RNI NO. KARKAN/2006/27779|Wednesday, February 18, 2026
You are here: Home » breaking news » ಗೋಕಾಕ:ನೆರೆ ಹಾವಳಿಯಿಂದ ನಿರಾಶ್ರಿತರ ಜಾನುವಾರುಗಳಿಗೆ ಕೆಎಮ್‍ಎಫ್ ನಂದಿನಿ ಪಶು ಆಹಾರ ವಿತರಿಸಿದ ಅಮರನಾಥ

ಗೋಕಾಕ:ನೆರೆ ಹಾವಳಿಯಿಂದ ನಿರಾಶ್ರಿತರ ಜಾನುವಾರುಗಳಿಗೆ ಕೆಎಮ್‍ಎಫ್ ನಂದಿನಿ ಪಶು ಆಹಾರ ವಿತರಿಸಿದ ಅಮರನಾಥ 

ನೆರೆ ಹಾವಳಿಯಿಂದ ನಿರಾಶ್ರಿತರ ಜಾನುವಾರುಗಳಿಗೆ ಕೆಎಮ್‍ಎಫ್ ನಂದಿನಿ ಪಶು ಆಹಾರ ವಿತರಿಸಿದ ಅಮರನಾಥ

 

 

 

ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಅ 11 :

 

 

 

 

ನೆರೆ ಹಾವಳಿಯಿಂದ ನಿರಾಶ್ರಿತರ ಜಾನುವಾರುಗಳಿಗೆ ಕೆಎಮ್‍ಎಫ್ ಹಾಗೂ ಬೆಳಗಾವಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದಿಂದ ನಂದಿನಿ ಪಶು ಆಹಾರವನ್ನು ರವಿವಾರದಂದು ನಗರದ ಎಪಿಎಮ್‍ಸಿ ಆವರಣದ ನಿರಾಶ್ರಿತರ ಕೇಂದ್ರದಲ್ಲಿ ನಿರ್ದೇಶಕ ಅಮರನಾಥ ಜಾರಕಿಹೊಳಿ ಅವರು ವಿತರಿಸಿದರು.
ಇದಕ್ಕೂ ಪೂರ್ವದಲ್ಲಿ ತಾಲೂಕಿನ ಯದ್ದಲಗುಡ್ಡ, ಅಂಕಲಗಿ, ಅಕ್ಕತಂಗೇರಹಾಳ, ಕುಂದರಗಿ, ಗಡ್ಡಿಹೊಳಿ, ಶೀಗಿಹೊಳಿ, ಮಾಲದಿನ್ನಿ, ಉಪ್ಪಾರಹಟ್ಟಿ, ಹೂಲಿಕಟ್ಟಿ, ಮಕ್ಕಳಗೇರಿ, ಪಾರನಟ್ಟಿ, ಬೆಣಚಿನಮರಡಿ, ಹಿರೇನಂದಿ, ಗ್ರಾಮದಲ್ಲಿ ನೆರೆ ಹಾವಳಿಯಿಂದ ನಿರಾಶ್ರಿತರ ಜಾನುವಾರುಗಳಿಗೆ ಮೇವು ಹಾಗೂ ನಂದಿನಿ ಪಶು ಆಹಾರವನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಕೆಎಮ್‍ಎಫ್‍ನ ಉಪವ್ಯವಸ್ಥಾಪಕ ಡಾ|| ಮಹೇಶ ಲಕ್ಕನ್ನವರ, ವಿಸ್ತ್ರರಣಾಧಿಕಾರಿ ಎಸ್.ಬಿ.ಕರಬನ್ನವರ, ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ|| ಮೋಹನ ಕಮತ, ಡಾ|| ಪಿ.ಕೆ.ಕೊರವಿ, ಡಾ|| ಎಸ್.ಆರ್.ಕೌಜಲಗಿ ಸೇರಿದಂತೆ ಅನೇಕರು ಇದ್ದರು.

Related posts: