RNI NO. KARKAN/2006/27779|Wednesday, October 15, 2025
You are here: Home » breaking news » ಬೆಳಗಾವಿ:ಭಾಷಾನೀತಿ ಉಲ್ಲಂಘನೆ : ಮಹಾರಾಷ್ಟ್ರ ಮೂಲದ ಶಾಲೆಯ ಮಾನ್ಯತೆ ರದ್ದು ಮಾಡಿದ ಡಿಸಿ ಎನ್.ಜಯರಾಂ

ಬೆಳಗಾವಿ:ಭಾಷಾನೀತಿ ಉಲ್ಲಂಘನೆ : ಮಹಾರಾಷ್ಟ್ರ ಮೂಲದ ಶಾಲೆಯ ಮಾನ್ಯತೆ ರದ್ದು ಮಾಡಿದ ಡಿಸಿ ಎನ್.ಜಯರಾಂ 

ಭಾಷಾನೀತಿ ಉಲ್ಲಂಘನೆ : ಮಹಾರಾಷ್ಟ್ರ ಮೂಲದ ಶಾಲೆಯ ಮಾನ್ಯತೆ ರದ್ದು ಮಾಡಿದ ಡಿಸಿ ಎನ್.ಜಯರಾಂ

ಬೆಳಗಾವಿ ಜು 14: ಕನ್ನಡ ಮಾಧ್ಯಮ ಬೋಧನೆಗೆ ಅನುಮತಿ ಪಡೆದು ಸಿಬಿಎಸಸಿ ಹೆಸರಿನಲ್ಲಿ ಇಂಗ್ಲಿಷ್ ಮಾಧ್ಯಮದಲ್ಲಿ ಬೋಧನೆ ಮಾಡುತ್ತಿದ ಮಹಾರಾಷ್ಟ್ರ ಮೂಲದ ಶಾಲೆಯ ಮಾನ್ಯತೆ ರದ್ದು ಮಾಡುವ ಮೂಲಕ ಜಿಲ್ಲಾಧಿಕಾರಿ ಎನ್ ಜಯರಾಂ ಶಿಕ್ಷಣ ಸಂಸ್ಥೆಗೆ ಬಿಸಿ ಮುಟ್ಟಿಸಿದ್ದಾರೆ .

ಬೆಳಗಾವಿಯ ಸದಾಶಿವ ನಗರದಲ್ಲಿರುವ ಮಹಾರಾಷ್ಟ್ರ ಮೂಲದ ತೇಜಶಾ ಶಿಕ್ಷಣ ಸಂಸ್ಥೆಗೆ ಸೇರಿದ ಆರ್ಯನ್ ವರ್ಲ್ಡ್ ಶಾಲೆಯ ಮಾನ್ಯತೆಯನ್ನು ಶಿಕ್ಷಣ ಇಲಾಖೆ ಹಿಂಪಡೆದಿದೆ. ಕೆಲ ದಿನಗಳ ಹಿಂದೆ ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಡಿಡಿಪಿಐ ಎ.ಬಿ.ಪುಂಡಲಿಕ್ ಹಾಗೂ ತಂಡ ದಾಳಿ ನಡೆಸಿದ ವೇಳೆ ಶಾಲೆಯಲ್ಲಿ ಕನ್ನಡ ಮಾಧ್ಯಮದ ಬದಲು ಆಂಗ್ಲ ಭಾಷೆಯಲ್ಲಿ ಪಾಠ ಕಲಿಸಲಾಗುತ್ತಿತ್ತು. ಹಾಗೆಯೇ, ಸರ್ಕಾರದ ಆದೇಶ ಉಲ್ಲಂಘಿಸಿ ಶಾಲೆಯಲ್ಲಿ ಸಮವಸ್ತ್ರ, ಪುಸ್ತಕ, ಬ್ಯಾಗ್‌ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿತ್ತು.

ನಿಯಮ ಉಲ್ಲಂಘನೆ ಹಿನ್ನೆಲೆ ಅಂದು ಸ್ಥಳದಲ್ಲೇ ಶಾಲೆಯವರಿಗೆ ನೋಟಿಸ್ ಜಾರಿ ಮಾಡಿದ ಅಧಿಕಾರಿಗಳು ಶಾಲೆಯ ಮಾನ್ಯತೆ ಹಿಂಪಡೆದಿದ್ದಾರೆ. ಇಂತಹ ಭಾಷಾನೀತಿ ಉಲ್ಲಂಘಿಸುವ ಶಾಲೆಗಳ ವಿರುದ್ಧ ಇದೇ ರೀತಿಯ ಶಿಸ್ತು ಕ್ರಮ ಜರುಗಿಸುವುದಾಗಿ ಡಿಸಿ ಎನ್.ಜಯರಾಮ್ ಎಚ್ಚರಿಕೆ ನೀಡಿದ್ದಾರೆ.

Related posts: