ಮೂಡಲಗಿ:ಕಾಂಗ್ರೇಸ್ ಪಕ್ಷವನ್ನು ಬೆಂಬಲಿಸಿ , ಮತನೀಡಿ : ದಳವಾಯಿ ಮನವಿ
ಕಾಂಗ್ರೇಸ್ ಪಕ್ಷವನ್ನು ಬೆಂಬಲಿಸಿ , ಮತನೀಡಿ : ದಳವಾಯಿ ಮನವಿ
ಮೂಡಲಗಿ ಅ 28 : ಮೂಡಲಗಿ ಪುರಸಭೆ ವ್ಯಾಪ್ತಿಯ ವಿವಿಧ ವಾರ್ಡಗಳಲ್ಲಿ ಕಾಂಗ್ರೇಸ್ ಪಕ್ಷದಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ನಗರದ ಹಾಗೂ ಜನತೆಯ ಶ್ರೇಯೊಭಿವೃದ್ಧಿಗೆ ಹಾಗೂ ಎಲ್ಲರಿಗೂ ಸಮಪಾಲು ಸಮಬಾಳು ಪಡೆಯುವಂತಾಗಲು ಕಾಂಗ್ರೇಸ್ ಪಕ್ಷವನ್ನು ಬೆಂಬಲಿಸಿ ಮತನೀಡಬೇಕೆಂದು ಅರಭಾಂವಿ ಕಾಂಗ್ರೇಸ್ ಮುಖಂಡ ಅರವಿಂದ ದಳವಾಯಿ ಪ್ರಚಾರ ಸಂದರ್ಭದಲ್ಲಿ ಹೇಳಿದರು.
ಅವರು ಮೂಡಲಗಿ ಪಟ್ಟಣದ ವಿವಿಧ ವಾರ್ಡಗಳಲ್ಲಿ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ಕೈಗೊಂಡು ಮಾತನಾಡಿದರು. ಕಳೇದ 15 ವರ್ಷಗಳಿಂದ ನಗರದಲ್ಲಿ ಅಂತಹ ಯಾವುದೇ ಅಭಿವೃದ್ಧಿ ಕಾರ್ಯಗಳಾಗಿಲ್ಲ, ಇಲ್ಲಿಯ ಪ್ರಸಿದ್ದ ದನಗಳ ಪೇಟೆಗೆ ಯಾವುದೆ ಮೂಲಭೂತ ಸೌಲಭ್ಯಗಳು ದೊರೆತಿಲ್ಲ. ರಸ್ತೆ, ಒಳಚರಂಡಿ, ಕುಡಿಯುವ ನೀರು ಹಾಗೂ ಸಾರ್ವಜನಿಕ ಶೌಚಾಲಯಗಳು ಹೀಗೆ ಹಲವಾರು ಬೇಕು ಬೇಡಿಕೆಗಳು ಬೇಡಿಕೆಗಳಾಗಿಯೇ ಉಳಿದಿವೆ.
ಸದ್ಯ ಜರುಗುತ್ತಿರುವ ಪುರಸಭೆಯ ಚುನಾವಣೆಯಲ್ಲಿ ಕಾಂಗ್ರೇಸ್ ಬೆಂಬಲಿತ ಅಭ್ಯರ್ಥಿಗಳಿಗೆ ಮತ ನೀಡಿ. ಮೂಡಲಗಿ ಪಟ್ಟಣದಲ್ಲಿ ಅವಶ್ಯಕವಿರುವ ತಾಲೂಕಾ ಕೇಂದ್ರ ಕಛೇರಿ, ದನಗಳ ಪೇಟೆ ಅಭಿವೃದ್ಧಿ, ಎ.ಪಿ.ಎಮ್.ಸಿ, ತರಕಾರಿ ಮಾರುಕಟ್ಟೆ, ಸುಸಜ್ಜಿತ ವ್ಯಾಯಾಮ ಶಾಲೆ ಮತ್ತಿತರ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಅನುವು ಮಾಡಿಕೊಡಬೇಕೆಂದು ಮತದಾರರಲ್ಲಿ ವಿನಂತಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೇಸ್ ನ ಹಿರಿಯ ಮುಖಂಡರಾದ ಎಸ್.ಆರ್ ಸೋನವಾಲಕರ, ಬಸನಗೌಡ ಪಾಟೀಲ ಪಟಗುಂದಿ, ಸಯ್ಯದ ಪೀರಜಾದೆ, ಅಭ್ಯರ್ಥಿಗಳಾದ ಶ್ರೀರಂಗ ಖೋಪರ್ಡೆ, ಇಜಾಜಅಹ್ಮದ ಕೊಟ್ಟಲಗಿ, ಸೇವಂತವ್ವ ಭಜಂತ್ರಿ, ಯಲ್ಲಮ್ಮ ಬಂಡಿವಡ್ಡರ, ಶೋಭಾ ಹಳ್ಳೂರ, ಸಿದ್ದವ್ವ ಹಳ್ಳೂರ, ನಾಗಪ್ಪ ಹಳ್ಳೂರ, ಮಾಳಪ್ಪ ಬೊರಗೌಡ, ಲಕ್ಕಪ್ಪ ಶಾಬನ್ನವರ, ನಿಂಗಪ್ಪ ಪಿರೋಜಿ, ಸಲ್ಮಾ ಶಕೀಲ ಪೀರಜಾದೆ, ಮಂಜುನಾಥ ಪೀರೋಜಿ ಹಾಗೂ ಪಕ್ಷದ ಕಾರ್ಯಕರ್ತರು, ಪದಾಧಿಕಾರಿಗಳು ಪ್ರಚಾರದಲ್ಲಿ ಪಾಲ್ಗೊಂಡಿದ್ದರು.