RNI NO. KARKAN/2006/27779|Monday, August 4, 2025
You are here: Home » breaking news » ಗೋಕಾಕ:ಬೆಟಗೇರಿ ಹಾಗೂ ಸುತ್ತಲಿನ ಹಳ್ಳಿಗಳಲ್ಲಿ ತುಂತುರ ಮಳೆಯಾಗಿ ರೈತರ ಮುಖದಲ್ಲಿ ಕಳೆ..!

ಗೋಕಾಕ:ಬೆಟಗೇರಿ ಹಾಗೂ ಸುತ್ತಲಿನ ಹಳ್ಳಿಗಳಲ್ಲಿ ತುಂತುರ ಮಳೆಯಾಗಿ ರೈತರ ಮುಖದಲ್ಲಿ ಕಳೆ..! 

ಗ್ರಾಮದಲ್ಲಿ ರವಿವಾರದಂದು ಸ್ವಲ್ಪ ಪ್ರಮಾಣದಲ್ಲಿ ತುಂತುರ ಮಳೆಯಾಗಿರುವದು.

ಬೆಟಗೇರಿ ಹಾಗೂ ಸುತ್ತಲಿನ ಹಳ್ಳಿಗಳಲ್ಲಿ ತುಂತುರ ಮಳೆಯಾಗಿ ರೈತರ ಮುಖದಲ್ಲಿ ಕಳೆ..!

ಬೆಟಗೇರಿ ಜೂ 10 : ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮ ಸೇರಿದಂತೆ ಸುತ್ತಲಿನ ಹಳ್ಳಿಗಳಲ್ಲಿ ರವಿವಾರ ಜೂ.10 ರಂದು ಬೆಳಗ್ಗೆಯಿಂದ ಸಂಜೆ ತನಕ ಸ್ವಲ್ಪ ಪ್ರಮಾಣದಲ್ಲಿ ಆಗಾಗ ತುಂತುರ ಮಳೆಯಾಗಿ ಅಂತೂ ರೈತರ ಮುಖದಲ್ಲಿ ಕಳೆ ತಂದಿದೆ. ಇಂದು ಜಿಟಿ ಜಿಟಿ ಆಗಾಗ ಅಲ್ಪ ಪ್ರಮಾಣದ ಮಳೆಯಾಗಿದ್ದರಿಂದ ಮುಂಬರುವ ದಿನಗಳಲ್ಲಿ ಮಳೆಯಾಗುವ ಆಶಾಭಾವನೆ ಇಲ್ಲಿಯ ರೈತರಲ್ಲಿ ಮೂಡಿದೆ.
ಸ್ಥಳೀಯ ರೈತರು, ವೃದ್ಧರು ದಿನ ಬೆಳಗಾದರೆ ಆಕಾಶದತ್ತ ಮುಖಮಾಡಿ ಮೇಘರಾಜನ ದಾರಿ ಕಾಯುತ್ತಾ ಮಳೆ ಇಲ್ಲದೇ ರೈತರ ಮುಖದ ಮೇಲಿನ ಕಳೆ ದಿನದಿಂದ ದಿನಕ್ಕೆ ಕುಂದುತ್ತಿರುವಾಗ ಇಂದು ಆಗಾಗ ಜಿಟಿ ಜಿಟಿಯಾಗಿ ಸ್ವಲ್ಪ ಪ್ರಮಾಣದ ಮಳೆಯಾಗಿದ್ದರಿಂದ ದಿನವಿಡಿ ತಂಪಾದ ವಾತಾವರಣವಿತ್ತು. ಈಗ ಮೃಗಶಿರ ಮಳೆ ಧರೆಗಿಳಿದ್ದರಿಂದ ಇಲ್ಲಿಯ ಜನರು ನಿಟ್ಟಿಸಿರುಬಿಡುವಂತಾಗಿದೆ.
ಸ್ಥಳೀಯ ಹಾಗೂ ಸುತ್ತಲಿನÀ ಹಳ್ಳಿಗಳಲ್ಲಿ ಪ್ರಸಕ್ತ ವರ್ಷ ಸಂಪೂರ್ಣ ಮಳೆಯಾಗದೇ ಭೂಮಿಯಲ್ಲಿ ಈಗಿದ್ದ ಬೆಳೆಯು ಸಹ ಬಾಡಿ ಹೋಗುವ ಆತಂಕದ ಸ್ಥಿತಿಯಲ್ಲಿವೆ. ಈ ವರ್ಷ ಮುಂಗಾರು ಪ್ರವೇಶಿಸಿದರೂ ಕೂಡಾ ಕಳೆದ ನಾಲ್ಕೈದು ದಿನಗಳಿಂದ ಈ ಭಾಗದಲ್ಲಿ ಮಳೆಯಾಗದೇ ಇದ್ದುದರಿಂದ ಭೂಮಿ ಬಿತ್ತನೆ, ನೀರಾವರಿ ಹೊಂದಿದ ಜಮೀನದಲ್ಲಿಯೂ ಸಹ ಕೃಷಿ ಚಟುವಟಿಕೆಗಳು ಸಹ ಭರದಿಂದ ನಡೆದಿಲ್ಲ ಹೀಗಾಗಿ ಸಂಪೂರ್ಣ ಮಳೆಯೂ ಧರೆಗಿಳಿಯುವ ನಿರೀಕ್ಷೆಯ ಬಯಕೆಯಲ್ಲಿ ಈ ಭಾಗದ ರೈತರು ಕಾಲ ಕಳೆಯುವಂತಾಗಿದೆ.
ಬೆಟಗೇರಿ ಹಾಗೂ ಸುತ್ತಲಿನ ಹಳ್ಳಿಗಳಲ್ಲಿ ಇಲ್ಲಿಯ ತನಕ ಸಂಪೂರ್ಣ ಮಳೆ ಆಗಿಲ್ಲ, ಬಿತ್ತನೆ ಹಾಗೂ ಕೃಷಿ ಚಟುವಟಿಕೆ ಸಹಿತ ಮಾಡಲು ಮನಸ್ಸು ಬರುತ್ತಿಲ್ಲ ಈ ಸಲ ಸಂಪೂರ್ಣ ಮಳೆ ಸುರಿಯುವ ಭರವಸೆ ಸಹ ಇಲ್ಲದಂತದಾಗಿದೆ ಎಂದು ಬೆಟಗೇರಿ ಗ್ರಾಮದ ಪ್ರಗತಿ ಪರ ರೈತ ಬಸವಂತ ಮಾಯಪ್ಪ ಕೋಣಿ ಹೇಳುವ ಧನನೀಯ ಮಾತಾಗಿದೆ.

Related posts: