RNI NO. KARKAN/2006/27779|Sunday, August 3, 2025
You are here: Home » breaking news » ಘಟಪ್ರಭಾ:ಯಮಕನಮರ್ಡಿ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕೊಣ್ಣೂರಿನ ಭೀಮಶಿ ಸಿದ್ದಪ್ಪ ನಾಯಿಕ ಸ್ವರ್ಧೆ

ಘಟಪ್ರಭಾ:ಯಮಕನಮರ್ಡಿ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕೊಣ್ಣೂರಿನ ಭೀಮಶಿ ಸಿದ್ದಪ್ಪ ನಾಯಿಕ ಸ್ವರ್ಧೆ 

ಭೀಮಶಿ ಸಿದ್ದಪ್ಪ ನಾಯಿಕ

ಯಮಕನಮರ್ಡಿ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕೊಣ್ಣೂರಿನ ಭೀಮಶಿ ಸಿದ್ದಪ್ಪ ನಾಯಿಕ ಸ್ವರ್ಧೆ
ಘಟಪ್ರಭಾ ಮಾ 21 : ಸಮೀಪದ ಕೊಣ್ಣೂರ ಪಟ್ಟಣದ ನಿವಾಸಿ ಹಾಗೂ ಪಟ್ಟಣ ಪಂಚಾಯತಿ ಮಾಜಿ ಸದಸ್ಯರು ಆದ ಭೀಮಶಿ ಸಿದ್ದಪ್ಪ ನಾಯಿಕ ಇವರು ಮುಂಬರುವ ವಿಧಾನ ಸಭೆ ಚುನಾವಣೆಯಲ್ಲಿ ಯಮಕನಮರ್ಡಿ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ದಿಸಲು ನಿರ್ಧರಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ನಾನು ಮೂಲತಃ ಯಮಕನಮರ್ಡಿ ಕ್ಷೇತ್ರದ ಪಾಶ್ಚಾಪೂರ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಗುಮಚಿನಮರ್ಡಿ ಗ್ರಾಮದವನಾಗಿದ್ದು, ಸುತಗಟ್ಟಿ ಶಿವಾಪೂರ ಶ್ರೀ ಮುಪ್ಪಿನ ಮೌನ ಕಾಡಸಿದ್ದೇಶ್ವರ ಸ್ವಾಮಿಜಿಯವರ ಪರಮ ಶಿಷ್ಯನಾಗಿದ್ದೇನೆ. ನಾನು ಎಸ್.ಟಿ ಸಮುದಾಯಕ್ಕೆ ಸೇರಿದ್ದು, ಯಮಕನಮರ್ಡಿ ಕ್ಷೇತ್ರವು ಎಸ್.ಟಿ. ಮೀಸಲು ಕ್ಷೇತ್ರವಾಗಿರುವದರಿಂದ ಇಲ್ಲಿ ಸ್ಪರ್ಧಿಸಲು ನನ್ನ ಹಿತೈಶಿಗಳು ಒತ್ತಾಯಿಸುತ್ತಿದ್ದಾರೆ. ಈಗಾಗಲೇ ನಾನು ಕ್ಷೇತ್ರದಲ್ಲಿ ಸಂಚರಿಸಿ ಜನಾಭಿಪ್ರಾಯ ಪಡೆದಿದ್ದು, ನನಗೆ ಉತ್ತಮ ಬೆಂಬಲ ವ್ಯಕ್ತವಾಗಿದೆ.
ನಾನು 1992 ರಿಂದ ಧಾರ್ಮಿಕ, ಸಾಮಾಜಿಕ, ರಾಜಕೀಯ ರಂಗದಲ್ಲಿ ಸೇವೆ ಮಾಡುತ್ತ ಬಂದಿರುತ್ತೆನೆ. ಅನೇಕ ವರ್ಷಗಳಕಾಲ ಬಿಜೆಪಿ ಎಸ್.ಟಿ. ಮೋರ್ಚಾ ಜಿಲ್ಲಾಧ್ಯಕ್ಷರಾಗಿ ಸೇವೆ ಸಲ್ಲಿಸಿ, 2013 ರ ವಿಧಾನ ಸಭಾ ಚುನಾವಣೆಯಲ್ಲಿ ಗೋಕಾಕ ವಿಧಾನ ಸಭಾ ಮತ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೇನೆ.
ಯಮಕನಮರ್ಡಿ ವಿಧಾನ ಸಭಾ ಕ್ಷೇತ್ರ್ರದ ಎಲ್ಲಾ ಹಳ್ಳಿಗಳು ನನಗೆ ಪರಿಚಯವಿದ್ದು, ಉತ್ತಮ ಜನ ಬೆಂಬಲ ವ್ಯಕ್ತವಾಗುತ್ತಿರುವದರಿಂದ ಈ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ದಿಸಲು ನಿಧರಿಸಿದೆನೆ ಎಂದು 

ಭೀಮಶಿ ಸಿದ್ದಪ್ಪ ನಾಯಿಕ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Related posts: