ಗೋಕಾಕ : ಸ್ನೇಹ ಸೌಹಾರ್ದತೆಯ ಸಂಕೇತ ರಂಜಾನ್ ಹಬ್ಬ

ಸ್ನೇಹ ಸೌಹಾರ್ದತೆಯ ಸಂಕೇತ ರಂಜಾನ್ ಹಬ್ಬ
ವಿಶೇಷ ವರದಿ : ಅಡಿವೇಶ ಮುಧೋಳ
ಭಾರತ ದೇಶದ ವಿವಿಧ ಧರ್ಮಗಳಲ್ಲಿ ಅವರವರ ಧರ್ಮಗಳಿಗೆ ಅನುಸಾರವಾಗಿ ಹಬ್ಬ, ಹರಿದಿನಗಳನ್ನು ಆಚರಿಸಿಕೊಳ್ಳುತ್ತಾರೆ. ಅಂತಹ ಧರ್ಮಗಳಲ್ಲಿ ಮುಸ್ಲಿಂ ಧರ್ಮಿಯರ ರಂಜಾನ್ ಹಬ್ಬವೂ ಒಂದು. ದೇಶದೆಲ್ಲೆಡೆ ಇದೆ ಜೂನ್.15 ಇಲ್ಲವೇ 16ರಂದು ಆಕಾಶದಲ್ಲಿ ರಾತ್ರಿ ಹೊತ್ತು ಚಂದಿರ ಕಾಣಿಸಿದ ಮರು ದಿನ ಸಂಪ್ರದಾಯದಂತೆ ಸ್ನೇಹ ಸೌಹಾರ್ದತೆಯ ಸಂಕೇತವಾದ ರಂಜಾನ್ ಹಬ್ಬ ಕನ್ನಡ ನಾಡಿನಲ್ಲಿಯೂ ಸಹ ಸಡಗರದಿಂದ ನಡೆಯಲಿದೆ ಅಂದು ದೇಶಾದ್ಯಂತ ನೆಲೆಸಿರುವ ಮುಸ್ಲಿಂ ಬಾಂದವರು ಈದ್ಗಾದಲ್ಲಿ ಸೇರಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವರು ಇದಕ್ಕೆ “ಈದ್ದುಲ್ಲ ಫಿತರ್ ” ಎಂದು ಕರೆಯುವರು ಇದೇ ಜೂನ್.14 ಇಲ್ಲವೇ 15 ರಂದು ಆಕಾಶದಲ್ಲಿ ರಾತ್ರಿ ಹೊತ್ತು ಚಂದಿರ ಕಾಣಿಸಿದ ಮರು ದಿನ ಸಂಪ್ರದಾಯದಂತೆ ಸ್ನೇಹ ಸೌಹಾರ್ದತೆಯ ಸಂಕೇತವಾದ ರಂಜಾನ್ ಹಬ್ಬ ಸಡಗರದಿಂದ ನಡೆಯಲಿದೆ.
ರಂಜಾನ್ ಹಬ್ಬ ಬಂದಿತೆದಂರೆ ಮುಸ್ಲಿಂರು ಬಡವನೇ ಆಗಿರಲಿ, ಶ್ರೀಮಂತನೇ ಇರಲಿ ಒಂದು ತಿಂಗಳು ಮಾತ್ರ ಸಮಾನತೆ, ಸ್ನೇಹದಿಂದ ರೊಜಾ(ಉಪವಾಸ) ವ್ರತ ಆಚರಿಸುತ್ತಾರೆ. ಅಷ್ಟೇ ಅಲ್ಲದೇ ಮುಸ್ಲಿಂ ಸಮುದಾಯದಲ್ಲಿ ಉದ್ಯಮಿಯಿಂದ ಹಿಡಿದು ಕೂಲಿ ಕೆಲಸ ಮಾಡುವವರ ತನಕ ಇಲ್ಲರೂ ಮಸೀದಿಗಳಿಗೆ ಸರಿಯಾದ ಸಮಯಕ್ಕೆ ತೆರಳಿ ನಮಾಜ್ ಮಾಡಿ ಅಲ್ಲಾಗೆ ವಿಶೇಷ ಪ್ರಾರ್ಥನೆ ಸಲ್ಲಿಸುತ್ತಾರೆ. ಹೀಗಾಗಿ ಪ್ರತಿ ಮುಸ್ಲಿಂ ಬಾಂದವನಲ್ಲಿ ಸಮಾನತೆಯ, ಸ್ನೇಹ ಸೌಹಾರ್ದತೆಯ ವೈಶಿಷ್ಟ್ಯೆದ ಪ್ರತೀಕ ರಂಜಾನ್ ಹಬ್ಬವಾಗಿದೆ.
ಪ್ರತಿಯೊಬ್ಬ ಮುಸ್ಲಿಂ ಭಾಂದವರ ಮನೆಯಲ್ಲಿ ಬೆಳಗ್ಗೆ 3 ಗಂಟೆ ಹೊತ್ತಿಗೆ ಎದ್ದು ಮಹಿಳೆಯರು ಅಡುಗೆ ತಯಾರಿಸಲು ಆರಂಭಿಸುತ್ತಾರೆ. ಸೂರ್ಯದೋಯದ ಮುಂಚೆ ಉಪಾಹಾರ ಸೇವಿಸಿದರೆ ನಂತರ ಊಟ ಮಾಡುವದು, ರಾತ್ರಿ 7 ಗಂಟೆಗೆ ಉಪವಾಸ ವ್ರತ ಅಂತ್ಯಗೊಳಿಸಿದಾಗಲೇ ಕಠಿಣ ವೃತಾಚರಣೆ ಕೈಗೊಳ್ಳುವದು ಈ ಧರ್ಮದ ಸಂಪ್ರದಾಯವಾಗಿದೆ. ಚಂದಿರನ ಬೆಳದಿಂಗಳು ಸಂದೇಶ ನೀಡುತ್ತದೆ.
ಇಸ್ಲಾಂ ತಳಹದಿಯ ಪಂಚಸೂತ್ರ ಪರಿಪಾಲನೆಯ ಸಾರಾಂಶ ಎತ್ತಿಹಿಡಿಯುತ್ತದೆ. ರಂಜಾನ್ ತಿಂಗಳಾದ್ಯಂತ ಮಾಡಿದ ಉಪವಾಸ, ಪ್ರಾರ್ಥನೆಯಿಂದ ಮನಸ್ಸು, ವ್ಯಕ್ತಿತ್ವ, ಆಲೋಚನೆಗಳ ಮೇಲೆ ಪರಿಣಾಮ ಬೀರುತ್ತದೆ. ದೀನ ದಲಿತರಿಗೆ, ಅನಾಥರಿಗೆ, ನಿರ್ಗತಿಕರಿಗೆ ಅನ್ನ, ಬಟ್ಟೆ, ದವಸ ಧಾನ್ಯ ಸೇರಿದಂತೆ ಕೆಲವನ್ನು ಫಲಾಪೇಕ್ಷೆ ಇಲ್ಲದೇ ನೀಡುವಂತೆ ರಂಜಾನ್ ಪ್ರತಿಪಾದಿಸುತ್ತದೆ.
ಆಕಾಶದಲ್ಲಿ ಚಂದಿರನನ್ನು ನೋಡಿದ ಮೇಲೆ ಮುಸ್ಲಿಂ ಬಾಂಧವರಿಗೆ ರಂಜಾನ್ ತಿಂಗಳಿನ ಉಪವಾಸ ವೃತಾಚರಣೆಗೆ ಅಂತ್ಯ ಬೀಳುವದು, ಅಂದೇ ರಂಜಾನ್ ತಿಂಗಳ ಕೊನೆಯ ದಿನ. ಅದಕ್ಕೆ ಶವಾಲ್ ಮಾಸದ ಪ್ರಥಮ ಶ್ರೇಷ್ಠದಿನವೆನ್ನುವರು. ಮುಸ್ಲಿಂರು ಅಲ್ಲಾನನ್ನು ಪ್ರಾರ್ಥಿಸುತ್ತಾರೆ.ಸೃಷ್ಠಿಕರ್ತನನ್ನು ಸದಾ ನೆನೆಪಿಸಿರಿ, ಪೈಗಂಬರರ ಪವಿತ್ರ ಜೀವನ ನಿಮಗೆ ಆದರ್ಶವಾಗಲಿ,ಪರರ ಸೇವೆ, ಪರೋಪಕಾರದಿಂದ ನಿಮಗೆ ಬದುಕಿನಲ್ಲಿ ಸುಖ, ಶಾಂತಿ, ನೆಮ್ಮದಿ ದೊರಕಲಿ, ಲೋಕ ಕಲ್ಯಾಣ ನಿಮ್ಮ ಗುರಿಯಾಗಲಿ ಅಂತಾ ಮುಸ್ಲಿಂ ಸಮಾಜದ ಹಿರಿಯ ಮೌಲಿಗಳು ಎಲ್ಲ ಮುಸ್ಲಿಂ ಬಾಂಧವರಿಗೆ ಉಪದೇಶ ಮಾಡುತ್ತಾರೆ. ನಂತರ ಮುಸ್ಲಿಂ ಬಾಂಧವರೆಲ್ಲಾ ಸೇರಿ ಲೋಕ ಕಲ್ಯಾಣಕ್ಕೆ ಅಲ್ಲಾನಲ್ಲಿ ಬೇಡಿಕೆ ಸಲ್ಲಿಸುವದರ ಮೂಲಕ ರಂಜಾನ್ ಹಬ್ಬಕ್ಕೆ ತೆರೆಬೀಳುತ್ತದೆ. ಈ ದಿನಕ್ಕೆ ಈದ್ದುಲ್ಲ್ ಫಿತರ್ ಎನ್ನುವರು.
ಅಡುಗೆ-ತೊಡುಗೆಯ ಸಂಭ್ರಮ: ರಂಜಾನ್ ಹಬ್ಬದ ದಿನದಂದು ಮುಸ್ಲಿಂ ಭಾಂದವರು ಪ್ರತಿ ಮನೆಗಳಲ್ಲಿ ಸಿಹಿಯಾದ ತಿಂಡಿ ತಿನಿಸುಗಳನ್ನು ತಯಾರಿಸಿ ಅಕ್ಕ-ಪಕ್ಕದ ಮನೆಯ ಹಾಗೂ ಆಪ್ತ ಮಿತ್ರರನ್ನು ಭೋಜನ ಕೂಟಕ್ಕೆ ಅಹ್ವಾನಿಸಿ ಸಿಹಿಯಾದ ಊಟ ಬಡಿಸಲಾಗುತ್ತದೆ. ಅಲ್ಲದೇ ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರ ವರೆಗೂ ಹೊಸ ಹೊಸ ಬಟ್ಟೆ ಬರೆಗಳನ್ನು ತೊಟ್ಟು ಸುಗಂಧಿತ ಕಂಪು ಎಲ್ಲರಲ್ಲಿಯೂ ಸೂಸುತ್ತಿರುತ್ತದೆ. ಮುಸ್ಲಿಂ ಭಾಂದವರು ಸಂಭ್ರಮ ಸಡಗರದಿಂದ ರಂಜಾನ್ ಆಚರಿಸುತ್ತಾರೆ.
* ರಫೀಕ ಮಿರ್ಜಾನಾಯ್ಕ ಮುಸ್ಲಿಂ ಬಾಂಧವ
“ರಂಜಾನ್ ಹಬ್ಬವು ಧರ್ಮದ ಆಚರಣೆಯಾದರೂ ನಿರ್ಗತಿಕರಿಗೆ, ಬಡವರಿಗೆ ಹಸಿವಿನಿಂದ ಮುಕ್ತಿ ನೀಡಲು, ಸಹಾಯ ಸಹಕಾರ ನೀಡಲು, ಪ್ರತಿ ಮನುಷ್ಯನಲ್ಲಿಯ ಅಹಂ, ಸಣ್ಣತನದ ಕೀಳುತನದ ಭಾವ ಕಳೆದು ಆ ಮನುಷ್ಯನಲ್ಲಿ ಮಾನವತೆ, ಸ್ನೇಹ, ಪರೋಪಕಾರದ ಮಾನವೀಯ ಮೌಲ್ಯಗಳ ಚೈತನ್ಯ ತುಂಬಿ ಪ್ರೇರೆಪಿಸುವದೇ ರಂಜಾನ್ ಹಬ್ಬದ ನಿಜವಾದ ಸಂದೇಶವಾಗಿದೆ”.