/27779|Thursday, January 15, 2026
You are here: Home » breaking news » ಮೂಡಲಗಿ:ಗುರುಗಳಿಂದ ಮಾತ್ರ ಸಮಾಜ ತಿದ್ದುವ ಕಾರ್ಯ ಸಾಧ್ಯವಿದೆ : ಜಿಪಂ ಸದಸ್ಯ ಗೋವಿಂದ

ಮೂಡಲಗಿ:ಗುರುಗಳಿಂದ ಮಾತ್ರ ಸಮಾಜ ತಿದ್ದುವ ಕಾರ್ಯ ಸಾಧ್ಯವಿದೆ : ಜಿಪಂ ಸದಸ್ಯ ಗೋವಿಂದ 

ಗುರುಗಳಿಂದ ಮಾತ್ರ ಸಮಾಜ ತಿದ್ದುವ ಕಾರ್ಯ ಸಾಧ್ಯವಿದೆ : ಜಿಪಂ ಸದಸ್ಯ ಗೋವಿಂದ ಕೊಪ್ಪದ

 

 

ನಮ್ಮ ಬೆಳಗಾವಿ ಸುದ್ದಿ , ಮೂಡಲಗಿ ಸೆ 5 :

 

 

ತಾಲೂಕಿನಲ್ಲಿ ಶತಮಾನ ಕಂಡರಿಯದ ನೆರೆಯ ಪ್ರವಾಹದಿಂದಾಗಿ ಜನ ಜೀವನ ಅಸ್ತವ್ಯಸ್ತಗೊಂಡಿರುವ ಸಂದರ್ಭದಲ್ಲಿ ಶಿಕ್ಷಕರ ಕಾರ್ಯ ಪ್ರಶಂಸನೀಯವಾಗಿದೆ. ಗುರುವಿಗೆ ಇರುವ ಗೌರವದ ಸ್ಥಾನಮಾನ ಬೇರೆ ಯಾರಿಗೂ ಸಿಗುವದಿಲ್ಲ. ಪವಿತ್ರ ಸ್ಥಾನದಲ್ಲಿರುವ ಗುರುಗಳಿಂದ ಮಾತ್ರ ಸಮಾಜ ತಿದ್ದುವ ಕಾರ್ಯ ಸಾಧ್ಯವಿದೆ ಎಂದು ಯಾದವಾಡ ಜಿಪಂ ಸದಸ್ಯ ಗೋವಿಂದ ಕೊಪ್ಪದ ಹೇಳಿದರು.
ಅವರು ಗುರುವಾರ ದುರದುಂಡಿಯ ಸರಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಆವರಣದಲ್ಲಿ ಜರುಗಿದ 132 ನೇ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರವರ ಜನ್ಮದಿನಾಚರಣೆ ಹಾಗೂ ನಿವೃತ್ತ ಶಿಕ್ಷಕರ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ದೇಶದ ಭದ್ರತೆ ದೃಷ್ಠಿಯಲ್ಲಿ ಸೈನಿಕರು ರೈತರು ಎಷ್ಟು ಮುಖ್ಯವು ಅವರನ್ನು ತಯಾರಿಸುವ ಶಿಲ್ಪಿಗಳಾದ ಶಿಕ್ಷಕರು ಸುಭದ್ರ ರಾಷ್ಟ್ರ ನಿರ್ಮಾಣ ಮಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ ಎಂದು ಹೇಳಿದರು.
ಧಾರವಾಡ ಕೃಷಿ ವಿಶ್ವವಿದ್ಯಾಲಯ ವ್ಯವಸ್ಥಾಪನ ಮಂಡಳಿಯ ನಿರ್ಧೇಶಕ ಡಾ. ರಾಜೇಂದ್ರ ಸಣ್ಣಕ್ಕಿ ಮಾತನಾಡಿ, ದೇಶದಲ್ಲಿ ಶೇ. 80 ರಷ್ಟು ಸುಶಿಕ್ಷಿತರಿದ್ದು ಶೇ 20 ರಷ್ಟು ಅಸುಶಿಕ್ಷಿತರಿದ್ದು, ಅಸುಶಿಕ್ಷತರನ್ನು ಶಿಕ್ಷಿತರನ್ನಾಗಿಸಬೇಕಾಗಿದೆ.ಮೂಡಲಗಿ ವಲಯದಲ್ಲಿ ಅರಭಾಂವಿ ಶಾಸಕರ ಬಾಲಚಂದ್ರ ಜಾರಕಿಹೊಳಿಯವರ ಅವಿರತ ಪ್ರಯತ್ನದಿಂದಾಗಿ 2004 ರಿಂದ ಶಿಕ್ಷಣ ಕ್ಷೇತ್ರ ಬಹಳಷ್ಟು ಬದಲಾವಣೆಗೊಂಡಿದೆ. ವಸತಿ ನಿಲಯಗಳು ರಾಜ್ಯದಲ್ಲಿಯೇ ಅತೀ ಹೆಚ್ಚು ಕೇಂದ್ರಗಳು ನಮ್ಮಲ್ಲಿದ್ದು ಸುಮಾರು 2500 ಕ್ಕೂ ಹೆಚ್ಚು ಮಕ್ಕಳು ವಸತಿಯುತ ಶಿಕ್ಷಣ ಪಡೆಯುತ್ತಿದ್ದಾರೆ. ವಲಯದಲ್ಲಿ ಶಾಸಕರು, ಶಿಕ್ಷಕರು ಜನ ಪ್ರತಿನಿಧಿಗಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿರುವದರಿಂದ ಬಿಇಒ ಅಜೀತ ಮನ್ನಿಕೇರಿಯವರ ಅವಿರತ ಶ್ರಮದ ಫಲವಾಗಿ ಮೂಡಲಗಿ ವಲಯ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಮಿಂಚಲು ಸಾಧ್ಯವಾಗಿದೆ ಎಂದು ಅಭಿಪ್ರಾಯ ಪಟ್ಟರು.
ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ ಮಾತನಾಡಿ, ಪ್ರಸಕ್ತ ಸಾಲಿನ ಶಿಕ್ಷಕರ ದಿನಾಚರಣೆಯನ್ನು ಸರಳ ರೀತಿಯಲ್ಲಿ ಜರುಗಿಸಿದೆ. ನೆರೆಯ ಹಾವಳಿಯಿಂದ 44 ಸರಕಾರಿ ಶಾಲೆಗಳು 6 ಖಾಸಗಿ ಶಾಲೆಗಳು ಪೀಠೋಪಕರಣ, ಆಟೋಪಕರಣ, ದಾಖಲಾತಿಗಳು ಶಾಲಾ ದಾಸ್ತಾನು ಅನೇಕ ವಸ್ತುಗಳು ಹಾಳಾಗಿವೆ. ಇಂತಹ ಸಂದರ್ಭದಲ್ಲಿ ಶಿಕ್ಷಕರು ಶಾಲಾ ಪುನಶ್ಚೇತನಗೋಳಿಸುವ ನಿಟ್ಟಿನಲ್ಲಿ ಅವಿರತ ಪ್ರಯತ್ನದ ಅವಶ್ಯಕತೆ ಇದೆ ಎಂದರು.
ಸಮಾರಂಭದಲ್ಲಿ ಶಿಕ್ಷಣ ಇಲಾಖೆಯಿಂದ ಪ್ರಾಥಮಿಕ ಪ್ರೌಢ ಶಾಲಾ ನಿವೃತ್ತ ಶಿಕ್ಷಕರು, ಶ್ರೇಷ್ಠ ಶಿಕ್ಷಕರನ್ನು, ಹಾಗೂ ವಿವಿಧ ಸಂಘ ಸಂಸ್ಥೆಗಳಿಂದ ಪ್ರತಿಷ್ಠಾನಗಳಿಂದ ಕೊಡಲ್ಪಡುವ ಉತ್ತಮ ಶಿಕ್ಷಕ ಪ್ರಶಸ್ತಿಗಳನ್ನು ನೀಡಿ ಗೌರವಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ದುರದುಂಡಿ ಗ್ರಾಪಂ ಅಧ್ಯಕ್ಷ ಭೀಮಶಿ ಹುಕ್ಕೇರಿ ವಹಿಸಿದ್ದರು.

ವೇದಿಕೆಯಲ್ಲಿ ನಾಗಪ್ಪ ಶೇಖರಗೋಳ, ಜಿಪಂ ಸದಸ್ಯೆ ಶಶಿಕಲಾ ಸಣ್ಣಕ್ಕಿ, ತಾಪಂ ಅಧ್ಯಕ್ಷೆ ಸುನಂದಾ ಕರದೇಸಾಯಿ, ಉಪಾಧ್ಯಕ್ಷ ಯಲ್ಲಪ್ಪ ನಾಯಿಕ, ಗೋಕಾಕ ತಾಪಂ ಇಒ ಬಸವರಾಜ ಹೆಗ್ಗನಾಯಕ, ಮೂಡಲಗಿ ಸಿಪಿಐ ವೇಂಕಟೇಶ ಮುರನಾಳ, ಹಣಮಂತ ತೇರದಾಳ, ರವಿ ಪರುಶೆಟ್ಟಿ, ಶಿವಾನಂದ ಕಮತಿ, ಸುಧೀರ ಜೋಡಟ್ಟಿ, ಅಶೋಕ ಖಂಡ್ರಟ್ಟಿ, ಗೋಪಾಲ ಕುದರಿ, ಪರಮೇಶ್ವರ ಹೊಸಮನಿ, ತಾಪಂ ಸದಸ್ಯರು, ಗ್ರಾಪಂ ಸದಸ್ಯರು, ಗ್ರಾಮದ ಮುಖಂಡರು ಉಪಸ್ಥಿತರಿದ್ದರು.

Related posts: