ಗೋಕಾಕ:ಬಡವರ ಯೋಗಕ್ಷೇಮ ವಿಚಾರಿಸುವುದು ಮಾನವ ಧರ್ಮದ ಅವಿಭಾಜ್ಯ ಅಂಗವಾಗಿದೆ : ಮೌಲಾನ ಸಜ್ಜಾದ ನೋಮಾನಿ

ಬಡವರ ಯೋಗಕ್ಷೇಮ ವಿಚಾರಿಸುವುದು ಮಾನವ ಧರ್ಮದ ಅವಿಭಾಜ್ಯ ಅಂಗವಾಗಿದೆ : ಮೌಲಾನ ಸಜ್ಜಾದ ನೋಮಾನಿ
ಗೋಕಾಕ ಜ 17 : ಬಡವರ ಯೋಗಕ್ಷೇಮ ವಿಚಾರಿಸುವುದು ಮಾನವ ಧರ್ಮದ ಅವಿಭಾಜ್ಯ ಅಂಗವಾಗಿದೆ ಎಂದು ರಹಮಾನ್ ಪೌಂಡೇಶನನ ಸಂಸ್ಥಾಪಕ ಅಧ್ಯಕ್ಷ ಮುಂಬೈನ ಹಜರತ್ ಮೌಲಾನಾ ಖಲೀಲುರ್ರ ರಹಮಾನ ಸಜ್ಜಾದ ನೋಮಾನಿ ಹೇಳಿದರು.
ಶನಿವಾರದಂದು ನಗರದ ಎಪಿಎಂಸಿ ಸಭಾಂಗಣದಲ್ಲಿ ಇಲ್ಲಿನ ರಹಮಾನ್ ಪೌಂಡೇಶನ್ ವತಿಯಿಂದ ಹಮ್ಮಿಕೊಂಡ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಧರ್ಮದ ಚಕ್ರವ್ಯೂಹದ ಒಳಗೆ ಹೋಗಿ ಧರ್ಮ ಹೇಳಿದ ಸತ್ಕಾರ್ಯಗಳನ್ನು ಮಾಡಬೇಕು. ಮಕ್ಕಳು ಆಧುನಿಕ ಯುಗದ ಸೆಳೆತಕ್ಕೆ ಸಿಲುಕಿ ಯಾವಕಡೆ ವಾಲುತ್ತಿದ್ದಾರೆ ಎಂಬುದರ ಕಡೆ ಗಮನ ಹರಿಸುವುದು ಪ್ರತಿಯೊಬ್ಬ ಪಾಲಕ,ಪೋಷಕರು ಆದ್ಯ ಕರ್ತವ್ಯವಾಗಿದ್ದು, ಸಮಾಜ ಸುಧಾರಿಸುವ ಮೊದಲು ತಮ್ಮ ಕುಟುಂಬದ ಕಡೆ ಗಮನ ಹರಿಸಿ ಕೌಟುಂಬಿಕ ಜೀವನವನ್ನು ಸರಿಯಾಗಿ ನಡೆಸಿದರೆ ಆ ಕುಟುಂಬವೇ ಸ್ವರ್ಗಮಯವಾಗುವುದು ಎಂದ ಅವರು ಮಗ, ಮಗಳು, ಸೋಸೆ, ಮೊಮ್ಮಕ್ಕಳು, ನೆರೆಹೋರೆ ಅವರೊಂದಿಗೆ ಒಳ್ಳೆಯ ನಡೆತೆಗಳನ್ನು ಇಟ್ಟುಕೊಳ್ಳಬೇಕು.
ಬಹುಮುಖ್ಯವಾಗಿ ಇತ್ತೀಚಿನ ದಿನಗಳಲ್ಲಿ ಆಡಂಬರದ ಮದುವೆಗಳು ಸಮಾಜದಲ್ಲಿ ನಡೆಯುತ್ತಿವೆ.ಇದರಿಂದ ಬಡವರು ಸಾಲ,ಸೂಲ ಮಾಡಿ ತಮ್ಮ ಮಕ್ಕಳ ಮಧುವೆಗಳನ್ನು ಮಾಡಿ ನಂತರ ಸಾಲ ತಿರಿಸಲು ಹರಸಾಹಸ ಪಡುತ್ತಿರುವ ನಿದರ್ಶನಗಳು ಹಲವಾರಿವೆ ಇದನ್ನು ಹೋಗಲಾಡಿಸಲು ಶ್ರೀಮಂತರೆನ್ನಿಸಿಕೊಂಡ ನಾವು ಬಡವರ ನೆರವಿಗೆ ಧಾವಿಸಬೇಕಾಗಿದೆ. ಆ ನಿಟ್ಟಿನಲ್ಲಿ ಇಡೀ ದೇಶದಲ್ಲಿ ರಹಮಾನ್ ಪೌಂಡೇಶನ್ ವತಿಯಿಂದ ಬಡವರನ್ನು ಗುರುತಿಸಿ ಅವರ ವಿವಾಹವನ್ನು ಸರಳವಾಗಿ ಮಾಡಲಾಗುತ್ತಿದೆ ಎಂದು ಹೇಳಿದರು.
ಆಡಂಬರದ ವಿವಾಹಗಳನ್ನು ಮಾಡದೆ ಸರಳವಾಗಿ ವಿವಾಹಗಳನ್ನು ಮಾಡಿ ಸಾಮಾಜದಲ್ಲಿ ಬಡವರು ಸಹ ಮುಖ್ಯವಾಹಿನಿಗೆ ಬಂದು ತಮ್ಮ ಮಕ್ಕಳ ವಿವಾಹಗಳನ್ನು ಮಾಡುವಂತೆ ಪ್ರೇರೆಪಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಗೋಕಾಕ ಮತ್ತು ಮೂಡಲಗಿ ತಾಲೂಕಿನ 20 ಬಡ ನವ ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು ಹಾಗೂ ಅಲ್ಪಸಂಖ್ಯಾತ ಇಲಾಖೆಯಿಂದ ತಲಾ ಒಬ್ಬ ವಧುವಿಗೆ 50 ಸಾವಿರ ಸಹಾಯ ಧನವನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಹಜರತ ಮೌಲಾನಾ ಮುಫ್ತಿ ಅಬ್ದುಲ್ ಹಮೀದ್ ಸಾಬ, ಹಜತರ ಮೌಲಾನಾ ಮುಫ್ತಿ ಅಬ್ದುಲ್ ಅಜೀಜಸಾಬ,ಮುಫ್ತಿ ಖಾಲಿದಸಾಬ, ಮೌಲಾನಾ ಅಬ್ಬುಲಾಸಾಬ, ಹಜರತ ಮೌಲಾನಾ ಸಲೀಮಸಾಬ, ಮೌಲಾನ ಅನ್ಸಾರ ಅಜೀಜ ನದ್ವಿ, ಮುಖಂಡರುಗಳಾದ ಇಲಾಹಿ ಖೈರದಿ, ಇಸಾಕ ಸೌದಾಗರ, ಇಸ್ಮಾಯಿಲ್ ಗೋಕಾಕ, ಆರೀಫ ಪೀರಜಾದೆ, ಕುತಬುದ್ದೀನ ಗೋಕಾಕ, ಹಾಜಿ ಕುತುಬದ್ದೀನ ಬಸ್ಸಾಪೂರಿ, ಮೋಸಿನ ಖೋಜಾ, ಅಬ್ಬುರಹಮಾನ ದೇಸಾಯಿ, ಖಾರಿ ಯಾಕೂಬಸಾಬ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
