RNI NO. KARKAN/2006/27779|Tuesday, November 4, 2025
You are here: Home » breaking news » ಬೆಳಗಾವಿ:ನಾನು ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ : ಹೆಬ್ಬಾಳಕರ ಮನವಿ

ಬೆಳಗಾವಿ:ನಾನು ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ : ಹೆಬ್ಬಾಳಕರ ಮನವಿ 

ನಾನು ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ : ಹೆಬ್ಬಾಳಕರ ಮನವಿ

ನಮ್ಮ ಬೆಳಗಾವಿ ಸುದ್ದಿ , ಬೆಳಗಾವಿ ಏ 6 :

ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರು ಬೆಳಗಾವಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವ್ಹಿ ಎಸ್ ಸಾಧುನವರ ಅವರ ಪರವಾಗಿ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸಿದ್ದಾರೆ.

ಬೆಳಗಾವಿ ಗ್ರಾಮೀಣ ಕ್ಷೇತ್ರದ ಮುತಗಾ ನೀಲಜಿ ಸೆರಿದಂತೆ ಸುತ್ತಮಯತ್ತಲಿನ ಗ್ರಾಮಗಳಲ್ಲಿ ಸುಡು ಬಿಸಿಲಲ್ಲೂ ಬಿರುಸಿನ ಪ್ರಚಾರ ನಡೆಸಿ ಮತಯಾಚಿಸಿದರು.ಈ ಸಂಧರ್ಭದಲ್ಲಿ ಪ್ರಿತಿ ಸಾಧುನವರ ಹೆಬ್ಬಾಳಕರ ಅವರಿಗೆ ಸಾಥ್ ನೀಡಿದರು.
ಮತಯಾಚಿಸಿ ಮಾತನಾಡಿದ ಅವರು ಸುರೇಶ ಅಂಗಡಿ ಅವರು ಕಳೆದ ಹದಿನೈದು ವರ್ಷಗಳಿಂದ ಕ್ಷೇತ್ರದ ಜನರಿಗೆ ಮುಖ ತೋರಿಸಲಿಲ್ಲ ಕೇತ್ರದ ಜನ ಮೂರು ಬಾರಿ ಅವಕಾಶ ನೀಡಿದರೂ ಕ್ಷೇತ್ರಕ್ಕೆ ಯವ ಕೊಡುಗೆಯನ್ನೂ ಕೊಡಲಿಲ್ಲ,ಜನರ ಕಷ್ಟ ಸುಖ ಆಲಿಸಲಿಲ್ಲ,ಹದಿನೈದು ವರ್ಷ ಕಾಲಹರಣ ಮಾಡಿದ ಸುರೇಶ ಅಂಗಡಿ ಸಂಸದ ಪದವಿಗೆ ಅವಮಾನ ಮಾಡಿದ್ದಾರೆ ಎಂದು ಲಕ್ಷ್ಮೀ ಹೆಬ್ಬಾಳಕರ ಆರೋಪಿಸಿದರು.

ಸುರೇಶ ಅಂಗಡಿ ಅವರು ಮುತ್ನಾಳ ಗ್ರಾಮವನ್ನು ಸಂಸದರ ಅದರ್ಶ ಗ್ರಾಮವೆಂದು ದತ್ತು ಪಡೆದುಕೊಂಡಿದ್ದರು ದತ್ತು ಪಡೆದ ಗ್ರಾಮವನ್ನೇ ನಿರ್ಲಕ್ಷ್ಯ ಮಾಡಿದ ಅವರು ಉಳಿದ ಹಳ್ಳಿಗಳಿಗೆ ಏನು ಮಾಡಿರಬಹುದು ನೀವೇ ಯೋಚಿಸಿ ಎಂದು ಹೇಳಿದ ಹೆಬ್ಬಾಳಕೆರ ಮುತ್ನಾಳ ಗ್ರಾಮಕ್ಕೆ ಸುಮರು ಮೂರುವರೆ ಕೋಟಿ ಅನುದಾನ ತಂದು ಈ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿಸಿದ್ದು ನಾನು ಎಂದರು.
ಪ್ರೀತಿ ಸಾಧುನವರ ಮಾತನಾಡಿ ಸುರೇಶ ಅಂಗಡಿ ಅವರು ಮೋದಿ ಅವರ ಹೆಸರು ಹೇಳಿ ಮತ ಕೇಳುತ್ತಿದ್ದಾರೆ,ಲಕ್ಷ್ಮೀ ಹೆಬ್ಬಾಳಕರ ಕೇವಲ ಒಂದೇ ವರ್ಷದಲ್ಲಿ ಕ್ಷೇತ್ರದಲ್ಲಿ ಅಭಿವೃದ್ಧೀಯ ಹೊಳೆ ಹರಿಸಿದ್ದಾರೆ ಅವರು ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಕಾಂಗ್ರೆಸ್ ಪಕ್ಷಕ್ಕೆ ಮತ ಕೊಡಿ ಎಂದು ಮತದಾರರಲ್ಲಿ ಮನವಿ ಮಾಡಿಕೊಂಡರು.

Related posts: