ಗೋಕಾಕ:ತಾಂತ್ರಿಕ ಕೌಶಲ್ಯಗಳ ಸದುಪಯೋಗ ಪಡೆದುಕೋಳಿ : ಪ್ರೋ. ಶಿವಾನಂದ ಗುರುನಾಳೆ
ತಾಂತ್ರಿಕ ಕೌಶಲ್ಯಗಳ ಸದುಪಯೋಗ ಪಡೆದುಕೋಳಿ : ಪ್ರೋ. ಶಿವಾನಂದ ಗುರುನಾಳೆ
ಗೋಕಾಕ ಜು 23 : ಬಿಸಿಎ ಪದವಿ ಪಡೆದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶಗಳು ಇದ್ದು ತಾವು ಕಲಿತ ತಾಂತ್ರಿಕ ಕೌಶಲ್ಯಗಳ ಸದುಪಯೋಗದಿಂದ ತಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳುವಂತೆ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ವಿಭಾಗದ ಚೇರಮನ್ನ ಪ್ರೋ. ಶಿವಾನಂದ ಗುರುನಾಳೆ ಹೇಳಿದರು.
ಸೋಮವಾರದಂದು ನಗರದಲ್ಲಿ ಕೆಎಲ್‍ಇ ಸಂಸ್ಥೆಯಿಂದ ಪ್ರಾರಂಭಿಸಲಾದ ನೂತನ ಬಿಸಿಎ ಕಾಲೇಜನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಕೈಗಾರಿಕಾ ಕ್ಷೇತ್ರದಲ್ಲಾಗುವ ಬದಲಾವಣೆಗನುಗುಣವಾದ ವಿಷಯಗಳನ್ನು ಬಿಸಿಎ ವಿದ್ಯಾರ್ಥಿಗಳಿಗೆ ಪಠ್ಯದಲ್ಲಿ ಅಳವಡಿಸಿ ಅವರನ್ನು ಆಧುನಿಕ ತಾಂತ್ರಿಕತೆಗೆ ತಯಾರು ಮಾಡಲಾಗುತ್ತಿದೆ. ವಿದ್ಯಾರ್ಥಿಗಳು ಶಿಸ್ತು, ಕಠೀಣ ಪರಿಶ್ರಮ ಹಾಗೂ ಆತ್ಮ ವಿಶ್ವಾಸದಿಂದ ವ್ಯಾಸಾಂಗ ಮಾಡಿ ಪ್ರತಿಭಾನ್ವಿತರಾಗಿರೆಂದು ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಕೆಎಲ್‍ಇ ಸಂಸ್ಥೆಯ ನಿರ್ದೇಶಕ ಜಯಾನಂದ ಮುನವಳ್ಳಿ ಮಾತನಾಡುತ್ತ, ಸಂಸ್ಥೆಯ ಚೇರಮನ್ನರಾದ ಪ್ರಭಾಕರ ಕೋರೆಯವರ ಆಶಿರ್ವಾಧದಿಂದ ಈ ಭಾಗದ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ಬಿಸಿಎ ಕಾಲೇಜು ಪ್ರಾರಂಭಿಸಲಾಗಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗಪಡಿಸಿಕೊಳ್ಳುವಂತೆ ಕರೆ ನೀಡಿದರು.
ವೇದಿಕೆಯ ಮೇಲೆ ಕೆಎಲ್‍ಇ ಸಂಸ್ಥೆಯ ಇಲ್ಲಿಯ ಪಿಯೂ ಕಾಲೇಜಿನ ಆಡಳಿತಾಧಿಕಾರಿ ಜಿ ಎಮ್ ಅಂದಾನಿ, ಪ್ರಾಚಾರ್ಯ ಕೆ ಸಿ ಹತಪಾಕಿ, ಬಿಸಿಎ ಕಾಲೇಜಿನ ಪ್ರಾಚಾರ್ಯ ಪ್ರಶಾಂತ ಕಿವಟಿ, ಉಪನ್ಯಾಸಕ ಮಲ್ಲಿಕಜಾನ ಭಾಗವಾನ ಇದ್ದರು.
ವಿದ್ಯಾರ್ಥಿನಿಯರಾದ ಐಶ್ವರ್ಯಾ ಸ್ವಾಗತಿಸಿದರು, ಕಲ್ಯಾಣಿ ಹಾಗೂ ರಂಜನಿ ನಿರೂಪಿಸಿದರು, ಅನುಷಾ ವಂದಿಸಿದರು.