RNI NO. KARKAN/2006/27779|Wednesday, January 14, 2026
You are here: Home » breaking news » ಬೆಳಗಾವಿ:ಸುವರ್ಣ ಸೌಧದ ಮುಂದೆ ಮತ್ತೆ ಭುಗಿಲೆದ್ದ ಪ್ರತ್ಯೇಕ ರಾಜ್ಯದ ಕೂಗು

ಬೆಳಗಾವಿ:ಸುವರ್ಣ ಸೌಧದ ಮುಂದೆ ಮತ್ತೆ ಭುಗಿಲೆದ್ದ ಪ್ರತ್ಯೇಕ ರಾಜ್ಯದ ಕೂಗು 

ಸುವರ್ಣ ಸೌಧದ ಮುಂದೆ ಮತ್ತೆ ಭುಗಿಲೆದ್ದ ಪ್ರತ್ಯೇಕ ರಾಜ್ಯದ ಕೂಗು

ಬೆಳಗಾವಿ ಜು 10 : ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿ ಹಾಗೂ ಸುವರ್ಣ ಸೌಧಕ್ಕೆ ಕಛೇರಿ ಸ್ಥಳಾಂತರಕ್ಕೆ ಆಗ್ರಹಿಸಿ ಉತ್ತರ ಕರ್ನಾಟಕ ಹೋರಾಟ ಸಮಿತಿ ವತಿಯಿಂದ ಸುವರ್ಣ ಸೌಧದ ಎದುರು ಮಂಗಳವಾರದಂದು ಪ್ರತಿಭಟನೆ ನಡೆಯಿಸಲಾಯಿತು

ಉತ್ತರ ಕರ್ನಾಟಕ ವಿಕಾಸ ವೇದಿಕೆಯ ಅಧ್ಯಕ್ಷ ಅಶೋಕ್​ ಪೂಜಾರಿ ನೇತೃತ್ವದಲ್ಲಿ ನಡೆದ ಧರಣಿಯಲ್ಲಿ ನೂರಾರು ಜನ ವೇದಿಕೆಯ ಕಾರ್ಯಕರ್ತರು ಪಾಲ್ಗೊಂಡಿದ್ದರು. 

ಸುವರ್ಣಸೌಧ ಉತ್ತರ ಕರ್ನಾಟಕ ಭಾಗದ ಆಡಳಿತಾತ್ಮಕ ಶಕ್ತಿ ಕೇಂದ್ರವಾಗಬೇಕು. ಇಲ್ಲಿ
ನಿರಂತರ ಅಧಿವೇಶನ ನಡೆಸಬೇಕು. ಬೆಳಗಾವಿ ರಾಜ್ಯದ ಎರಡನೇ ರಾಜ್ಯದಾನಿಯಾಗಿ ಘೋಷಿಸಬೇಕು ಹಾಗೂ ರಾಜ್ಯ ಮಟ್ಟದ ಕಾರ್ಯಾಲಯ ಸ್ಥಳಾಂತರ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು.

ಉತ್ತರ ಕರ್ನಾಟಕ ಅಭಿವೃದ್ಧಿಯನ್ನು ರಾಜ್ಯ ಸರ್ಕಾರ ನಿರ್ಲಕ್ಷಿಸಿದೆ ಎಂದು ಆರೋಪಿಸಿದರು. ಅಲ್ಲದೆ, ಒಂದು ವಾರದೊಳಗಾಗಿ ತಮ್ಮ ಬೇಡಿಕೆ ಈಡೇರಿಸದಿದ್ದರೆ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ರವಾನಿಸಿದರು. 

ಉತ್ತರ ಕರ್ನಾಟಕವನ್ನು ಕುಮಾರಸ್ವಾಮಿ ಅವರು ಸಂಪೂರ್ಣ ನಿರ್ಲಕ್ಷಿಸಿದ್ದಾರೆ ಮುಂದಿನ ದಿನಗಳಲ್ಲಿ ಸುವರ್ಣ ವಿಧಾನಸೌಧ ಮತ್ತು ಬೆಂಗಳೂರು ವಿಧಾನಸೌಧವನ್ನು ಕೀಲಿ ಹಾಕುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ನಿಮ್ಮ ಉತ್ತರ ಕರ್ನಾಟಕ ಅಭಿವೃದ್ಧಿ ಸಾಕು ನಮಗೆ ಪ್ರತ್ಯೇಕ ರಾಜ್ಯ ಮಾಡಿ ಬಿಡಿ ಎಂದು ಹೋರಾಟ ಸಮಿತಿಯ ನಿಲೇಶ ಬನ್ನೂರ ಆಗ್ರಹಿಸಿದರು . ನೂರಾರು ಹೋರಾಟಗಾರರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು

Related posts: