RNI NO. KARKAN/2006/27779|Thursday, October 16, 2025
You are here: Home » breaking news » ಗೋಕಾಕ:ದೋಸ್ತಿ ಸರಕಾರಕ್ಕೆ ರೆಬೆಲ್ ಶಾಸಕರ ಗುದ್ದು : ನಾಳೆ ಖುದ್ದು ಸ್ಪೀಕರಗೆ ಭೇಟಿಯಾಗಿ ರಾಜೀನಾಮೆಗೆ ಶಾಸಕ ರಮೇಶ ನಿರ್ಧಾರ

ಗೋಕಾಕ:ದೋಸ್ತಿ ಸರಕಾರಕ್ಕೆ ರೆಬೆಲ್ ಶಾಸಕರ ಗುದ್ದು : ನಾಳೆ ಖುದ್ದು ಸ್ಪೀಕರಗೆ ಭೇಟಿಯಾಗಿ ರಾಜೀನಾಮೆಗೆ ಶಾಸಕ ರಮೇಶ ನಿರ್ಧಾರ 

ದೋಸ್ತಿ ಸರಕಾರಕ್ಕೆ ರೆಬೆಲ್ ಶಾಸಕರ ಗುದ್ದು : ನಾಳೆ ಖುದ್ದು ಸ್ಪೀಕರಗೆ ಭೇಟಿಯಾಗಿ ರಾಜೀನಾಮೆಗೆ  ಶಾಸಕ ರಮೇಶ ನಿರ್ಧಾರ

ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಜು 1:

ಕಾಂಗ್ರೆಸ್ ಜೆಡಿಎಸ್ ಸರಕಾರದ ವಿರುದ್ಧ ಬಂಡಾಯದ ಬಾವುಟ ಹಾರಿಸಿದ್ದ ಗೋಕಾಕ ಶಾಸಕ ರಮೇಶ್ ಜಾರಕಿಹೊಳಿ ಅಂತಿಮವಾಗಿ ರಾಜೀನಾಮೆ ನೀಡುವುದು ಖಾತ್ರಿ  ಆಗಿದೆ. 

ಮಹಾರಾಷ್ಟ್ರದ ಮುಂಬೈನಲ್ಲಿರುವ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಅವರು ರಾಜೀನಾಮೆ ಪತ್ರವನ್ನು   ಸ್ಪೀಕರಗೆ ಪ್ಯಾಕ್ಸ ಮೂಲಕ  ರವಾನೆ ಮಾಡಿರುವ ರಮೇಶ್ ಜಾರಿಕಿಹೊಳಿ ‘ನಾನು ಗೋಕಾಕ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದೇನೆ’ ಎಂದು ಅಧಿಕೃತವಾಗಿ ತಿಳಿಸಿದ್ದಾರೆ. ಜುಲೈ 2 ರಂದು ರಮೇಶ್ ಜಾರಕಿಹೊಳಿ ರಾಜೀನಾಮೆ ಸಲ್ಲಿಸಲಿದ್ದಾರೆ.

ಈ ಬಗ್ಗೆ ಖಾಸಿಗೆ ಸುದ್ದಿ ವಾಹಿನಿಯೊಂದಕ್ಕೆ ಮಾಹಿತಿ ನೀಡಿರುವ ಅವರು ಶಾಸಕ  ಆನಂದ ಸಿಂಗ್ ರ ಸಮಸ್ಯೆಯೆ ಬೇರೆ , ನನ್ನ ಸಮಸ್ಯೆಯೆ ಬೇರೆ ಆದರೆ  ಬೆಳಗಾವಿ ಜಿಲ್ಲೆಯನ್ನು ಹಾಳು ಮಾಡಿದವರೆ ಬಳ್ಳಾರಿ ಜಿಲ್ಲೆಯನ್ನು ಹಾಳು ಮಾಡಿದ್ದಾರೆ ಕಾಂಗ್ರೆಸ್ ಹೈಕಮಾಂಡಗೆ ಬುದ್ದಿ ಬರಲ್ಲಾ ನಾಳೆ ಬೆಂಗಳೂರಿಗೆ ಬಂದು ಖುದ್ದು ಸ್ಪೀಕರ ಅವರಿಗೆ ಭೇಟಿಯಾಗಿ ರಾಜೀನಾಮೆ ನೀಡುತ್ತೆನೆಂದು ತಿಳಿಸಿದ್ದಾರೆ

ವಿಜಯನಗರ ಶಾಸಕ ಆನಂದ್ ಸಿಂಗ್ ರಾಜೀನಾಮೆ ನಂತರ ರಾಜ್ಯ ಬಿಜೆಪಿ ಮುಖಂಡರು ರಾಜೀನಾಮೆ ಪರ್ವ ಆರಂಭವಾಗಿದೆ ಎಂದಿದ್ದರು.  ಕಳೆದ 6 ತಿಂಗಳಿನಿಂದ ದೋಸ್ತಿ ಸರಕಾರದ ವಿರುದ್ಧ ಮಾತನಾಡುತ್ತಲೇ ಬಂದ ರಮೇಶ್ ಅಂತಿಮವಾಗಿ ರಾಜೀನಾಮೆ ಸಲ್ಲಿಕೆಯ ದೃಢ ನಿರ್ಧಾರ ಮಾಡಿರುವದು ಗೋಕಾಕ ಮತಕ್ಷೇತ್ರಾದ್ಯಂತ ತಲ್ಲಣ ಮೂಡಿಸಿದೆ

 

Related posts: