ಗೋಕಾಕ:ಜಮ್ಮು ಕಾಶ್ಮಿರದಲ್ಲಿ ಹುತಾತ್ಮರಾದ ಯೋಧರಿಗೆ ನಿವೃತ್ತ ಸೈನಿಕರು ಹಾಗೂ ಗ್ರಾಮಸ್ಥರಿಂದ ಶೃದ್ಧಾಂಜಲಿ
ಜಮ್ಮು ಕಾಶ್ಮಿರದಲ್ಲಿ ಹುತಾತ್ಮರಾದ ಯೋಧರಿಗೆ ನಿವೃತ್ತ ಸೈನಿಕರು ಹಾಗೂ ಗ್ರಾಮಸ್ಥರಿಂದ ಶೃದ್ಧಾಂಜಲಿ
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಫೆ 20 :
ಜಮ್ಮು ಕಾಶ್ಮಿರದಲ್ಲಿ ಇತ್ತಿಚೆಗೆ ಹುತಾತ್ಮರಾದ ಯೋಧರಿಗೆ ತಾಲೂಕಿನ ಬೆಣಚಿನಮರಡಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಬುಧವಾರದಂದು ನಿವೃತ್ತ ಸೈನಿಕರು ಹಾಗೂ ಗ್ರಾಮಸ್ಥರು ಶೃದ್ಧಾಂಜಲಿ ಅರ್ಪಿಸಿದರು.
ನಂತರ ಮಾತನಾಡಿದ ವಡೇರಹಟ್ಟಿಯ ಅಂಬಾ ದರ್ಶನ ಪೀಠದ ಶ್ರೀ ನಾರಾಯಣ ಶರಣರು, ನಾಡಿಗೆ ಅನ್ನ ನೀಡುವ ರೈತ ಹಾಗೂ ಗಡಿ ಕಾಯುವ ಸೈನಿಕ ದೇಶಕ್ಕೆ ಎರಡು ಕಣ್ಣುಗಳು ಇದ್ದಂತೆ. ಅವರು ತಮ್ಮ ಕಾರ್ಯವನ್ನು ನಿಸ್ವಾರ್ಥದಿಂದ ಮಾಡುತ್ತಿರುವುದರಿಂದ ನಾವೆಲ್ಲ ನೆಮ್ಮದಿಯಿಂದ ಬದುಕುತ್ತಿದ್ದೇವೆ. ಇಂದು ರೈತ ಹಾಗೂ ಸೈನಿಕ ಸಂಕಷ್ಠದ ಪರಿಸ್ಥಿತಿಯಲ್ಲಿ ಇದ್ದಾರೆ. ಅವರಿಗೆ ಸರ್ಕಾರಗಳು ಹಾಗೂ ಸಾರ್ವಜನಿಕರು ಸಂಕಷ್ಟದಲ್ಲಿ ಪಾಲು ತೆಗೆದುಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಸೈನಿಕರಾದ ಪಿ.ಎಮ್.ಕಂಬಳಿ, ಎಫ್.ಎಸ್.ಗೌಡರ, ಗ್ರಾಮಸ್ಥರಾದ ಯಲ್ಲಪ್ಪ ಬೀರನಗಡ್ಡಿ, ಎಲ್.ಟಿ.ಜಿಂಗಿ, ಯಮನಪ್ಪ ಮಾಳಗಿ, ಶಿವಪ್ಪ ಮಾಗಿ, ಎ.ಯು.ಕಡಬಿ, ಉದ್ದಪ್ಪ ಗೋಧಿ, ವೀರಭದ್ರಪ್ಪ ಬೆಣಕನ್ನವರ, ಆರ್.ಟಿ.ಮಾಳಿ, ಬಿ.ಕೆ.ಗೌಡ್ರ ಸೇರಿದಂತೆ ಅನೇಕರು ಇದ್ದರು.