RNI NO. KARKAN/2006/27779|Wednesday, October 15, 2025
You are here: Home » breaking news » ಗೋಕಾಕ:ಕಠಿಣ ಪರಿಶ್ರಮದಿಂದ ಸರ್ವೋತೋಮುಖ ಅಭಿವೃದ್ಧಿ ಸಾಧಿಸಲು ಸಾಧ್ಯ : ಡಾ| ಸಿ.ಕೆ.ನಾವಲಗಿ

ಗೋಕಾಕ:ಕಠಿಣ ಪರಿಶ್ರಮದಿಂದ ಸರ್ವೋತೋಮುಖ ಅಭಿವೃದ್ಧಿ ಸಾಧಿಸಲು ಸಾಧ್ಯ : ಡಾ| ಸಿ.ಕೆ.ನಾವಲಗಿ 

ಕಠಿಣ ಪರಿಶ್ರಮದಿಂದ ಸರ್ವೋತೋಮುಖ ಅಭಿವೃದ್ಧಿ ಸಾಧಿಸಲು ಸಾಧ್ಯ : ಡಾ| ಸಿ.ಕೆ.ನಾವಲಗಿ

ಗೋಕಾಕ ಜು 24 : ಇಲ್ಲಿಯ ಸತೀಶ ಶುಗರ್ಸ್ ಅಕ್ಯಾಡೆಮಿ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ 2018-19ನೇ ಸಾಲಿನ ಕ್ರೀಡಾ ಮತ್ತು ವಿವಿಧ ಸಂಘ ಚಟುವಟಿಕೆಗಳ ಉದ್ಘಾಟನಾ ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭವು ಮಂಗಳವಾರದಂದು ಜರುಗಿತು.
ಮುಖ್ಯ ಅತಿಥಿಗಳಾಗಿ ಡಾ| ಸಿ.ಕೆ.ನಾವಲಗಿ ಮಾತನಾಡಿ ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು ಮತ್ತು ಕಠಿಣ ಪರಿಶ್ರಮದಿಂದ ಸರ್ವೋತೋಮುಖ ಅಭಿವೃದ್ಧಿ ಸಾಧಿಸಿ, ತಮ್ಮ ಜೀವನದಲ್ಲಿ ಸಿಕ್ಕ ಒಳ್ಳೆಯ ಅವಕಾಶಗಳನ್ನು ಸದುಪಯೋಗ ಮಾಡಿಕೊಂಡು, ಒಳ್ಳೆಯ ಮೌಲ್ಯಗಳನ್ನು ಅಳವಡಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಆಡಳಿತಾಧಿಕಾರಿ ಆರ್.ಎಸ್.ಡುಮ್ಮಗೋಳ ಮಾತನಾಡಿ ವಿದ್ಯಾರ್ಥಿಗಳು ಧೈರ್ಯಗೆಡದೆ, ಪ್ರಯತ್ನ ಶೀಲರಾಗಿ ಸಾಧನೆ ಮಾಡಬೇಕೆಂದು ಹೇಳಿದರು. ಪ್ರಾಚಾರ್ಯ ಪ್ರೊ. ಟಿ.ಬಿ.ತಳವಾರ ಪ್ರಾಸ್ತಾವಿಕ ಮಾತನಾಡಿದರು, ಕಾರ್ಯಕ್ರಮವನ್ನು ಪ್ರೊ,ಎಸ್.ಎಮ್.ಗುತ್ತಿ ಸ್ವಾಗತಿಸಿದರು., ಪ್ರೊ,ವ್ಹಿ.ಎಸ್.ರೆಡ್ಡಿ ನಿರೂಪಿಸಿದರು ಮತ್ತು ಪ್ರೊ, ಡಾ| ಜಿ.ಪಿ. ತಲ್ಲೂರ ವಂದಿಸಿದರು.

Related posts: