ಗೋಕಾಕ:ಬಸವೇಶ್ವರ ವೃತ್ತದ ಗೆಳೆಯರ ಬಳಗದ ಕಾರ್ಯ ಶ್ಲಾಘನೀಯ: ರಮೇಶ ಪೂಜೇರಿ
ಬಸವೇಶ್ವರ ವೃತ್ತದ ಗೆಳೆಯರ ಬಳಗದ ಕಾರ್ಯ ಶ್ಲಾಘನೀಯ: ರಮೇಶ ಪೂಜೇರಿ
ನಮ್ಮ ಬೆಳಗಾವಿ ಸುದ್ದಿ ಗೋಕಾಕ ಮೇ 5 :
ಬಡಮಕ್ಕಳನ್ನು ಪ್ರವಾಸಕ್ಕೆ ಕರೆದೂಯ್ಯುವ ಮೂಲಕ ಇಲ್ಲಿನ ಬಸವೇಶ್ವರ ವೃತ್ತದ ಗೆಳೆಯರ ಬಳಗ ಸಾರ್ಥಕತೆ ಮೆರೆದಿದ್ದಾರೆ.
ಸ್ವಂತ ಮಕ್ಕಳಿಗಾಗಿಯೇ ಖರ್ಚು ಮಾಡಲು ಹಿಂದೇಟು ಹಾಕುವ ಇಂದಿನ ದಿನಮಾನಗಳಲ್ಲಿ, ಸರ್ಕಾರಿ ಶೈಕ್ಷಣಿಕ ಪ್ರವಾಸಕ್ಕೆ ಹಸಿರು ನಿಶಾನಿ ತೋರಿಸಿ ಪೋಜು ಕೊಡುವ ಇಂದಿನ ಸ್ಥಿತಿಯಲ್ಲಿ ಇಲ್ಲಿನ ಬಸವೇಶ್ವರ ವೃತ್ತದ ಗೆಳೆಯರ ಬಳಗ ಶಿವಾ ಪೌಂಡೇಷನ್ ಆಶ್ರಮದ 14 ಬಡಮಕ್ಕಳನ್ನು 2 ದಿನಗಳ ಕಾಲ ಪ್ರವಾಸ ಮಾಡಿಸುವ ಮೂಲಕ ಸಂತೃಪ್ತಿಪಟ್ಟುಕೊಂಡಿದ್ದಾರೆ.
ಇಡಗುಂಜಿ, ಮೂರ್ಡೆಶ್ವರ, ಕೊಲ್ಲೂರು, ಜೋಗ ಜಲಪಾತ ಸೇರಿದಂತೆ ಅನೇಕ ಪ್ರೇಕ್ಷಣಿಯ ಸ್ಥಳಗಳ ಬಗ್ಗೆ ಆಶ್ರಮದ ಮಕ್ಕಳಿಗೆ ಮಾಹಿತಿಯನ್ನು ನೀಡಿ ಕ್ಷೇತ್ರಗಳ ಮಹಿಮೆಯನ್ನು ತಿಳಿಸಿದರು.
ಶಿವಾ ಪೌಂಡೇಷನ್ ಅಧ್ಯಕ್ಷ ರಮೇಶ ಪೂಜೇರಿ ಪತ್ರಿಕೆಯೊಂದಿಗೆ ಮಾತನಾಡಿ ಮಕ್ಕಳ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ನಮ್ಮ ಆಶ್ರಮದ ಮಕ್ಕಳನ್ನು ಅತ್ಯಂತ ಜವಾಬ್ದಾರಿಯಿಂದ ಕಾಳಜಿಪೂರ್ವಕವಾಗಿ ಪ್ರವಾಸಕ್ಕೆ ಕರೆದುಕೊಂಡು ಹೋಗಿ ಬಂದ ಗೆಳೆಯರ ಬಳಗ ಕಾರ್ಯ ಶ್ಲಾಘನೀಯವಾದ್ದದು ಎಂದು ಹೇಳಿದ ಅವರು ಸಾರ್ವಜನಿಕರು ನಮ್ಮ ಸಾಮಾಜಿಕ ಕಾರ್ಯಕ್ಕೆ ಸಹಕಾರ ನೀಡುತ್ತಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಸವೇಶ್ವರ ವೃತ್ತದ ಗೆಳೆಯರ ಬಳಗದ ರಮೇಶ ಖಿಚಡಿ, ರಾಜಶೇಖರ ಬಿದರಿ, ಚಂದ್ರಶೇಖರ ಗೋಟಖಿಂಡಿ, ಅರ್ಜುನ ಪೂಜೇರಿ, ಪೌಂಡೇಷನ್‍ನ ಉಮಾ. ಸಿ. ಗಂಗಮ್ಮ ಹಾಗೂ ಮಕ್ಕಳು ಇದ್ದರು.
