RNI NO. KARKAN/2006/27779|Tuesday, October 14, 2025
You are here: Home » breaking news » ಗೋಕಾಕ:ಗಣೇಶೋತ್ಸವ ಮತ್ತು ಈದ್ ಮಿಲಾದ್ ಹಬ್ಬವನ್ನು ಪರಸ್ಪರ ಸ್ನೇಹ, ಸೌರ್ಹಾದತೆಯಿಂದ ಆಚರಿಸಿ : ತಹಶೀಲ್ದಾರ ಭಸ್ಮೆ

ಗೋಕಾಕ:ಗಣೇಶೋತ್ಸವ ಮತ್ತು ಈದ್ ಮಿಲಾದ್ ಹಬ್ಬವನ್ನು ಪರಸ್ಪರ ಸ್ನೇಹ, ಸೌರ್ಹಾದತೆಯಿಂದ ಆಚರಿಸಿ : ತಹಶೀಲ್ದಾರ ಭಸ್ಮೆ 

ಗಣೇಶೋತ್ಸವ ಮತ್ತು ಈದ್ ಮಿಲಾದ್ ಹಬ್ಬವನ್ನು ಪರಸ್ಪರ ಸ್ನೇಹ, ಸೌರ್ಹಾದತೆಯಿಂದ ಆಚರಿಸಿ : ತಹಶೀಲ್ದಾರ ಭಸ್ಮೆ

ಗೋಕಾಕ ಆ 13 : ಗಣೇಶೋತ್ಸವ ಮತ್ತು ಈದ್ ಮಿಲಾದ್ ಹಬ್ಬವನ್ನು ಹಿಂದೂ–ಮುಸ್ಮಿಮರು ಪರಸ್ಪರ ಸ್ನೇಹ, ಸೌರ್ಹಾದತೆಯಿಂದ ವರ್ತಿಸಿ ಶಾಂತಿಯುತವಾಗಿ ಹಬ್ಬ ಆಚರಿಸಬೇಕು ಎಂದು ತಹಶೀಲ್ದಾರ ಡಾ. ಮೋಹನ ಭಸ್ಮೆ ಹೇಳಿದರು.

ಇತ್ತೀಚೆಗೆ ನಗರದ ನಗರಸಭೆ ಸಮುದಾಯ ಭವನದಲ್ಲಿ ಪೊಲೀಸ್ ಇಲಾಖೆ ವತಿಯಿಂದ ಹಮ್ಮಿಕೊಂಡ ಶಾಂತಿ ಪಾಲನಾ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಪ್ರತಿ ಹಬ್ಬದ ಹಿಂದೆ ಪೌರಾಣಿಕ, ಐತಿಹಾಸಿಕ ಹಿನ್ನೆಲೆ ಇರುತ್ತದೆ. ಹಬ್ಬಗಳನ್ನು ಸೌಹಾರ್ದತೆಯಿಂದ ಆಚರಿಸಬೇಕು. ಇನ್ನೊಬ್ಬರ ಭಾವನೆಗೆ ಧಕ್ಕೆ ತರುವುದಾಗಲಿ ಅವಹೇಳನ ಮಾಡುವುದಾಗಲಿ ಮಾಡಬಾರದು ಶಾಂತಿ ಸುವ್ಯವಸ್ಥೆ ಕದಡುವ ಕೆಲಸ ಮಾಡಬಾರದು ಎಂದ ಅವರು ಸಾರ್ವಜನಿಕವಾಗಿ ವಿವಿಧ ಸಂಘ ಸಂಸ್ಥೆಗಳು ಗಣೇಶ ಪ್ರತಿಷ್ಠಾಪಿಸುವ ಮುನ್ನ ಪಾಲಿಸಬೇಕಾದ ನಿಯಮ ಹಾಗೂ ನಿಬಂಧನಗಳನ್ನು ಚಾಚೂ ತಪ್ಪದೆ ಪಾಲಿಸಬೇಕು, ಪೊಲೀಸ್‌ ಇಲಾಖೆಯ ಅನುಮತಿ ಕಡ್ಡಾಯವಾಗಿರಬೇಕು, ಯಾವುದೇ ಗಣೇಶ ಸಂಘ ಸಂಸ್ಥೆಯವರು, ಗಣೇಶ ಹಬ್ಬವನ್ನು ಶ್ರದ್ಧಾ-ಭಕ್ತಿಯಿಂದ ಶಾಂತಿ ಮತ್ತು ಸೌಹಾರ್ಧತೆಯ ಸಂಕೇತವಾಗಿ ಆಚರಿಸಬೇಕು. ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕು, ಪೊಲೀಸ್ ಇಲಾಖೆಯ ಆದೇಶಗಳನ್ನು ಚಾಚು ತಪ್ಪದೆ ಪಾಲಿಸುವ ಮೂಲಕ ಪೊಲೀಸರೊಂದಿಗೆ ಸಹಕರಿಸಬೇಕು ಜೊತೆಗೆ ಗಣೇಶೋತ್ಸವಗಳು ಸಾರ್ವಜನಿಕರ ಪ್ರಸಂಶೆಗೆ ಪಾತ್ರವಾಗುವಂತಾಗಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಡಿ.ವಾಯ್.ಎಸ.ಪಿ. ರವಿ ನಾಯಿಕ, ಸಿಪಿಐ ಸುರೇಶ್ ಬಾಬು, ಹೆಸ್ಕಾಂ ಅಧಿಕಾರಿ ಎಸ್.ಪಿ.ವರಾಳೆ, ಪಿ.ಎಸ್.ಐ ಕೆ.ವಾಲಿಕರ, ನಗರಸಭೆ ಅಧ್ಯಕ್ಷ ಪ್ರಕಾಶ ಮುರಾರಿ, ಪೌರಾಯುಕ್ತ ರವಿ ರಂಗಸುಭೆ, ಎಂ.ಎಚ್.ಗಜಾಕೋಶ, ನಗರಸಭೆ ಸದಸ್ಯ ಕುತಬುದ್ದೀನ ಗೋಕಾಕ,ಪ್ರಭು ಚವ್ಹಾಣ, ಶಿವು ಪಾಟೀಲ ಉಪಸ್ಥಿತರಿದ್ದರು.

Related posts: